Recent Posts

Monday, January 20, 2025
ಸುದ್ದಿ

ಅಂಬಿಕಾ ಪದವಿಪೂರ್ವ ವಿದ್ಯಾಲಯದ ವಾಣಿಜ್ಯ ವಿಭಾಗದಿಂದ ಉಪನ್ಯಾಸ – ಕಹಳೆ ನ್ಯೂಸ್

ಪುತ್ತೂರು: ಜಿಎಸ್‍ಟಿ ಎಂಬುದನ್ನು ನಾನಾ ವಿಧದಲ್ಲಿ ವಿಶ್ಲೇಷಿಸುವವರಿದ್ದಾರೆ. ಆದರೆ ಜಿಎಸ್‍ಟಿ ಜಾರಿಗೆ ಬಂದುದು ಏಕ ರೂಪದ ತೆರಿಗೆ ವ್ಯವಸ್ಥೆಗೆ ಅನುಕೂಲ ಮಾಡಿಕೊಟ್ಟಿರುವುದು ಸತ್ಯ. ಆದ್ದರಿಂದ ಬದಲಾವಣೆಗೆ ನಮ್ಮನ್ನು ನಾವು ಒಗ್ಗಿಸಿಕೊಂಡು ಹೊಸ ತೆರಿಗೆ ವ್ಯವಸ್ಥೆಯ ಅನುಕೂಲತೆಗಳನ್ನು ಪಡೆದುಕೊಳ್ಳಬೇಕು ಎಂದು ಪುತ್ತೂರಿನ ದಾಮೋದರ್ ಅಂಡ್ ಕೊ. ಇದರ ಸಿಎ ದೀಪಕ್ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದಲ್ಲಿ ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ವತಿಯಿಂದ ಆಯೋಜಿಸಲಾದ ಜಿಎಸ್‍ಟಿ ಬಗೆಗಿನ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮಾತ್ರವಲ್ಲದೆ ಈ ಹಿಂದೆ ಯಾವುದೋ ಒಂದು ರಾಜ್ಯದಲ್ಲಿ ತೆರಿಗೆ ಬಗೆಗೆ ಅಧ್ಯಯನ ಮಾಡಿದವರು ಆ ರಾಜ್ಯದಲ್ಲಷ್ಟೇ ಕೆಲಸ ಮಾಡುವುದಕ್ಕೆ ಸಾಧ್ಯವಿರುತ್ತಿತ್ತು. ಯಾಕೆಂದರೆ ಭಿನ್ನವಾದ ತೆರಿಗೆ ವ್ಯವಸ್ಥೆ ಆಯಾ ರಾಜ್ಯಗಳಲ್ಲಿರುತ್ತಿತ್ತು. ಆದರೆ ಈಗ ತೆರಿಗೆ ವಿಷಯದ ಬಗೆಗೆ ಯಾವ ರಾಜ್ಯದಲ್ಲಿ ಅಧ್ಯಯನ ಮಾಡಿದರೂ ದೇಶದ ಯಾವುದೇ ಭಾಗದಲ್ಲಿ ಕೆಲಸ ನಿರ್ವಹಿಸುವುದಕ್ಕೆ ಜಿಎಸ್‍ಟಿ ಅನುಕೂಲ ಮಾಡಿಕೊಟ್ಟಿದೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾ ಎಂ ಮಾತನಾಡಿ ನಮ್ಮನ್ನು ನಾವು ಆಯಾ ಕಾಲಘಟ್ಟಕ್ಕೆ ಹಾಗೂ ವಿಷಯಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಮುಖ್ಯ. ಆಧುನಿಕ ಕಾಲದ ಸ್ಪರ್ಧಾತ್ಮಕ ವಾತಾವರಣದಲ್ಲಿ ಪ್ರತಿಯೊಬ್ಬರೂ ತಮ್ಮನ್ನು ತಾವು ಬೆಳಗಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿ ಜೀವನದಲ್ಲಿ ದೊರಕುವ ವಿವಿಧ ಬಗೆಗೆ ಜ್ಞಾನಾಭಿವೃದ್ಧಿಯ ಅವಕಾಶಗಳನ್ನು ಸದ್ವಿನಿಯೋಗ ಮಾಡಿಕೊಂಡು ಮುಂದುವರೆಯಬೇಕು ಎಂದರು.

ವಿದ್ಯಾರ್ಥಿನಿಯರಾದ ಶರಣ್ಯ, ಅನನ್ಯ ಹಾಗೂ ಸೇವಂತಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಸೃಷ್ಟಿ ಎನ್ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ಅಕ್ಷತಾ ಪ್ರಸ್ತಾವನೆಗೈದರು. ವಿದ್ಯಾರ್ಥಿನಿ ಸಮೃದ್ಧಿ ರೈ ವಂದಿಸಿದರು. ವಿದ್ಯಾಥಿನಿ ನಾಗರತ್ನ ಕಾರ್ಯಕ್ರಮ ನಿರ್ವಹಿಸಿದರು.