ಬೆಂಗಳೂರು: ನಟ ಸುದೀಪ್ ವಿರುದ್ಧದ ವಂಚನೆ ಆರೋಪಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಕಾಫಿ ತೋಟದ ಮಾಲೀಕ ದೀಪಕ್ ಮಯೂರ್ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ವಾರಸ್ದಾರ ಧಾರಾವಾಹಿ ಕಾರ್ಯಕಾರಿ ನಿರ್ಮಾಪಕ ಮಹೇಶ್ ಪ್ರತ್ಯಾರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ಮಹೇಶ್ ಅವರು, ದೀಪಕ್ ಅವರು ಶೂಟಿಂಗ್ ಮುಗಿಸಿ ಬಂದಾಗಿಂದ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಮೊದಲು ಚಿಕ್ಕಮಗಳೂರು ಎಸ್‍ಪಿ ಅವರ ಬಳಿ ಹೋದರು. ಅಲ್ಲಿ ಬರುವಾಗ 88-90 ಲಕ್ಷ ರೂ. ಮೋಸ ಆಗಿದೆ ಎಂದು ಆರೋಪಿಸಿದರು. ಆದರೆ ಎಸ್‍ಪಿ ತೋಟದ ಬೆಲೆಯೇ ಅಷ್ಟು ಇಲ್ಲ. 5 ಲಕ್ಷ ಆದರೆ ಮಾತ್ರ ಮಾತನಾಡಿ ಸರಿ ಮಾಡಬಹುದು. ಇದು ನಮ್ಮಿಂದ ಆಗಲ್ಲ. ನೀವು ಕೋರ್ಟ್ ಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಕೋರ್ಟ್ ಗೂ ಹೋಗಿದ್ದಾರೆ ಎಂದು ಹೇಳಿದ್ದಾರೆ.
ಕೋರ್ಟ್ ನಲ್ಲಿ ದಾಖಲಾತಿ ಕೇಳಿದರು. ಆಗ ಅವರು ದಾಖಲಾತಿ ಇಲ್ಲ ಎಂದು ಹೇಳಿದ್ದಾರೆ. ನಾವು ಶೂಟಿಂಗ್ ಮಾಡುವಾಗ ಹೋಟೆಲಿನಲ್ಲಿ ವಾಸ್ತವ್ಯದ ವ್ಯವಸ್ಥೆ ಮಾಡಲಾಗಿತ್ತು. ಆದ ಅವರೆ ನಾನು ಹೋಂ ಸೆಟ್ ಹಾಕಿಕೊಡುತ್ತೇನೆ. ನನಗೆ ಬಾಡಿಗೆ ಕೊಡಿ ಎಂದು ಹೇಳಿದ್ದರು. ಆಗ ನಾನು ನಮ್ಮನ್ನು ನಂಬಿ ಮಾಡಬೇಡಿ ನಾವು ಬೆಂಗಳೂರಿಗೆ ಹೋಗುತ್ತೇವೆ. ತುಂಬಾ ದಿನ ಇರುವುದಿಲ್ಲ ಎಂದು ಹೇಳಿದ್ದೆ. ಆಗ ನೀವು ಬಿಟ್ಟು ಹೋದರು. ನನಗೆ ತೊಂದರೆ ಇಲ್ಲ, ಹೋಂ ಸ್ಟೆ ಮಾಡಿಕೊಳ್ಳುತ್ತೇವೆ ಎಂದು ಹೇಳಿ, ಕೊನೆಗೆ ಅವರೇ ನಮಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಟ್ಟಿದ್ರು. ಅವರ ಸಹೋದರ ಮತ್ತು ತಂದೆ ಈ ಬಗ್ಗೆ ಏನು ಆರೋಪ ಮಾಡುತ್ತಿಲ್ಲ ಇವರೆ ಈ ರೀತಿಯ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಮಹೇಶ್ ಪಬ್ಲಿಕ್ ಟಿವಿಗೆ ಸ್ಪಷ್ಟನೆ ನೀಡಿದ್ದಾರೆ.
ನಾವು ಮನೆಯಲ್ಲಿ ಮಾತ್ರ ಶೂಟಿಂಗ್ ಮಾಡಿದ್ದು, ಅದಕ್ಕೆ ಸಂಬಂಧಪಟ್ಟಂತೆ ಬಾಡಿಗೆ ಕೊಟ್ಟಿದ್ದೇವೆ. 70 ಸಾವಿರ ಬಾಡಿಗೆ ಕೊಡಬೇಕಿತ್ತು. ನಾವು ಶೂಟಿಂಗ್‍ಗೆ ತಂದಿದ್ದ ಉಪಕರಣಗಳನ್ನು ಕೊಡದೆ ಅವರ ಬಳಿ ಇಟ್ಟುಕೊಂಡಿದ್ದಾರೆ. ನಾವು 70 ಸಾವಿರ ಕೊಡುತ್ತೇವೆ ನಮ್ಮ ಧಾರಾವಾಹಿಗೆ ಬಳಸಿದ್ದ 7 ಲಕ್ಷ ಮೌಲ್ಯದ ಉಪಕರಣಗಳನ್ನು ಕೊಡಿ ಎಂದು ಕೇಳಿದಾಗ ಅವರು ಉಪಕರಣಗಳನ್ನು ಕೊಡದೇ ಸತಾಯಿಸ್ತಿದ್ದಾರೆ ಎಂದು ಮಹೇಶ್ ಆರೋಪಿಸಿದ್ದಾರೆ.
ದೀಪಕ್ ಅವರು ನಾವು ತೋಟದಲ್ಲಿ ಮನೆ ಕಟ್ಟಿದ್ದೇವೆ ಎಂದು ಆರೋಪ ಮಾಡುತ್ತಿದ್ದಾರೆ. ಅವರಿಗೆ ದುಡ್ಡು ಬೇಕಾಗಿದ್ದು, ಅದಕ್ಕಾಗಿ ಈ ರೀತಿಯ ಆರೋಪ ಮಾಡುತ್ತಿದ್ದಾನೆ. ನಾವು ಯಾವುದೇ ಮನೆಯನ್ನು ಕಟ್ಟಿಲ್ಲ. ನಾವು ಬಾಡಿಗೆಯ 70 ಸಾವಿರ ಕೊಡಲು ಹೋದಾಗ ತೋಟ ಹಾಳು ಮಾಡಿದ್ದಕ್ಕೆ 1 ಕೋಟಿ 50 ಲಕ್ಷ ರೂ. ಡಿಮ್ಯಾಂಡ್ ಮಾಡುತ್ತಿದ್ದಾರೆ. ಇದು ಸುದೀಪ್ ಅವರ ಗಮನಕ್ಕೆ ಬಂದಿತ್ತು. ಆದರೆ ಅವರಿಗೆ ಸುಳ್ಳು ಆರೊಪ ಮಾಡುತ್ತಿದ್ದಾರೆ ಎಂದು ತಿಳಿದಿತ್ತು. ಆದ್ದರಿಂದ ಸುದೀಪ್ ಅವರ ತಪ್ಪು ಏನು ಇಲ್ಲ. ದೂರು ಕೊಡಲು ನಮ್ಮ ಬಳಿ ದಾಖಲಾತಿ ಇದೆ ಎಂದು ಮಹೇಶ್ ಹೇಳಿದ್ದಾರೆ.