Sunday, November 24, 2024
ಸುದ್ದಿ

ಈ ವರ್ಷ ಗರ್ಭಿಣಿಯರಲ್ಲಿ ಎಚ್‌ಐವಿ ಪಾಸಿಟಿವ್ ಪ್ರಕರಣ ಶೂನ್ಯ – ಕಹಳೆ ನ್ಯೂಸ್

ಉಡುಪಿ : ಜಿಲ್ಲೆಯಲ್ಲಿ 2022-2023ನೇ (ಅಕ್ಟೋಬರ್‌ವರೆಗೆ) ಸಾಲಿನಲ್ಲಿ ಪರೀಕ್ಷೆಗೆ ಒಳಪಟ್ಟ 11733 ಗರ್ಭಿಣಿಯರ ಪೈಕಿ ಒಬ್ಬರಲ್ಲೂ ಎಚ್‌ಐವಿ ಪಾಸಿಟಿವ್ ಕಂಡುಬಂದಿಲ್ಲ. ಕಳೆದ ವರ್ಷ ಜಿಲ್ಲೆಯಲ್ಲಿ 6 ಮಂದಿ ಎಚ್‌ಐವಿ ಸೋಂಕಿತ ಗರ್ಭಿಣಿಯರು ಪತ್ತೆಯಾಗಿದ್ದರೆಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಉಡುಪಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 2022-23 (ಅಕ್ಟೋಬರ್‌ವರೆಗೆ)ನೇ ಸಾಲಿನಲ್ಲಿ 58801 ಮಂದಿಯನ್ನು ಎಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದರಲ್ಲಿ 137 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 2021-22ನೆ ಸಾಲಿನಲ್ಲಿ 183, 2020-21ನೇ ಸಾಲಿನಲ್ಲಿ 189 ಮಂದಿಯಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿತ್ತು ಎಂದರು.

ಉಡುಪಿ ಜಿಲ್ಲೆಯಲ್ಲಿ 2016ರಿಂದ ಈವರೆಗೆ ಗರ್ಭಿಣಿ ತಾಯಿಯಿಂದ ಮಗುವಿಗೆ ಎಚ್‌ಐವಿ ಸೋಂಕು ಹರಡಿರುವ ಬಗ್ಗೆ ವರದಿಯಾಗಿಲ್ಲ. ಜಿಲ್ಲೆಯ ಉಡುಪಿ ಎಆರ್‌ಟಿ ಸೆಂಟರ್‌ನಲ್ಲಿ 2607, ಕುಂದಾಪುರ ಎಆರ್‌ಟಿ ಸೆಂಟರ್ ನಲ್ಲಿ 1293 ಹಾಗೂ ಕೆಎಂಸಿ ಮಣಿಪಾಲ ಸೆಂಟರ್‌ನಲ್ಲಿ 81 ಮಂದಿ ಸೇರಿದಂತೆ ಒಟ್ಟು 3981 ಮಂದಿ ಎಚ್‌ಐವಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದರು. ಈ ವರ್ಷದ 137 ಎಚ್‌ಐವಿ ಸೋಂಕಿತರ ಪೈಕಿ 46 ಮಂದಿ ಹೊರ ಜಿಲ್ಲೆ ಹಾಗೂ ಮೂರು ಮಂದಿ ಹೊರ ರಾಜ್ಯದವರಾಗಿದ್ದಾರೆ. ಈ ವರ್ಷ ಜಿಲ್ಲೆಯಲ್ಲಿ 48 ಮಂದಿ ಎಚ್‌ಐವಿ ಸೋಂಕಿತರು ಮೃತಪಟ್ಟಿದ್ದು, ಕಳೆದ ವರ್ಷ 90 ಜನ ಮರಣ ಹೊಂದಿದ್ದರು ಎಂದು ಡಾ.ನಾಗಭೂಷಣ ಉಡುಪ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ಮಂದಿ ಎಚ್‌ಐವಿ ಸೋಂಕಿತರು ಮೃತಪಟ್ಟಿದ್ದು, ಕಳೆದ ವರ್ಷ 90 ಜನ ಮರಣ ಹೊಂದಿದ್ದರು ಎಂದು ಡಾ.ನಾಗಭೂಷಣ ಉಡುಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಚಿದಾನಂದ ಸಂಜು ಎಸ್.ವಿ.ಉಪಸ್ಥಿತರಿದ್ದರು