Friday, September 20, 2024
ಸುದ್ದಿ

ವಿವೇಕಾನಂದದಲ್ಲಿ 39ನೇ ಮಾನ್ಸೂನ್ ಚೆಸ್ ಪಂದ್ಯಾಟಕ್ಕೆ ಚಾಲನೆ ಮೆದುಳಿನ ಶಕ್ತಿ ಹೆಚ್ಚಿಸಲು ಚೆಸ್ ಸಹಕಾರಿ : ಪ್ರೊ.ಜೀವನ್ ದಾಸ್

ಪುತ್ತೂರು: ಚೆಸ್ ಆಡುವುದರಿಂದ ಮನಸ್ಸಿಗೆ ಸಂತೋಷ, ಬುದ್ಧಿಗೆ ಆಹಾರ ಎರಡೂ ದೊರೆಯುತ್ತದೆ. ಇದೊಂದು ಸವಾಲಿನ ಆಟ. ನಮ್ಮ ಮೆದುಳಿನ ಶಕ್ತಿಯನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ. ಭಾರತ ದೇಶದಲ್ಲಿ ಇದರ ಉಗಮವಾಯಿತು ಎಂದು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಜೀವನ್ ದಾಸ್ ಹೇಳಿದರು.
ಅವರು ವಿವೇಕಾನಂದ ಪದವಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ವಿಭಾಗದ ಆಶ್ರಯದಲ್ಲಿ ನಡೆದ 39ನೇ ವರ್ಷದ ಮಾನ್ಸೂನ್ ಚೆಸ್ ಪದ್ಯಾಂಟವನ್ನು ಉದ್ಘಾಟಿಸಿ ಗುರುವಾರ ಮಾತನಾಡಿದರು.

ಜೀವನದಲ್ಲಿ ಕಷ್ಟಗಳು ಎದುರಾಗುತ್ತಿರುತ್ತವೆ. ಆದರೆ ಅದನ್ನು ಹೇಗೆ ನಿವಾರಿಸಬೇಕೆಂಬ ನೈಪುಣ್ಯತೆ ನಮ್ಮಲ್ಲಿರಬೇಕು. ಸರಕಾರವು ಇಂದು ಚೆಸ್ ಆಟಕ್ಕೆ ಹೆಚ್ಚಿನ ಮಾನ್ಯತೆಯನ್ನು ನೀಡುತ್ತಿದೆ. ಪ್ರತಿಯೊಬ್ಬ ವಿದ್ಯಾರ್ಥಿಯು ಚೆಸ್ ಕಲಿಯಬೇಕು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಾಲೇಜಿನ ಪ್ರಾಚಾರ್ಯ ಡಾ. ಪೀಟರ್ ವಿಲ್ಸನ್ ಪ್ರಭಾಕರ್ ಮಾತನಾಡಿ ಯಶಸ್ಸುಗಳಿಸಲು ಏಕಾಗ್ರತೆ ಬಹುಮುಖ್ಯ. ಚೆಸ್ ಆಟದ ನೀತಿಗಳನ್ನು ನಮ್ಮ ಜೀವನದಲ್ಲಿ ರೂಢಿಸಿಕೊಂಡರೆ ಮುಂದಿನ ಭವಿಷ್ಯಕ್ಕೆ ದಾರಿ ಮಾಡಿಕೊಡಲಿದೆ. ಆಟದಲ್ಲಿ ಸೋಲು, ಗೆಲುವು ಸಾಮಾನ್ಯ. ಆಟವನ್ನು ಗೆಲ್ಲಬೇಕಾದರೆ ಶ್ರಮ ಮತ್ತು ಏಕಾಗ್ರತೆ ಅತ್ಯಗತ್ಯ ಎಂದರು.

ಜಾಹೀರಾತು

ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿ ಸಂಚಾಲಕ ಎಂ.ಟಿ. ಜಯರಾಮ್ ಭಟ್ ಮಾತನಾಡಿ ಹನುಮಂತನಂತೆ ಏಕಾಗ್ರತೆ ಮತ್ತು ಶಕ್ತಿಯನ್ನು ಬೆಳೆಸಿಕೊಂಡಾಗ ಚೆಸ್ ಆಟವನ್ನು ಸುಲಭವಾಗಿ ಆಡಬಹುದು. ಚೆಸ್ ಆಟ ಆಡುವ ಸ್ಪರ್ಧಿಗಳ ಬುದ್ಧಿಶಕ್ತಿಯು ಉಳಿದವರಿಗಿಂತ ಉನ್ನತ ಮಟ್ಟದಲ್ಲಿರುತ್ತದೆ. ಬುದ್ಧಿವಂತಿಕೆ ಆಟಕ್ಕೆ ಮಾತ್ರ ಸೀಮಿತವಾಗದೆ ದೇಶದ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಬಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.

ಡೆರಿಕ್ ಚೆಸ್ಸ್ ಶಾಲೆಯ ನಿರ್ವಾಹಕ ಪ್ರಸನ್ನ ರಾವ್, ದೈಹಿಕ ನಿರ್ದೇಶಕಿ ಡಾ.ಜ್ಯೋತಿ ಕುಮಾರಿ ಉಪಸ್ಥಿತರಿದ್ದರು. ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ರವಿಶಂಕರ್ ಸ್ವಾಗತಿಸಿ, ಶಿಕ್ಷಕ ಯತೀಶ್ ವಂದಿಸಿದರು. ವಿದ್ಯಾರ್ಥಿನಿ ಅಂಕಿತ ಪ್ರಾರ್ಥಿಸಿದರು.