Sunday, November 24, 2024
ಸುದ್ದಿ

ಗ್ಯಾಂಗ್ ವಾರ್ ನಡುವೆ ಮಗಳನ್ನು ಕೋಚಿಂಗ್ ಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯ ಹತ್ಯೆ -ಕಹಳೆ ನ್ಯೂಸ್

ಜೈಪುರ: ತನ್ನ ಮಗಳನ್ನು ಕೋಚಿಂಗ್ ಸೆಂಟರ್ ಗೆ ಕರೆದುಕೊಂಡು ಹೋಗುತ್ತಿದ್ದ ವೇಳೆ ನಾಲ್ವರ ತಂಡ ಗುಂಡಿನ ದಾಳಿ ನಡೆಸಿ ಹತ್ಯೆಗೈದ ಘಟನೆ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗ್ಯಾಂಗ್‌ ನ ಭಾಗವೆಂದು ನಂಬಲಾದ ನಾಲ್ವರು ಗುಂಡು ಹಾರಿಸಿದ್ದು ಕುಖ್ಯಾತ ಗ್ಯಾಂಗ್ ಸ್ಟರ್ ಸೇರಿದಂತೆ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಒಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ಯಾಂಗ್ ಸ್ಟರ್ ರಾಜು ಥೇತ್ ಸಾವನ್ನಪ್ಪಿದ ವ್ಯಕ್ತಿ. ವರದಿಗಳ ಪ್ರಕಾರ, ಸಿಕರ್ ನಗರದ ಪಿಪ್ರಾಲಿ ರಸ್ತೆಯಲ್ಲಿರುವ ಅವರ ಮನೆಯ ಪ್ರವೇಶದ್ವಾರದಲ್ಲಿ ಬೆಳಿಗ್ಗೆ 9.30 ಕ್ಕೆ ನಾಲ್ಕು ಜನರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಕೋರರನ್ನು ಗುರುತಿಸಲಾಗಿದ್ದು, ಆರೋಪಿಗಳನ್ನು ಬಂಧಿಸಲು ರಾಜ್ಯಾದ್ಯಂತ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯಲ್ಲಿ ಸಾವನ್ನಪ್ಪಿದ ಮತ್ತೊಬ್ಬ ವ್ಯಕ್ತಿಯನ್ನು ತಾರಾಚಂದ್ ಕಡ್ವಾಸರ ಎಂದು ಗುರುತಿಸಲಾಗಿದ್ದು, ಅವರು ತಮ್ಮ ಮಗಳ ಕೋಚಿಂಗ್ ಸೆಂಟರ್‌ ಗೆ ಸೇರಿಸಲು ಆ ಪ್ರದೇಶಕ್ಕೆ ಹೋಗಿದ್ದರು ಎಂದು ವರದಿಯಾಗಿದೆ. ಗುಂಡಿನ ದಾಳಿಯಲ್ಲಿ ಅವರ ಸೋದರ ಸಂಬಂಧಿ ಕೂಡ ಗಾಯಗೊಂಡಿದ್ದಾರೆ.

ಘಟನೆ ನಡೆದ ಸ್ಥಳದಲ್ಲಿ ಹಲವಾರು ಹಾಸ್ಟೆಲ್‌ಗಳು ಮತ್ತು ಕೋಚಿಂಗ್ ಸೆಂಟರ್‌ಗಳಿವೆ. ದರೋಡೆಕೋರ ಥೇತ್ ಅವರ ಸಹೋದರ ಕೂಡ ಅಲ್ಲಿ ಹಾಸ್ಟೆಲ್ ನಡೆಸುತ್ತಿದ್ದರು ಎಂದು ಮೂಲಗಳು ತಿಳಿಸಿವೆ.

ಪೊಲೀಸ್ ಅಧಿಕಾರಿಯ ಪ್ರಕಾರ ರಾಜು ಥೇತ್ ರಾಜ್ಯದ ಶೇಖಾವತಿ ಪ್ರದೇಶದಲ್ಲಿ ಮತ್ತೊಂದು ಗ್ಯಾಂಗ್‌ ನೊಂದಿಗೆ ವಿರೋಧ ಹೊಂದಿದ್ದನು.

ಕೊಲೆಯಾದ ಕೂಡಲೇ ಇದರ ಹೊಣೆಗಾರಿಕೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ ನವನೆಂದು ಪರಿಚಯಿಸಿಕೊಂಡ ರೋಹಿತ್ ಗೋಡಾರಾ ಎಂಬ ವ್ಯಕ್ತಿ ಫೇಸ್‌ ಬುಕ್‌ ನಲ್ಲಿ ಹೊತ್ತುಕೊಂಡಿದ್ದಾನೆ. ಥೇತ್ ನ ಹತ್ಯೆಯು ಆನಂದಪಾಲ್ ಸಿಂಗ್ ಮತ್ತು ಬಲ್ಬೀರ್ ಬಾನುಡಾಗೆ ಪ್ರತೀಕಾರ ಎಂದು ಹೇಳಿದರು.

ಆನಂದ್‌ ಪಾಲ್ ಗ್ಯಾಂಗ್‌ ನ ಸದಸ್ಯನಾಗಿದ್ದ ಗ್ಯಾಂಗ್ ಸ್ಟರ್ ಬಾನುಡಾ ಜುಲೈ 2014 ರಲ್ಲಿ ಬಿಕಾನೇರ್ ಜೈಲಿನಲ್ಲಿ ನಡೆದ ಗ್ಯಾಂಗ್ ವಾರ್‌ ನಲ್ಲಿ ಕೊಲ್ಲಲ್ಪಟ್ಟಿದ್ದ.