Sunday, January 19, 2025
ಬೆಂಗಳೂರುರಾಜ್ಯಸುದ್ದಿ

ಲವ್ ಜಿಹಾದ್ ; ಎಂಗೇಜ್ಮೆಂಟ್ ಆಗಿದ್ದ ಹಿಂದೂ ಯುವತಿಯನ್ನು ರಾತ್ರೋ ರಾತ್ರಿ ಹೈದ್ರಾಬಾದ್​ಗೆ ಹೊತ್ತೊಯ್ದ ಮುಸ್ಲಿಂ ಯುವಕ ; ಮಗಳ ಬ್ರೈನ್ ವಾಷ್ ಮಾಡಲಾಗಿದೆ ಎಂದ ಪೋಷಕರು..! – ಕಹಳೆ ನ್ಯೂಸ್


ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ರಾಯಚೂರು: ದಿನದಿಂದ ದಿನಕ್ಕೆ ಲವ್ ಜಿಹಾದ್ ಪ್ರಕರಣಗಳು ಒಂದೊಂದಾಗೇ ಬೆಳಕಿಗೆ ಬರುತ್ತಿವೆ. ಇದೀಗ ಬಳ್ಳಾರಿಯ ಮೂಲದ ಯುವಕನ ಜತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವತಿಯೊಬ್ಬಳು, ಅನ್ಯಕೋಮಿನ ಯುವಕನ ಜತೆಗೆ ಪರಾರಿಯಾಗಿರುವ ಘಟನೆ ನಡೆದಿದೆ.

ಈ ಬಗ್ಗೆ ಯುವತಿಯ ಪೋಷಕರಾದ ಬಾಳಪ್ಪ ಹಾಗೂ ನಾಗಮ್ಮ ದಂಪತಿ ನೇತಾಜಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಸಿದ್ದಾರೆ.

ಯುವತಿಗೆ ಅದಾಗಲೇ ನಿಶ್ಚಿತಾರ್ಥವಾಗಿತ್ತು. ಮನೆಮಂದಿಯೆಲ್ಲಾ ಮದುವೆಯ ಸಿದ್ಧತೆಯಲ್ಲಿದ್ದರು. ಆದರೆ ಯುವತಿ ಮಾತ್ರ, ಇನ್ನೇನು ತನ್ನ ಮದುವೆಗೆ ಒಂದು ತಿಂಗಳು ಇದೇ ಎನ್ನುವಾಗಲೇ ಅನ್ಯಕೋಮಿನ ಯುವಕನ ಜತೆಗೆ ರಾತ್ರೋ ರಾತ್ರಿ ಪರಾರಿಯಾಗಿದ್ದಾಳೆ.

ಹೂವಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರೆಹಾನ್​ಗೆ ಭಾರತಿ ಎಂಬ ಯುವತಿಯ ಪರಿಚಯವಾಗಿದೆ. ಈ ಪರಿಚಯ ನಿಧಾನವಾಗಿ ಪ್ರೀತಿಗೆ ತಿರುಗಿದೆ. ಭಾರತಿಗೆ ಮನೆಯಲ್ಲಿ ಮದುವೆ ನಿಶ್ಚಯವಾಗುತ್ತಿದ್ದಂತೆ, ಈ ಜೋಡಿ ಯಾರಿಗೂ ಅನುಮಾನ ಬಾರದಂತೆ ಮನೆ ಬಿಟ್ಟು ಹೋಗಿದ್ದಾರೆ. ಹೈದ್ರಾಬಾದ್​ಗೆ ತೆರಳಿ ಅನ್ಯಕೋಮಿನ ಸಂಪ್ರದಾಯದಂತೆ ಮದುವೆಯಾಗಿದ್ದಾರೆ.

ರೆಹಾನ್​​​ ವಿರುದ್ಧ ಬಾಳಪ್ಪ ಹಾಗೂ ನಾಗಮ್ಮ ದಂಪತಿ ಪೊಲೀಸ್​ ಠಾಣೆ ಮೆಟ್ಟಿಲೇರುತ್ತಿದ್ದಂತೆ, ರೆಹಾನ್‌ ಮತ್ತು ಭಾರತಿ ಇಬ್ಬರೂ ಠಾಣೆಗೇ ಬಂದಿದ್ದಾರೆ. ಬರೋವಾಗ ಬುರ್ಕಾ ಹಾಕಿಕೊಂಡು ಬಂದಿದ್ದಾಳೆ ಭಾರತಿ. ಈ ಜೋಡಿ ತಾವು ಟ್ರಿಪ್​​ಗೆ ಹೋಗಿದ್ದಾಗಿನ ಫೋಟೊಗಳನ್ನು ಪೊಲೀಸರಿಗೆ ತೋರಿಸಿದ್ದಾರೆ. ಫೋಟೋದಲ್ಲೂ ಇಬ್ಬರೂ ನಗುನಗುತ್ತಲೇ ಫೋಸ್ ಕೊಟ್ಟಿದ್ದಾರೆ.

ಆದರೆ ಭಾರತಿ ಪೋಷಕರು ಮಾತ್ರ, ನಮ್ಮ ಮಗಳ ಬ್ರೈನ್ ವಾಷ್ ಮಾಡಿ ಲವ್ ಜಿಹಾದ್ ನಡೆದಿದೆ ಎಂದು ಹೇಳುತ್ತಿದ್ದಾರೆ. ಆದರೆ ರೆಹಾನ್ ಮತ್ತು ಭಾರತಿ ಜೋಡಿ, ತಾವು ಪರಸ್ಪರ ಒಪ್ಪಿಗೆ ಮೇರೆಗೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಎಂದು ಹೇಳಿದ್ದಾರೆ. ಈ ಪ್ರಕರಣ ಲವ್ ಜಿಹಾದ್​​​ಗೆ ಸಂಬಂಧಿಸಿದ್ದೋ, ಅಥವಾ ಯುವಕ-ಯುವತಿ ತಮ್ಮಿಷ್ಟದಂತೆ ಮದುವೆಯಾಗಿದ್ದಾರೋ ಎಂಬುದು, ಪೊಲೀಸ್ ವಿಚಾರಣೆಯ ನಂತರ ಬಯಲಾಗಲಿದೆ.