Recent Posts

Sunday, January 19, 2025
ಕ್ರೈಮ್ಸುದ್ದಿ

ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ; ಸುಲಭವಾಗಿ ಹಣ ಮಾಡಿ ಲಕ್ಷುರಿ ಜೀವನ ನಡೆಸಲು ಕೀಳುಮಟ್ಟಕ್ಕೆ ಇಳಿದಿದ್ದ ಮಹಿಳೆ..! – ಕಹಳೆ ನ್ಯೂಸ್

ರಂಗಾರೆಡ್ಡಿ: ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿರುವುದಾಗಿ ತೆಲಂಗಾಣದ ರಾಚಕೊಂಡ ಪೊಲೀಸ್​ ಆಯುಕ್ತ ಮಹೇಶ್​ ಭಾಗವತ್ ತಿಳಿಸಿದ್ದಾರೆ. ಬಂಧಿತರನ್ನು ವಿಶಾಖಪಟ್ಟಣದ ಗಂಧಾ ಭವಾನಿ (25) ಮತ್ತು ಆಕೆಯ ಸ್ನೇಹಿತ ಅಣ್ಣಾವರಂನ ಕಾಸಿರೆಡ್ಡಿ ದೊರಬಾಬು (23) ಎಂದು ಗುರುತಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತೆಲಂಗಾಣದ ಮೀರಪೇಟೆಯ ಟಿಕೆಆರ್​ ಕಾಲೇಜು ಬಳಿ ಇರುವ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಸುಲಭವಾಗಿ ಹಣ ಸಂಪಾದನೆ ಮಾಡಲು ಮತ್ತು ಐಷಾರಾಮಿ ಜೀವನ ನಡೆಸುವ ಸಲುವಾಗಿ ಈ ದಂಧೆಗೆ ಇಳಿದಿದ್ದರು.

ಖಚಿತ ಮಾಹಿತಿ ಮೇರೆಗೆ ಮೀರಪೇಟೆ ಠಾಣಾ ಪೊಲೀಸರು ದಾಳಿ ನಡೆಸಿ, ಭವಾನಿ ಮತ್ತು ಆಕೆಯ ಸ್ನೇಹಿತ ದೊರಬಾಬುವನ್ನು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಮಹಿಳೆಯರನ್ನು ಸಹ ರಕ್ಷಣ ಮಾಡಲಾಗಿದೆ.

ಆರೋಪಿಗಳಿಬ್ಬರ ವಿರುದ್ಧ ಪಿಡಿ ಕಾಯ್ದೆಯಡಿ ಪ್ರಕರಣ ದಾಖಲಿಸಿರುವ ಮೀರಪೇಟೆ ಪೊಲೀಸರು ಇಬ್ಬರು ಜೈಲಿಗೆ ಕಳುಹಿಸಿದ್ದಾರೆ. (ಏಜೆನ್ಸೀಸ್​)