
ರಸ್ತೆಯಲ್ಲಿ ಅಪಘಾತ ನಡೆದು ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ರು ಕೂಡ ಆತನನ್ನ ಆಸ್ಪತ್ರೆಗೆ ದಾಖಲಿಸದೇ ಸಾರ್ವಜನಿಕರು ದೂರ ನಿಂತ ಅಮಾನವಿಯ ಘಟನೆ ಉಡುಪಿಯ ಕಟಪಾಡಿಯಲ್ಲಿ ನಡೆದಿದೆ. ಗಾಯಾಳನ್ನು ಆಸ್ಪತ್ರೆಗೆ ಕೊಂಡೊಯ್ಯವAತೆ ಗಾಯಾಳುವಿನ ಇಬ್ಬರು ಗೆಳೆಯರು ಗೋಗರೆದರೂ, ಕೊನೆ ಪಕ್ಷ ಆಟೋವನ್ನಾದರೂ ಕರೆ ತನ್ನಿ ಎಂದ್ರು ಕೂಡ ದೂರವೇ ನಿಂತು ಎಲ್ಲವನ್ನು ಮೌನವಾಗಿ ನೋಡುತ್ತಿದ್ದ ಸಾರ್ವಜನಿಕರು. ಸ್ಥಳದಲ್ಲೇ ಇದ್ರೂ ಹತ್ತಿರಕ್ಕೂ ಬಾರದ ಪೊಲೀಸರು ಕೊನೆಗೆ ಕಾಡಿ ಬೇಡಿ ಆಟೋದಲ್ಲಿ ಗೆಳೆಯನನ್ನು ಕೊಂಡೊಯ್ಯದ ಗೆಳೆಯರು, ಗಾಯಾಳು ಗೆಳೆಯನ್ನು ಹಿಡಿದು ಆಕ್ರಂದಿಸುವ ಗೆಳೆಯರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದೆ.