Sunday, January 19, 2025
ಉಡುಪಿಬೆಂಗಳೂರುಸುದ್ದಿ

ಮುಸ್ಲಿಂ ಕಾಲೇಜು ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ ; ಕೇಸರಿ ಕಾಲೇಜು ಬೇಕೆಂದು ಹಿಂದು ಸಂಘಟನೆಗಳ ಪಟ್ಟು – ಕಹಳೆ ನ್ಯೂಸ್

ಬೆಂಗಳೂರು: ಮುಸ್ಲಿಂ ಕಾಲೇಜು ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ ಶುರುವಾಗಿದ್ದು, ನಮಗೆ ಕೇಸರಿ ಕಾಲೇಜು ಬೇಕು ಅಂತಾ ಹಿಂದು ಸಂಘಟನೆಗಳು ಪಟ್ಟು ಹಿಡಿದಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಬುದ್ಧಿ ಇದೇನ್ರೀ? ಯಾರ ವೋಟು ಪಡೆಯಲು ಈ ರೀತಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ.

ನಮ್ಮದು ಹಿಂದುತ್ವದ ಪಕ್ಷ, ಹಿಂದೂತ್ವಕ್ಕಾಗಿ ನಮ್ಮ ಉಸಿರು ಎಂದು ಹೇಳಿಕೊಂಡು ಬಂದಿರುವ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿಗಳಾಗಿ ಈ ರೀತಿ ನಿಲುವುಗಳನ್ನು ತೆಗೆದುಕೊಂಡರೆ ಅವರನ್ನು ನೀವೇ ಬೆಳೆಸಿದ ಹಾಗೆ ಆಗುತ್ತದೆ ಮತ್ತು ಅವರ ಇಸ್ಲಾಮಿಕ್ ರಾಷ್ಟ್ರದ ಗುರಿಗೆ ನೀವೇ ಕಾರಣ ಭೂತರಾಗುತ್ತೀರಿ.

ನಮಗೆ ಪ್ರತ್ಯೇಕವಾಗಿ ಹಾಸ್ಪಿಟಲ್, ಹಾಸ್ಟೆಟ್​ಗಳನ್ನು ನೀಡಿ, ನಮ್ಮದೇ ಒಂದು ನಗರ ನೀಡಿ, ನಮಗೆ ಒಂದು ಸಪರೇಟ್ ರಸ್ತೆ ಕೊಡಿ ಅಂತಾ ಇದೇ ರೀತಿ ಅವರು ಕೇಳಿಕೊಂಡು ಹೋಗುತ್ತಾರೆ, ನೀವು ಕೊಡುತ್ತಾ ಹೋಗಿ, ಆ ರೀತಿ ಮಾಡುವುದೇ ಆದರೆ ನಮಗೂ ಕೂಡ ಕೇಸರಿ ಕಾಲೇಜು ಬೇಕು. ಹಿಂದೂಗಳ ಕಾಲೇಜು ಬೇಕು. ಹಿಂದುಗಳ ಹಾಸ್ಪಿಟಲ್ ಬೇಕು, ಹಿಂದುಗಳ ಹಾಸ್ಟೆಲ್ ಬೇಕು, ಹಿಂದೂ ರಾಷ್ಟ್ರ ಕಟ್ಟುವ ಕಾಲೇಜು ಬೇಕು, ಹಿಂದು ಹೆಣ್ಣುಮಕ್ಕಳ ರಕ್ಷಣೆ ಮಾಡುವ ಕಾಲೇಜು ಬೇಕು ಅಂತಾ ಹಿಂದು ಸಂಘಟನೆಗಳು ಒತ್ತಾಯ ಮಾಡುತ್ತಿದೆ.

ಪಠ್ಯ ಪುಸ್ತಕಗಳಲ್ಲಿಯೂ ಹಿಂದೂತ್ವದ ಹಿನ್ನೆಲೆ ಇರುವ ಪಾಠಗಳೇಬೇಕು. ಹಿಂದುತ್ವದ ಹಿನ್ನೆಲೆ ಇರುವ ಪ್ರಾಧ್ಯಾಪಕರು ಬೇಕು. ಆ ಕಾಲೇಜಿಗೆ ಕೇಸರಿ ಬಣ್ಣ ಬಳದಿರಬೇಕು. ಎಲ್ಲಾ ವಿದ್ಯಾರ್ಥಿಗಳು ಕೇಸರಿ ಬಣ್ಣದ ವೇಷಭೂಷಣ ಇರಬೇಕು. ಶಾಲೆಯಲ್ಲಿ ಎಲ್ಲಾ ಫೋಟೋಗಳು ಹಿಂದು ಧರ್ಮದ ಫೋಟೋಗಳೇ ಇರಬೇಕು. ಇದೆಲ್ಲಾ ನಮಗೆ ಪ್ರತ್ಯೇಕವಾಗಿ ನೀಡುವುದಾದರೆ ಅವರಿಗೂ ಕಾಲೇಜು ಮಾಡಿಕೊಡಿ ಎಂದು ಹಿಂದುಪರ ಸಂಘಟನೆಗಳು ಪಟ್ಟು ಹಿಡಿದಿವೆ.