Sunday, January 19, 2025
ಕ್ರೈಮ್ರಾಷ್ಟ್ರೀಯಸುದ್ದಿ

15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮುಸ್ಲಿಂ ಹುಡುಗಿಯರು ತನ್ನಿಷ್ಟದ ಹುಡುಗನೊಂದಿಗೆ ಮದುವೆಯಾಗಬಹುದು ; ಜಾರ್ಖಂಡ್ ಹೈಕೋರ್ಟ್ ತೀರ್ಪು – ಕಹಳೆ ನ್ಯೂಸ್

ರಾಂಚಿ(ಡಿ.01): ಮುಸ್ಲಿಂ (Muslim) ವೈಯಕ್ತಿಕ ಕಾನೂನನ್ನು ಉಲ್ಲೇಖಿಸಿ, ಜಾರ್ಖಂಡ್ ಹೈಕೋರ್ಟ್ (Jharkhand High Court) ತನ್ನ ತೀರ್ಪಿನಲ್ಲಿ 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ಮುಸ್ಲಿಂ ಹುಡುಗಿಯರು ತಮ್ಮ ಪೋಷಕರ ಹಸ್ತಕ್ಷೇಪವಿಲ್ಲದೆ ಅವರು ಬಯಸಿದ ವ್ಯಕ್ತಿಯನ್ನು ಮದುವೆಯಾಗಲು ಸ್ವಾತಂತ್ರ್ಯವನ್ನು ಹೊಂದಿದ್ದಾರೆ ಎಂದು ಹೇಳಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತನ್ನ ಸಮುದಾಯದ 15 ವರ್ಷದ ಹುಡುಗಿಯನ್ನು ಮದುವೆಯಾದ ಮುಸ್ಲಿಂ ಯುವಕನ ವಿರುದ್ಧ ದಾಖಲಾಗಿರುವ ಎಫ್‌ಐಆರ್ (FIR) ಆಧಾರದ ಮೇಲೆ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಪಡಿಸುವ ಸಂದರ್ಭದಲ್ಲಿ ನ್ಯಾಯಾಲಯವು ಹೀಗೆ ಹೇಳಿದೆ.

ಎಫ್‌ಐಆರ್‌ನಲ್ಲಿ, ಬಿಹಾರದ ನಾವಡಾ ನಿವಾಸಿ 24 ವರ್ಷದ ಮೊಹಮ್ಮದ್ ಸೋನು, ಜಾರ್ಖಂಡ್‌ನ ಜಮ್ಶೆಡ್‌ಪುರದ ಜುಗ್ಸಾಲೈನಿಂದ 15 ವರ್ಷದ ಮುಸ್ಲಿಂ ಹುಡುಗಿಯನ್ನು ಮದುವೆಯಾಗುವುದಾಗಿ ಆಮಿಷ ಒಡ್ಡಿದ ನಂತರ ಅಪಹರಣ ಮಾಡಿದ ಆರೋಪ ಹೊರಿಸಲಾಗಿತ್ತು.

ಮದುವೆಗೆ ವಿರೋಧವಿಲ್ಲ ಎಂದ ಬಾಲಕಿಯ ತಂದೆ

ಬಾಲಕಿಯ ತಂದೆ ಸಲ್ಲಿಸಿದ ಎಫ್‌ಐಆರ್ ಆಧರಿಸಿ ಸೋನು ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕ್ರಿಯೆಗಳನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದರು. ಆದರೆ, ವಿಚಾರಣೆ ವೇಳೆ ಬಾಲಕಿಯ ತಂದೆ ಮದುವೆಗೆ ವಿರೋಧವಿಲ್ಲ ಎಂದು ಹೇಳಿದ್ದಾರೆ. ತನ್ನ ಮಗಳಿಗೆ “ಸೂಕ್ತ ಗಂಡನ ಹುಡುಕಾಟವನ್ನು ಪೂರ್ಣಗೊಳಿಸಿದ್ದಕ್ಕಾಗಿ” ಅಲ್ಲಾಹನಿಗೆ ಧನ್ಯವಾದ ಅರ್ಪಿಸಿದ ಹುಡುಗಿಯ ತಂದೆ, “ಕೆಲವು ತಪ್ಪು ತಿಳುವಳಿಕೆಯಿಂದಾಗಿ” ಮೊಹಮ್ಮದ್ ಸೋನು ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು. ವಾಸ್ತವವಾಗಿ, ಎರಡೂ ಕುಟುಂಬಗಳು ಮದುವೆಯನ್ನು ಒಪ್ಪಿಕೊಂಡಿವೆ ಎಂದು ಹುಡುಗಿಯ ಕುಟುಂಬದ ಪರ ವಕೀಲ ತಿಳಿಸಿದ್ದಾರೆ.

ಎರಡೂ ಕಡೆಯ ವಾದ ಆಲಿಸಿದ ನ್ಯಾಯಮೂರ್ತಿ ಎಸ್.ಕೆ. ದ್ವಿವೇದಿ ಅವರ ಏಕಾಂಗಿ ಪೀಠವು ಸೋನು ವಿರುದ್ಧ ದಾಖಲಾಗಿರುವ ಎಫ್‌ಐಆರ್ ಮತ್ತು ಅದರ ಆಧಾರದ ಮೇಲೆ ಆರಂಭಿಸಲಾದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಆದೇಶಿಸಿದೆ. ಬಾಲಕಿಯ ತಂದೆ ಸೋನು ವಿರುದ್ಧ ಐಪಿಸಿ ಸೆಕ್ಷನ್ 366ಎ ಮತ್ತು 120ಬಿ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆ

ಮುಸ್ಲಿಂ ಯುವತಿಯರ ವಿವಾಹಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ನಿಯಂತ್ರಿಸುತ್ತದೆ ಎಂದು ಹೈಕೋರ್ಟ್ ಬುಧವಾರ ತನ್ನ ತೀರ್ಪಿನಲ್ಲಿ ಹೇಳಿದೆ. ಈ ನಿರ್ದಿಷ್ಟ ಪ್ರಕರಣದ ಸಂದರ್ಭದಲ್ಲಿ, ಹುಡುಗಿಗೆ 15 ವರ್ಷ ವಯಸ್ಸಾಗಿದೆ ಮತ್ತು ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಅವಳು ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಲು ಸ್ವತಂತ್ರಳು ಎಂದು ನ್ಯಾಯಾಲಯವು ಸೇರಿಸಿದೆ.