Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳದ ಉದ್ಘಾಟನೆ – ಕಹಳೆ ನ್ಯೂಸ್

ವೇಣೂರು: ಜಿಲ್ಲೆಯ ಇತಿಹಾಸ ಪ್ರಸಿದ್ಧ ಹೊನಲು ಬೆಳಕಿನ 30ನೇ ವರ್ಷದ ವೇಣೂರು ಪೆರ್ಮುಡ ಸೂರ್ಯ-ಚಂದ್ರ ಜೋಡುಕರೆ ಬಯಲು ಕಂಬಳವು ಡಿ.3 ರಂದು ಉದ್ಘಾಟನೆಗೊಂಡಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಳದಂಗಡಿ ಅರಮನೆಯ ತಿಮ್ಮಣ್ಣರಸ ಡಾ| ಪದ್ಮಪ್ರಸಾದ ಅಜಿಲರು ಕಂಬಳದ ಉದ್ಘಾಟನೆಯನ್ನು ನೆರವೇರಿಸಿ ಶುಭ ಹಾರೈಸಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ.ಯನ್. ಪುರುಷೋತ್ತಮ ರಾವ್ ಅಧ್ಯಕ್ಷತೆ ವಹಿಸಿದ್ದರು.

ವಿಜಯರಾಜ ಅಧಿಕಾರಿ ಮಾರಗುತ್ತು, ಸುರೇಶ್ ಆರಿಗ ಪೆರ್ಮಾಣುಗುತ್ತು, ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಕೆ.ಎಂ. ಹನೀಫ್ ಸಖಾಫಿ, ಪಡಂಗಡಿ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಶೆಟ್ಟಿ, ಗಣೇಶ್ ನಾರಾಯಣ ಪ೦ಡಿತ್, ನವೀನ್ ಪೂಜಾರಿ ಪಚ್ಚೇರಿ, ಲೋಕೇಶ್ ಪೂಜಾರಿ ಕೋರ್ಲೋಡಿ, ಡಾ। ಪ್ರತೀತ್ ಅಜಿಲ, ತೇಜಾಕ್ಷಿ, ಗುಣವತಿ ಡಿ, ರಾಜೇಶ್ ಆಶಾ ಟ್ರ‍ಾವೆಲ್ಸ್, ಅರುಣ್ ನವೋದಯ ಬ್ಯಾ೦ಕ್, ವಿ. ಪ್ರಭಾಕರ ಹೆಗ್ಡೆ ಹಟ್ಟಾಜೆ, ಯೋಗೀಶ್ ಪೂಜಾರಿ ಬಿಕ್ರೊಟ್ಟು, ಲಕ್ಷ್ಮಣ ಪೂಜಾರಿ ಹೇಡ್ಮೆ, ಸತೀಶ್ ಹೆಗ್ಡೆ, ವಿಮಲಚ೦ದ್ರ ಕೋಟ್ಯಾನ್, ವಿನುಷಾ ಪ್ರಕಾಶ್, ಭಾಸ್ಕರ ಬಲ್ಯಾಯ, ಕಂಬಳ ಸಮಿತಿಯ ಉಪಾಧ್ಯಕ್ಷರುಗಳಾದ ಕರುಣಾಕರ ಸಾಲ್ಯಾನ್, ಸ್ಟೀವನ್ ಮೋನಿಸ್, ಗೋಪಾಲ ಪೂಜಾರಿ, ಕೋಶಾಧ್ಯಕ್ಷ ಅಶೋಕ್ ಪಾಣೂರು, ಕಾರ್ಯದರ್ಶಿ ಭರತ್‌ರಾಜ್ ಪಾಪುದಡ್ಕ ಮತ್ತಿತರರು ಉಪಸ್ಥಿತರಿದ್ದರು.

ಕ೦ಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್ ಪ್ರಾಸ್ತಾವಿಸಿ, ಸ್ವಾಗತಿಸಿದರು. ಸತೀಶ್ ಹೊಸ್ಮಾರು ನಿರೂಪಿಸಿದರು. ಸಮಿತಿ ಕಾರ್ಯಾಧ್ಯಕ್ಷ ಶೇಖರ ಕುಕ್ಕೇಡಿ ವ೦ದಿಸಿದರು.