Sunday, January 19, 2025
ಕ್ರೈಮ್ರಾಜಕೀಯರಾಜ್ಯಸುದ್ದಿ

ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಕೊಲೆ ಪ್ರಯತ್ನ ; ಖರ್ಗೆ ಬಲಗೈ ಬಂಟ ಅರೆಸ್ಟ್..! – ಕಹಳೆ ನ್ಯೂಸ್

ಕಲಬುರಗಿ: ನಿನ್ನೆಯಷ್ಟೇ ಮಣಿಕಂಠ ರಾಠೋಡ್​ ತಮ್ಮ ಮೇಲೆ ಪ್ರಿಯಾಂಕ್​ ಖರ್ಗೆ ಮತ್ತು ಬೆಂಬಲಿಗರಿಂದ ಕೊಲೆ ಪ್ರಯತ್ನ ನಡೆದಿದೆ ಎಂದು ಹೊಸ ಬಾಂಬ್​ ಸಿಡಿಸಿದ್ದರು. ಇದೀಗ ಪ್ರಿಯಾಂಕ್​ ಖರ್ಗೆ ಬಲಗೈ ಬಂಟ ರಾಜು ಕಪನೂರ್​ನನ್ನು ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಲಬುರಗಿ ಜಿಲ್ಲೆಯ ಯಡ್ರಾಮಿ ಪೊಲೀಸರು ರಾಜು ಕಪನೂರ್​ನ್ನು ಇದೀಗ ಬಂಧಿಸಿದ್ದಾರೆ. ಈ ಹಿಂದೆ ವಿಚಾರಣೆ ಸಂದರ್ಭ ಗುರಲಿಂಗಪ್ಪ ಪೊಲೀಸರ ಮುಂದೆ ನೀಡಿದ್ದ ವಿಡಿಯೋ ಸ್ಟೇಟ್ ಮೆಂಟ್ ನಲ್ಲಿ ಕಪನೂರ್ ಹೆಸರು ಉಲ್ಲೇಖವಾಗಿತ್ತು. ಅದರ ಪ್ರಕಾರ ಸೆಪ್ಟೆಂಬರ್ ತಿಂಗಳಿನಲ್ಲಿ ಗುರಲಿಂಗಪ್ಪ ಎಂಬುವರಿಂದ ಕಪನೂರ್, ಎರಡು ಕಂಟ್ರಿಮೇಡ್ ಗನ್ ಮತ್ತು 30 ಗುಂಡು ಖರೀದಿಸಿದ್ದರು. ರಾಜು ಕಪನೂರ್ ಹೆಸರು ಉಲ್ಲೇಖದ ಬಳಿಕ‌ ಪೊಲೀಸರು ಎರಡು ನೋಟಿಸ್ ನೀಡಿದ್ದರು.

ಆದರೆ ಪೊಲೀಸರ ನೋಟಿಸಿಗೆ ಕ್ಯಾರೆ ಎನ್ನದ ರಾಜು ಕಪನೂರ್​ನನ್ನು ಈಗ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ತನ್ನನ್ನು ಕೊಲೆ ಮಾಡೋದಕ್ಕೆ ರಾಜು ಕಪನೂರ್ ಗನ್ ಖರೀದಿ ಮಾಡಿದ್ದ ಎಂದು ಸುದ್ದಿಗೋಷ್ಟಿ ನಡೆಸಿದ್ದ ಸಂದರ್ಭ ಹೇಳಿದ್ದರು. ಜೊತೆಗೆ ಮಣಿಕಂಠ ರಾಠೋಡ್​ ಸುದ್ದಿಗೋಷ್ಟಿ ನಡೆಸಿ ಸುದ್ದಿಗೋಷ್ಟಿಯಲ್ಲಿ ವಿಡಿಯೋ ಕಕೂಡ ರಿಲೀಸ್ ಮಾಡಿದ್ದರು. ಮಣಿಕಂಠ ರಾಠೋಡ್ ವಿಡಿಯೋ ರಿಲೀಸ್ ಆದ ಬಳಿಕ ಇದೀಗ ರಾಜು ಕಪನೂರ್​ನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.