Sunday, January 19, 2025
ಸುದ್ದಿ

ದಕ್ಷಿಣಕನ್ನಡ, ಕಾಸರಗೋಡು ಉಗ್ರರ ನೆಲೆಯಾಗಿ ಮಾರ್ಪಟ್ಟಿದೆ : ರಾಘವೇಶ್ವರ ಶ್ರೀ

ಬಾಗಲಕೋಟೆ: ದೇಶದಲ್ಲಿ ಐಸಿಸ್‌ ಉಗ್ರರ ಹತ್ತಿಕ್ಕುವ ಕೆಲಸ ನಡೆಯಬೇಕಿದೆ. ಮಂಗಳೂರು ಮತ್ತು ಕೇರಳದ ಕಾಸರಗೋಡು ಉಗ್ರರ ಆಶ್ರಯ ತಾಣವಾಗುತ್ತಿವೆ ಎಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಂಗಳೂರು, ಕಾಸರ ಗೋಡು ಐಸಿಸ್‌ ಉಗ್ರರ ತಾಣವಾಗಿ ಪರಿಣಮಿಸುತ್ತಿವೆ. ಇದರ ವಿರುದ್ಧ ಕಠಿಣ ಕ್ರಮ ಅಗತ್ಯ. ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ ಹತ್ಯೆ ಪ್ರಕರಣದಲ್ಲಿ ಬಲಪಂಥೀಯರ ಕೈವಾಡವಿದೆ ಎಂದು ಆರೋಪಿಸುವುದು ಸರಿಯಲ್ಲ. ಇದಕ್ಕೆ ಸೂಕ್ತ ಪುರಾವೆ ಇದ್ದರೆ ಮಾತ್ರ ಈ ರೀತಿ ಆರೋಪ ಮಾಡಬೇಕು. ಎಡಪಂಥೀಯರ ಹತ್ಯೆ ನಡೆದಾಕ್ಷಣ, ಬಲಪಂಥೀಯರ ಮೇಲೆ ಸಾರ್ವಜನಿಕವಾಗಿ ಆರೋಪಿಸುವುದು ಎಷ್ಟು ಸೂಕ್ತ? ಗೌರಿ ಮತ್ತು ಕಲಬುರ್ಗಿ ಅವರ ಹತ್ಯೆಯಲ್ಲಿ ಬಲ ಪಂಥೀಯರ ಕೈವಾಡ ಕುರಿತು ಆರೋಪ ಮಾಡುವವರ ಬಳಿ ಯಾವ ಸಾಕ್ಷಿ ಇವೆ ಎಂದು ಪಶ್ನಿಸಿದರು. ವೀರಶೈವ ಲಿಂಗಾಯತ, ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರದಲ್ಲಿ ರಾಜಕೀಯ ಇರುವುದು ನಿಜ. ಆದರೆ, ಈ ಬಗ್ಗೆ ನಾನು ಈಗಲೇ ಏನೂ ಹೇಳುವುದಿಲ್ಲ. ಧರ್ಮ ರಕ್ಷಕರಿಗೆ ಆಪತ್ತು ಖಚಿತ ಎಂಬಂತಾಗಿದೆ. ಗೋವಿನ ರಕ್ಷಣೆಗೆ ನಿಂತವರ ಮೇಲೆ ಆಕ್ರಮಣ ನಡೆಯುತ್ತಿದೆ. ಆಕ್ರಮಣ ಮಾಡುವವರಿಗೆ ಸರ್ಕಾರಿ ಯಂತ್ರ ಪೋಷಕವಾಗಿದೆ ಎಂದರು.

ಜಾಹೀರಾತು

ಜಾಹೀರಾತು
ಜಾಹೀರಾತು