ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗೆ ಜೀವ ಬೆದರಿಕೆ ಹಾಕಿದ ಪ್ರಕರಣ : ಪುತ್ತೂರಿನ ಆಸೀಫ್ ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಅನುಮತಿ – ಕಹಳೆ ನ್ಯೂಸ್
ಪುತ್ತೂರು: ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ರವರಿಗೆ ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಕೇಸ್ ದಾಖಲಿಸಲು ನ್ಯಾಯಾಲಯ ಅನುಮತಿ ನೀಡಿದೆ ಎಂದು ತಿಳಿದು ಬಂದಿದೆ.
ಪ್ರಮೋದ್ ಮುತಾಲಿಕ್ ಅವರು ತಮಗೆ ಮೊಬೈಲ್ ಕರೆ ಮಾಡಿ ಜೀವ ಬೆದರಿಕೆ ಹಾಕಿದ ವ್ಯಕ್ತಿಯ ವಿರುದ್ಧ ಧಾರವಾಡ ಉಪನಗರ ಠಾಣೆಗೆ ದೂರು ನೀಡಿದ್ದರು.
ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯ ಪತ್ತೆಗೆ ಕೋರ್ಟ್ ಅನುಮತಿ ಬೇಕಾಗಿದ್ದರಿಂದ ನ್ಯಾಯಾಲಯದ ಅನುಮತಿ ಪಡೆದಿರುವ ಪ್ರಮೋದ್ ಮುತಾಲಿಕ್ ಬೆದರಿಕೆ ಹಾಕಿದ ವ್ಯಕ್ತಿಯನ್ನು ಶೀಘ್ರ ಪತ್ತೆ ಮಾಡಲು ಪೊಲೀಸರಿಗೆ ಮನವಿ ಮಾಡಿದ್ದಾರೆ.
ಬೆದರಿಕೆ ಹಾಕಿದ ವ್ಯಕ್ತಿ ಪುತ್ತೂರಿನ ಆಸಿಫ್ ಎಂದು ಗೊತ್ತಾಗಿದೆ. ಈಗಾಗಲೇ ನ್ಯಾಯಾಲಯ ಈ ಬಗ್ಗೆ ಎಫ್‌ಐಆರ್ ಮಾಡಿ ತನಿಖೆ ನಡೆಸಲು ಅನುಮತಿ ನೀಡಿದೆ. ಇನ್ಮುಂದೆ ಪೊಲೀಸರು ಆ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದ್ದಾರೆ..