Monday, January 20, 2025
ಸುದ್ದಿ

ಬಂಟ್ವಾಳದ ಇಂದಿರಾ ಕ್ಯಾಂಟೀನ್‌ಗೆ ಬೀಗ – ಕ್ಯಾಂಟೀನ್ ಉಪಹಾರ ಅವಲಂಬಿಸಿರುವವರ ಹೊಟ್ಟೆಗೆ ಹೊಡೆತ – ಕಹಳೆ ನ್ಯೂಸ್

ಆರು ತಿಂಗಳಿನಿAದ ಸಿಬ್ಬಂದಿಗೆ ವೇತನ ಸಿಗದ ಕಾರಣ ಬಿಸಿರೋಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್ ಕಳೆದ ಎರಡು ದಿನಗಳಿಂದ ಬಾಗಿಲು ಮುಚ್ಚಿದೆ. ಇಂದಿರಾ ಕ್ಯಾಂಟೀನ್‌ನ ಸಿಬಂದಿಗೆ ಕಳೆದ ಆರು ತಿಂಗಳಿನಿAದ ವೇತನವೇ ಸಿಕ್ಕಿಲ್ಲ. ಈ ಕಾರಣಕ್ಕಾಗಿ ಕ್ಯಾಂಟೀನ್‌ಗೆ ಬೀಗ ಹಾಕಿ ಪ್ರತಿಭಟನೆಗಿಳಿದಿದ್ದಾರೆ. ಇದರಿಂದಾಗಿ ಇಂದಿರಾ ಕ್ಯಾಂಟೀನ್ ಅವಲಂಬಿಸಿದ್ದ ಅನೇಕರ ಹೊಟ್ಟೆಗೆ ಹೊಡೆತ ಬಿದ್ದಿದೆ. ನಾಲ್ಕು ವರ್ಷಗಳ ಹಿಂದೆ ಬಿ.ಸಿ.ರೋಡ್‌ನ ಆಡಳಿತ ಸೌಧದ ಪಕ್ಕದಲ್ಲಿ ಕಾರ್ಯರೂಪಕ್ಕೆ ಬಂದು ಬಡವರಿಗೆ ಪ್ರಯೋಜನಕಾರಿಯಾಗಿದ್ದ ಇಂದಿರಾ ಕ್ಯಾಂಟೀನ್ ಬುಧವಾರದಿಂದ ಮುಚ್ಚಿದ್ದು, ಪ್ರತಿದಿನ ಈ ಕ್ಯಾಂಟೀನ್‌ನ ಉಪಹಾರವನ್ನೇ ಅವಲಂಬಿಸುವರು ಕ್ಯಾಂಟೀನ್ ಕಡೆಗೆ ಬಂದು, ಬೀಗ ಹಾಕಿರುವುದನ್ನು ನೋಡಿ ಬರಿಹೊಟ್ಟೆಯಲ್ಲಿ ಹಿಂತಿರುಗುತ್ತಿದ್ದಾರೆ.
ಕಳೆದ ಆರು ತಿಂಗಳಿನಿAದ ಕ್ಯಾಂಟೀನ್ ಸಿಬಂದಿಗೆ ವೇತನ ಸಿಗದಿರುವುದರಿಂದ ಜಿಲ್ಲಾಧಿಕಾರಿ, ಸಂಬAಧಪಟ್ಟ ಏಜೆನ್ಸಿಯವರಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಪ್ರಯೋಜನವಾಗದ ಹಿನ್ನೆಲೆಯಲ್ಲಿ ಬುಧವಾರ ಕ್ಯಾಂಟೀನ್‌ಗೆ ಬೀಗ ಹಾಕಿ ತೆರಳಿದ್ದಾರೆ.
ಇಂದಿರಾ ಕ್ಯಾಂಟೀನ್ ಗುತ್ತಿಗೆದಾರ ಸಂಸ್ಥೆ ನೀಡಿದ ಬಿಲ್‌ಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿಕೊಡಲಾಗುತ್ತಿದೆ. ಸರ್ಕಾರದಿಂದ ನೇರವಾಗಿ ಹಣ ಗುತ್ತಿಗೆದಾರ ಏಜೆನ್ಸಿ ಸಂಸ್ಥೆಗೆ ಸಂದಾಯವಾಗುತ್ತಿತ್ತು. ಏಜೆನ್ಸಿ ಸಂಸ್ಥೆಯವರೇ ಕ್ಯಾಂಟೀನ್ ಸಿಬಂದಿಗೆ ವೇತನ ಪಾವತಿ ಮಾಡುತ್ತಿದ್ದರು. ಆರು ತಿಂಗಳಿAದ ವೇತನ ಬರದಿದ್ದರೂ ನಮ್ಮ ಕೈಯ ಹಣ ಖರ್ಚು ಮಾಡಿಕೊಂಡು ಕ್ಯಾಂಟೀನ್ ಮುಂದುವರಿಸಿಕೊAಡು ಬಂದಿದ್ದೇವೆ. ಕೋವಿಡ್ ಕಾಲದಲ್ಲೂ ಕ್ಯಾಂಟೀನ್ ತೆರೆದು ನಾವೇ ಉಪಹಾರ ಸಿದ್ದಪಡಿಸಿ ಕೊಡುತ್ತಿದ್ದೆವು. ಇನ್ನು ಮುಂದುವರಿಸುವುದು ಸಾಧ್ಯವಿಲ್ಲ ಎಂದು ಇಂದಿರಾ ಕ್ಯಾಂಟೀನ್ ಸಿಬಂದಿ ಅಳಲು ತೋಡಿಕೊಂಡಿದ್ದಾರೆ.
ಬAಟ್ವಾಳದಲ್ಲಿ ಅಡುಗೆಯವರು, ಕ್ಲೀನರ್ ಮತ್ತು ಸಪ್ಲೈಯರ್ ಸೇರಿ ಒಟ್ಟು 8 ಮಂದಿ ಇದ್ದರು. ಈ ಪೈಕಿ ನಾಲ್ವರನ್ನು ಕೈ ಬಿಡಲಾಗಿದ್ದು, ಪ್ರಸ್ತುತ ನಾಲ್ವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಆರು ತಿಂಗಳಿನಿAದ ನಮಗೆ ವೇತನ ಪಾವತಿಯಾಗಿಲ್ಲ. ಹಾಗಾಗಿ ನಾವು ಬುಧವಾರದಿಂದ ಕ್ಯಾಂಟೀನ್ ಮುಚ್ಚುತ್ತೇವೆ ಎಂದು ಸಿಬಂದಿ ತಿಳಿಸಿದ್ದಾರೆ.
ಬಂಟ್ವಾಳ ಇಂದಿರಾ ಕ್ಯಾಂಟೀನ್‌ನಲ್ಲಿ ಬೆಳಗ್ಗೆ 200ರಿಂದ 300 ಮಂದಿಗೆ ಉಪಾಹಾರ, ಮಧ್ಯಾಹ್ನ 300 ಮಂದಿಗೆ ಊಟ ಹಾಗೂ ರಾತ್ರಿ 50ರಿಂದ 75ರಷ್ಟು ಮಂದಿಗೆ ಉಪಹಾರದ ವ್ಯವಸ್ಥೆ ಇತ್ತು. ಸಾರ್ವಜನಿಕರು ಮಾತ್ರವಲ್ಲದೆ ಹೆಚ್ಚಾಗಿ ಇಂದಿರಾ ಕ್ಯಾಂಟೀನ್ ಬಳಿಯೇ ಇರುವ ತಾಲೂಕು ಕಚೇರಿ ಸಹಿತ ವಿವಿಧ ಕಚೇರಿಗಳಿಗೆ ಬರುವವರಿಗೂ ಪ್ರಯೋಜನವಾಗುತ್ತಿತ್ತು. 5 ರೂಪಾಯಿಗೆ ಉಪಾಹಾರ, 10 ರೂಪಾಯಿಗೆ ಊಟ ನೀಡಲಾಗುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು