Recent Posts

Sunday, January 19, 2025
ಸುದ್ದಿ

Breaking News : ಬಜರಂಗದಳದ ಬಗ್ಗೆ ಅಪಪ್ರಚಾರ ; ವಿಟ್ಲದಲ್ಲಿ ಹಿಂದೂ ವಿರೋಧಿ ” ವಾರ್ತಾ ಭಾರತಿ ” ಪತ್ರಿಕೆ ಸುಟ್ಟು ಬಜರಂಗದಳ ಆಕ್ರೋಶ – ಕಹಳೆ ನ್ಯೂಸ್

ವಿಟ್ಲ : ಕಡಂಬು ಎಂಬಲ್ಲಿ ನಡೆದ ಅಕ್ರಮ ಗೋಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿರುವ ಶಶಿ ಕುಮಾರ್ ಭಜರಂಗದಳದ ಯಾವುದೇ ಘಟಕದ ಕಾರ್ಯಕರ್ತನಲ್ಲ ಎಂಬುದಾಗಿ ಸ್ಪಷ್ಟ ಪ್ರಕಟಣೆ ಕೊಟ್ಟ ನಂತರ ಎಲ್ಲಾ ಪತ್ರಿಕೆಯವರು ಸ್ಪಷ್ಟೀಕರಣ ನೀಡಿದ್ದಾರೆ, ಆದರೆ ವಾರ್ತಾ ಭಾರತಿ ಪತ್ರಿಕೆ ಮಾತ್ರ ಶಶಿ ಕುಮಾರ ಭಜರಂಗದಳದ ಕಾರ್ಯಕರ್ತ ಎಂದು ಪುನಃ ಸುಳ್ಳು ಸುದ್ದಿ ಪ್ರಕಟಿಸಿದೆ.

https://youtu.be/SCM0TZQXYEw

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಿಂದ ಆಕ್ರೋಶಗೊಂಡ ಭಜರಂಗದಳದ ಕಾರ್ಯಕರ್ತರು ವಿಟ್ಲ ನಗರದಲ್ಲಿ ವಾರ್ತಾ ಭಾರತಿ ಪತ್ರಿಕೆ ಪ್ರತಿಗಳಿಗೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಿದರು. ಪತ್ರಿಕಾ ಧರ್ಮವನು ಮೀರಿ ಸುಳ್ಳು ಸುದ್ದಿ ಹಬ್ಬಿಸಿದ ‘ವಾರ್ತಾ ಭಾರತಿ’ ಪತ್ರಿಕೆಯನ್ನು ಸುಟ್ಟು ಹಾಕುವ ಮೂಲಕ ಸಾಂಕೇತಿಕವಾಗಿ ಪ್ರತಿಭಟಿಸಿದ ಭಜರಂಗದಳದ ಕಾರ್ಯಕರ್ತರು ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದೆ ಪತ್ರಿಕಾ ಧರ್ಮವನ್ನು ಮೀರಿ ಹಿಂದೂ ಸಂಘಟನೆಯಾದ ಭಜರಂಗದಳದ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುವ ಕೆಲಸ ಮಾಡುವ ಎಲ್ಲಾ ಪತ್ರಿಕೆಗಳನ್ನು ಬೆಂಕಿಗೆ ಅರ್ಪಣೆ ಮಾಡುವುದಲ್ಲದೆ, ಹಿಂದುಗಳೆಲ್ಲಾ ಸಾಮೂಹಿಕವಾಗಿ ಬಹಿಷ್ಕರಿಸುತ್ತೇವೆ ಎಂದು ವಿಟ್ಲ ಪ್ರಖಂಡ ಭಜರಂಗದಳ ಸಂಚಾಲಕ ಅಕ್ಷಯ್ ರಜಪೂತ್ ಕಲ್ಲಡ್ಕ ಎಚ್ಚರಿಕೆ ನೀಡಿದ್ದಾರೆ.