Tuesday, January 21, 2025
ಸುದ್ದಿ

ಕಿನ್ನಿಗೋಳಿ: ಗಾಂಜಾ ನಶೆಯಲ್ಲಿ ಡ್ರೈವಿಂಗ್, ಸರಣಿ ಅಪಘಾತ ನಡೆಸಿ ಚಾಲಕ ಎಸ್ಕೇಪ್ : 12ಕಿ.ಮೀ. ಬೆನ್ನಟ್ಟಿದ ಸ್ಥಳೀಯರು – ಕಹಳೆ ನ್ಯೂಸ್

ಕಿನ್ನಿಗೋಳಿ: ಗಾಂಜಾ ನಶೆಯಲ್ಲಿದ್ದ ಚಾಲಕನೋರ್ವ ವಾಹನ ಚಲಾಯಿಸಿ ಸರಣಿ ಅಪಘಾತ ನಡೆಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಮೂರುಕಾವೇರಿ ಬಳಿ ನಡೆದಿದೆ. ಅಪಘಾತದ ಬೆನ್ನಲ್ಲೇ ವಾಹನ ಸಮೇತ ಚಾಲಕ ಎಸ್ಕೇಪ್ ಆಗಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡಬಿದ್ರೆ ಹಾಗೂ ಕಿನ್ನಿಗೋಳಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಪಿಕಪ್‌ ವಾಹನ ಚಾಲಕನೊಬ್ಬ ಗಾಂಜಾ ನಶೆಯಲ್ಲಿ ವಾಹನ ಚಲಾಯಿಸುತ್ತಿದ್ದಾನೆ. ಮೂರು ಕಾವೇರಿ ಬಳಿಗೆ ಬರುತ್ತಿದ್ದಂತೆಯೇ ವಾಹನವನ್ನು ಬೈಕ್ ಗೆ ಢಿಕ್ಕಿ ಹೊಡೆದಿದ್ದಾನೆ. ಅಷ್ಟೇ ಅಲ್ಲದೇ ಕಾರು ಹಾಗೂ ಬಸ್ಸಿಗೆ ಢಿಕ್ಕಿ ಹೊಡೆದಿದ್ದಾನೆ. ಅಪಘಾತದ ಅರಿವಿದ್ದರೂ ಕೂಡ ವಾಹನವನ್ನು ನಿಲ್ಲಿಸದೇ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಆದರೆ ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಇನ್ನು ವಾಹನ ಸಮೇತ ಚಾಲಕ ಎಸ್ಕೇಪ್ ಆಗಿರುವುದನ್ನು ಗಮನಿಸಿದ ಸ್ಥಳೀಯರು ಬೈಕ್ ಗಳನ್ನು ಹಿಡಿದು ಪಿಕಪ್ ವಾಹನವನ್ನು ಬೆನ್ನಟ್ಟಿದ್ದಾರೆ. ಸುಮಾರು ಹನ್ನೆರಡು ಕಿ.ಮೀ. ದೂರದ ವರೆಗೂ ಪಿಕಪ್ ವಾಹನವನ್ನು ಬೆನ್ನಟ್ಟಿದ್ದಾರೆ. ನಂತರ ಚಾಲಕ ವಾಹನವನ್ನು ನಿಲ್ಲಿಸಿದ್ದಾನೆ. ಈ ವೇಳೆಯಲ್ಲಿ ಸವಾರರು ಆತನನ್ನು ವಾಹನದಿಂದ ಕೆಳಗೆ ಇಳಿಸಿ ಥಳಿಸಿದ್ದಾರೆ.