Monday, January 20, 2025
ಕ್ರೈಮ್ರಾಷ್ಟ್ರೀಯಸುದ್ದಿ

ಹಾಸ್ಟೆಲ್​ನಲ್ಲಿ ಫೋನ್​ ಮಾಡಿ ಸಿಕ್ಕಿಬಿದ್ದ ವಿದ್ಯಾರ್ಥಿನಿಯನ್ನು ಬೆದರಿಸಿ ನಿರಂತರ ಅತ್ಯಾಚಾರ : ವಿದ್ಯಾರ್ಥಿನಿ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್ ; MLA ಪಿಎ ಸೇರಿ ಮೂವರ ಬಂಧನ – ಕಹಳೆ ನ್ಯೂಸ್

ಹೈದರಾಬಾದ್​: ತೆಲಂಗಾಣದ ವಾರಂಗಲ್ (ಪೂರ್ವ) ಶಾಸಕ ನರೇಂದ್ರ ನನ್ನಪುನೇನಿ ಅವರ ಆಪ್ತ ಸಹಾಯಕ ವೇಮುಲ ಶಿವಕುಮಾರ್​ ಎಂಬುವರನ್ನು ಹನಮಕೊಂಡ ಪೊಲೀಸರು ಅತ್ಯಾಚಾರ ಪ್ರಕರಣದಡಿಯಲ್ಲಿ ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಿವಕುಮಾರ್​ ಜೊತೆಗೆ ಖಾಸಗಿ ಹಾಸ್ಟೆಲ್​ನ ಮ್ಯಾನೇಜರ್ ವೇಮುಲ​ ಶೋಭಾ ಮತ್ತು ಆಕೆಯ ಸೋದರ ಸಂಬಂಧಿ ವೇಮುಲಾ ವಿಜಯ್​ ಕುಮಾರ್​ ಎಂಬುವರನ್ನು ಬಂಧಿಸಲಾಗಿದೆ.

ಮೂವರ ವಿರುದ್ಧ ಅತ್ಯಾಚಾರ ಪ್ರಕರಣ ಮಾತ್ರವಲ್ಲದೆ, ಎಸ್​​ಟಿ ಮತ್ತು ಎಸ್ಸಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸಿದ್ದಿಪೇಟೆ ಜಿಲ್ಲೆಯ ವಿದ್ಯಾರ್ಥಿನಿಯೊಬ್ಬಳು ಹನಮಕೊಂಡದ ಕಾಲೇಜಿನಲ್ಲಿ ಎಲ್‌ಎಲ್‌ಬಿ ಅಂತಿಮ ವರ್ಷ ಓದುತ್ತಿದ್ದಾಳೆ. ಆಕೆ ಸುಬೇದಾರಿ ಏರಿಯಾದ ಖಾಸಗಿ ಹಾಸ್ಟೆಲ್‌ನಲ್ಲಿ ತಂಗಿದ್ದಳು. ವಿದ್ಯಾರ್ಥಿನಿಯು ಆಗಾಗ ಫೋನ್​ನಲ್ಲಿ ಮಾತನಾಡುತ್ತಿದ್ದನ್ನು ಗಮನಿಸಿದ ಹಾಸ್ಟೆಲ್ ಮ್ಯಾನೇಜರ್ ವೇಮುಲ ಶೋಭಾ ಯುವತಿಗೆ ಕಿರುಕುಳ ನೀಡಲು ಆರಂಭಿಸಿದಳು. ತಾನು ಹೇಳಿದ್ದನ್ನು ಮಾಡದಿದ್ದರೆ ಫೋನ್‌ನಲ್ಲಿ ಬೇರೆಯವರೊಂದಿಗೆ ಮಾತನಾಡುತ್ತಿದ್ದ ವಿಚಾರವನ್ನು ಪಾಲಕರಿಗೆ ತಿಳಿಸುವುದಾಗಿ ಬೆದರಿಕೆ ಹಾಕಿದ್ದಳು. ಶೋಭಾ ಬ್ಲಾಕ್‌ಮೇಲ್​ಗೆ ಹೆದರಿದ ವಿದ್ಯಾರ್ಥಿನಿ ಶೋಭಾ ಹೇಳಿದ್ದನ್ನು ಮಾಡಲು ಮುಂದಾದಳು.

ಒಂದು ದಿನ ಶೋಭಾ, ವಿದ್ಯಾರ್ಥಿನಿಯನ್ನು ಪಟ್ಟಣದ ಅಲಂಕಾರ್ ಜಂಕ್ಷನ್ ಬಳಿಯ ಕೊಠಡಿ ಒಂದಕ್ಕೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ವಿಜಯ್ ಕುಮಾರ್ ಎಂಬ ವ್ಯಕ್ತಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಸುಮಾರು ಒಂದು ತಿಂಗಳ ಕಾಲ ಆಕೆಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ವೇಳೆ ಆಕೆಯ ಬೆತ್ತಲೆ ಫೋಟೋ ಮತ್ತು ವಿಡಿಯೋಗಳನ್ನು ರೆಕಾರ್ಡ್​ ಮಾಡಿಟ್ಟುಕೊಂಡ ಆರೋಪಿಗಳು, ಶಾಸಕರ ಆಪ್ತ ಸಹಾಯಕ ಶಿವಕುಮಾರ್ ಅವರಿಗೆ ಸಹಕರಿಸದೇ ಹೋದರೆ, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೋ ಹರಿಬಿಡುವುದಾಗಿ ವಿಜಯ್ ಕುಮಾರ್ ಬೆದರಿಕೆ ಹಾಕಿದ್ದಾರೆ. ಇದಾದ ಬಳಿಕ ವಿಜಯ್ ಕುಮಾರ್ ಮತ್ತು ಶೋಭಾ, ವಿದ್ಯಾರ್ಥಿನಿಯನ್ನು ನಕ್ಕಲಗುಟ್ಟದ ಹೋಟೆಲ್​ಗೆ ಕರೆದೊಯ್ದಿದ್ದಾರೆ. ಅಲ್ಲಿ ಶಾಸಕರ ಪಿಎ ಶಿವಕುಮಾರ್ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಅತ್ಯಾಚಾರದ ನಂತರ ಹೈದರಾಬಾದ್‌ನಲ್ಲಿ ನೆಲೆಸಿರುವ ತನ್ನ ಸ್ನೇಹಿತನ ಬಳಿ ಹೋಗುವಂತೆ ಯುವತಿಗೆ ಪಿಎ ಶಿವಕುಮಾರ್ ಫೋಟೋ, ವಿಡಿಯೋ ತೋರಿಸಿ ಬೆದರಿಕೆ ಹಾಕಿದ್ದಾನೆ. ಇವರ ಕಿರುಕುಳ ಸಹಿಸಲಾಗದೆ ಕೊನೆಗೆ ವಿದ್ಯಾರ್ಥಿನಿ ಇತ್ತೀಚೆಗೆ ಹನಮಕೊಂಡ ಪೊಲೀಸರಿಗೆ ದೂರು ನೀಡಿದ್ದಳು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇತ್ತೀಚೆಗೆ ಹಾಸ್ಟೆಲ್ ಮ್ಯಾನೇಜರ್ ಶೋಭಾ, ವಿಜಯ್ ಕುಮಾರ್ ಹಾಗೂ ಶಿವಕುಮಾರ್ ಎಂಬುವರನ್ನು ಬಂಧಿಸಿದ್ದಾರೆ. ಎಸ್‌ಟಿ ಮತ್ತು ಎಸ್ಸಿ ತಿದ್ದುಪಡಿ ಕಾಯ್ದೆ-2015ರ ಜೊತೆಗೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಪಿ ಕಿರಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಕರಣದಲ್ಲಿ ಹಾಸ್ಟೆಲ್​ ಮ್ಯಾನೇಜರ್ ಶೋಭಾ ಪ್ರಮುಖ ಆರೋಪಿಯಾಗಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದರೆ, ಹೆಚ್ಚಿನ ವಿಷಯಗಳು ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ. ಸಂತ್ರಸ್ತೆಯ ಪಾಲಕರು ಮತ್ತು ಕುಟುಂಬದ ಸದಸ್ಯರು ಈ ಪ್ರಕರಣದಲ್ಲಿ ಆಳವಾದ ತನಿಖೆಯನ್ನು ಬಯಸಿದ್ದಾರೆ. ಆರೋಪಿಗಳಿಗೆ ಶಿಕ್ಷೆಯಾಗಬೇಕು ಮತ್ತು ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸುತ್ತಿದ್ದಾರೆ. (ಏಜೆನ್ಸೀಸ್​)