Tuesday, January 21, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

IAS ಆಕಾಂಕ್ಷಿ ಅಂತಾ ಬಿಲ್ಡಪ್‌; ಬೆತ್ತಲೆ ವೀಡಿಯೋ ಇಟ್ಕೊಂಡು ಯುವಕನಿಗೆ 40 ಲಕ್ಷ ಪಂಗನಾಮ – ಖತರ್ನಾಕ್‌ ಲೇಡಿ ಅರೆಸ್ಟ್‌..! – ಕಹಳೆ ನ್ಯೂಸ್

ಬೆಂಗಳೂರು: ಐಎಎಸ್‌ ಆಕಾಂಕ್ಷಿ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಯುವಕನನ್ನು ಪರಿಚಯ ಮಾಡಿಕೊಂಡು, ಆತನಿಂದ ಬೆತ್ತಲೆ ವೀಡಿಯೋ ಬಳಸಿಕೊಂಡು ಬ್ಲ್ಯಾಕ್‌ಮೇಲ್‌ ಮಾಡಿ 40 ಲಕ್ಷ ರೂ. ಪಡೆದು ವಂಚಿಸಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಬಗಲೂರು ಗ್ರಾಮ ಪರಮೇಶ್ವರ್ ಹಿಪ್ಪರಗಿ ಎಂಬ ಯುವಕನಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿದ್ದ ಮಹಿಳೆಯೊಬ್ಬಳು 40 ಲಕ್ಷ ಪಡೆದು ವಂಚಿಸಿದ್ದಳು. ಈ ಸಂಬಂಧ ʼ ಟಿವಿʼಯಲ್ಲಿ ಸರಣಿ ವರದಿಗಳು ಬಿತ್ತರವಾದ ನಂತರ ಎಚ್ಚೆತ್ತ ವಿಜಯಪುರ ಸಿಇಎನ್‌ ಪೊಲೀಸರು ಪ್ರಕರಣ ಭೇದಿಸಿ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಸನ ಮೂಲದ ಮಂಜುಳಾ ಎಂಬಾಕೆ ಫೇಸ್‌ಬುಕ್‌ ಫ್ರೆಂಡ್‌ ಆಗಿ ಯುವಕನನ್ನು ವಂಚಿಸಿದ್ದಳು. ಇದಕ್ಕೆ ಆಕೆಯ ಪತಿಯೇ ಸಾಥ್‌ ನೀಡಿದ್ದ ಎಂಬುದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಪತಿ ಸ್ವಾಮಿ ಹಾಗೂ ತಾನು ಸೇರಿಯೇ ಈ ಯುವಕನ ಬೆತ್ತಲೆ ವೀಡಿಯೋ ಇಟ್ಟುಕೊಂಡು ವಂಚನೆ ಮಾಡಿದ್ದೇವೆ ಎಂದು ಮಹಿಳೆ ತಪ್ಪೊಪ್ಪಿಕೊಂಡಿದ್ದಾಳೆ.

ಸಂತ್ರಸ್ತ ಯುವಕನಿಗೆ ಬೆತ್ತಲೆ ಸ್ನಾನ ಮಾಡುವಂತೆ ಒತ್ತಾಯಿಸಿ ವೀಡಿಯೋ ಮಾಡಿಕೊಂಡಿದ್ದ ವಂಚಕರು ಬಳಿಕ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾರೆ. ವಂಚಿಸಿ 40 ಲಕ್ಷ ಹಣ ತನ್ನ ಫೆಡರಲ್ ಬ್ಯಾಂಕ್ ಅಕೌಂಟ್‌ಗೆ ಹಾಕಿಸಿಕೊಂಡಿದ್ದಳು. ಆ ಹಣದಲ್ಲಿ 100 ಗ್ರಾಂ ಬಂಗಾರ, ಹುಂಡೈ ಕಾರ್, ಬೈಕ್ ಖರೀದಿ ಮಾಡಿದ್ದಳು. ಜೊತೆಗೆ ಊರಲ್ಲಿ ಮನೆ ನಿರ್ಮಾಣ ಮಾಡುತ್ತಿದ್ದಳು. ಮಂಜುಳಾ ಹಾಗೂ ಪತಿ ಸ್ವಾಮಿ ಬಂಧನದ ಬಳಿಕ ಅಸಲಿ ಪ್ರಕರಣ ಬಯಲಾಗಿದೆ. ಈ ಸಂಬಂಧ ವಿಜಯಪುರ ಸಿಇಎನ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.