Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಶ್ರೀ ಗೆಜ್ಜೆಗಿರಿ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ವಿಕೃತಿ ; ತಪ್ಪೊಪ್ಪಿಕೊಳ್ಳದಿದ್ರೆ ದೈವದ ಮೊರೆ ಹೋಗುವ ಎಚ್ಚರಿಕೆ – ಕಹಳೆ ನ್ಯೂಸ್

ಬೆಳ್ತಂಗಡಿ: ಶ್ರೀ ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟಕ್ಕೆ ಹಾಕಲಾಗಿದ್ದ ಬ್ಯಾನರ್ ಹರಿದು ದುಷ್ಕರ್ಮಿಗಳ ಗುಂಪೊಂದು ವಿಕೃತಿ ಮೆರೆದ ಘಟನೆ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮರೋಡಿ ಗ್ರಾಮದ ಪೊಸರಡ್ಕ ಗರೋಡಿ ವಠಾರದಲ್ಲಿ ಬುಧವಾರ ನಡೆದಿದ್ದ ಯಕ್ಷಗಾನ ಬಯಲಾಟಕ್ಕೆ ಶುಭ ಕೋರಲು ಅನೇಕ ಬ್ಯಾನರ್‌ಗಳನ್ನು ಅಳವಡಿಸಲಾಗಿತ್ತು. ಆದರೆ ಏಕಾ ಏಕಿ ನಿನ್ನೆ ರಾತ್ರಿ ಬ್ಯಾನರ್ ನ್ನು ಹರಿದು ಕಿತ್ತೆಸೆದ ಘಟನೆ ವರದಿಯಾಗಿದೆ.

ಪೊಸರಡ್ಕ ವಠಾರದಲ್ಲಿ ಗರೋಡಿ ಇದ್ದು ಗೆಜ್ಜೆಗಿರಿ ಕ್ಷೇತ್ರ ಮಹಾತ್ಮೆ ಯಕ್ಷಗಾನವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಯಶಸ್ವಿಯಾಗಿ ಸಂಪನ್ನಗೊಂಡಿತ್ತು.

ಆದರೆ ಇದೀಗ ಬ್ಯಾನರ್ ತೆರವುಗೊಳಿಸುವ ಮುನ್ನವೇ ಅದನ್ನು ಹರಿದು ಕ್ಷೇತ್ರಕ್ಕೆ ಅಪಮಾನ ಎಸಗಿದ್ದಾರೆ ಎಂದು ಅರೋಪಿಸಲಾಗಿದೆ.

ಈ ವಿಕೃತಿ ಮೆರೆದವರು ಯಾರೇ ಅಗಿದ್ದರೂ ತಪ್ಪೋಪ್ಪಿಕೊಳ್ಳದೆ ಹೋದರೆ ದೈವಗಳ ಮೊರೆ ಹೋಗುವುದಾಗಿ ಯಕ್ಷಗಾನ ಆಯೋಜಕರು ತಿಳಿಸಿದ್ದಾರೆ.