Monday, January 20, 2025
ಸುದ್ದಿ

ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ : ಸೆಕ್ಸ್ ವೀಡಿಯೋ ಕಳುಹಿಸಿ ಮುಸ್ಲಿಂ ಯುವಕರನ್ನ ಭಯೋತ್ಪಾದನೆಗೆ ಸೆಳೆಯುತ್ತಿದ್ದ ಶಾರೀಕ್..! –ಕಹಳೆ ನ್ಯೂಸ್

ಮಂಗಳೂರು : ಮಂಗಳೂರು ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬAಧಿಸಿದAತೆ ಹಲವು ಸ್ಪೋಟಕ ಮಾಹಿತಿಗಳು ಬಯಲಾಗುತ್ತಿದೆ.
ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣ ಹಿಂದೆ ಆಟೋ ಚಾಲಕ ಸೇರಿ ಹಲವರ ಹತ್ಯೆಗೆ ಸಂಚು ನಡೆಸಲಾಗಿತ್ತು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾರೀಖ್, ಆಟೋ ಚಾಲಕ ಸೇರಿ ಇತರರನ್ನು ಕೊಲೆ ಮಾಡುವ ಉದ್ದೇಶದಿಂದ ಕುಕ್ಕರ್ ಬಾಂಬ್ ಸ್ಪೋಟ ಮಾಡಬೇಕೆಂಬ ಸಂಚು ರೂಪಿಸಿದ್ದ. ಇದಲ್ಲದೇ ದೊಡ್ಡ ಮಟ್ಟದ ಒಳಸಂಚನು ರೂಪಿಸಿದ್ದ ಎಂಬುದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸದ್ಯ ತನಿಖೆಯನ್ನು ಎನ್‌ಐ ಗೆ ವರ್ಗಾಯಿಸಲಾಗಿದ್ದು, ಎನ್‌ಐಎ ಅಧಿಕಾರಿಗಳು ಮಂಗಳೂರು ಸ್ಪೋಟದ ತನಿಖೆ ಬೆನ್ನತ್ತಿದ್ದಾರೆ.
ಇತ್ತೀಚೆಗೆ ಬಯಲಾದ ಮಾಹಿತಿ ಅಂದರೆ ಶಾರೀಕ್ ಮುಸ್ಲಿಂ ಯುವಕರನ್ನು ಸೆಳೆಯಲು ಸೆಕ್ಸ್ ವೀಡಿಯೋವನ್ನು ಕಳುಹಿಸುತ್ತಿದ್ದ ವಿಚಾರ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ಸೆಕ್ಸ್ ವಿಡಿಯೋಗಳಿಂದಲೇ ಕರಾವಳಿ ಭಾಗದ ಹಲವು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ.
ಶಂಕಿತ ಉಗ್ರ ಶಾರೀಖ್ ಮೊಬೈಲ್ ನಲ್ಲಿ ಬರೋಬ್ಬರಿ 500 ಕ್ಕೂ ಹೆಚ್ಚು ಸೆಕ್ಸ್ ವೀಡಿಯೋಗಳು ಪತ್ತೆಯಾಗಿದ್ದು, ಇದನ್ನೇ ಅಸ್ತ್ರವನ್ನಾಗಿಸಿ ಈತ ನೂರಾರು ಮುಸ್ಲಿಂ ಯುವಕರನ್ನು ಉಗ್ರ ಚಟುವಟಿಕೆಗೆ ಸೇರಿಸಿದ್ದಾನೆ ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಹೊರ ಬಿದ್ದಿದೆ ಎನ್ನಲಾಗಿದೆ. ಶಾರೀಕ್ ಹತ್ತಕ್ಕೂ ಹೆಚ್ಚು ಪೋನ್ಗಳನ್ನು ಹೊಂದಿದ್ದು, ಅದನ್ನು ಬಳಕೆ ಮಾಡಿದ ನಂತರ ಮೊಬೈಲನ್ನು ಮಾರಾಟ ಮಾಡುತ್ತಿದ್ದನು ಎನ್ನಲಾಗಿದೆ.
ಮೊದಲು ಯುವಕರ ಮೊಬೈಲ್ ನಂಬರ್ ಕಲೆಹಾಕಿ ಅವರ ಮೊಬೈಲ್ ಗೆ ಸೆಕ್ಸ್ ವಿಡಿಯೋ ಕಳುಹಿಸಿ ಅವರ ಪರಿಚಯ ಮಾಡಿಕೊಂಡು ಇನ್ನಷ್ಟು ಸಲುಗೆ ಬೆಳೆಸಿ ಭಯೋತ್ಪಾದನೆ ವಿಡಿಯೋ ಕಳುಹಿಸುತ್ತಿದ್ದರು. ನಂತರ ಅವರನ್ನು ಭೇಟಿಯಾಗಿ ಉಗ್ರ ಚಟುವಟಿಕೆಗೆ ಸೇರಿಸುತ್ತಿದ್ದನು ಎಂಬ ಸ್ಪೋಟಕ ಮಾಹಿತಿ ಬಯಲಾಗಿದೆ.
ಇನ್ನೂ, ಮತಾಂಧ ಮನಃಸ್ಥಿತಿಯನ್ನು ಹೊಂದಿದ್ದ ಮಹಮ್ಮದ್ ಶಾರೀಕ್ನ ಮೊಬೈಲ್ನಲ್ಲಿ 1 ಸಾವಿರಕ್ಕೂ ಹೆಚ್ಚು ಜೆಹಾದಿ ವೀಡಿಯೋಗಳು ಪತ್ತೆಯಾಗಿವೆ.ಐಸಿಸ್ ಉಗ್ರರ ವಿಧ್ವಂಸಕ ಕೃತ್ಯಗಳ ವೀಡಿಯೋ ಸೇರಿದಂತೆ 55 ಜಿಬಿಗೂ ಅಧಿಕ ವೀಡಿಯೋ, ಪೊಟೋಗಳು ಆತನ ಮೊಬೈಲ್ ಮತ್ತು ಪೆನ್ಡ್ರೈವ್ನಲ್ಲಿ ಪತ್ತೆಯಾಗಿವೆ ಎನ್ನಲಾಗಿದೆ.