Recent Posts

Sunday, January 19, 2025
ಕ್ರೈಮ್ರಾಜಕೀಯರಾಜ್ಯಸುದ್ದಿ

JOIN CFI ಗೋಡೆ ಬರಹ – ಶಿಕಾರಿಪುರ ಶಿರಾಳಕೊಪ್ಪದ 9ಕ್ಕೂ ಹೆಚ್ಚು ಕಡೆ ಕೃತ್ಯ ; ಕಿಡಿಗೇಡಿ ಜಿಹಾದಿಗಳ ಅಟ್ಟಹಾಸ – ಕಹಳೆ ನ್ಯೂಸ್

ಶಿವಮೊಗ್ಗ: ಜಿಲ್ಲೆಯ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪ (Shiralakoppa)ದಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದು, ಜಾಯಿನ್ ಸಿಎಫ್‍ಐ (CFI) ಎಂದು ಗೋಡೆ ಬರಹ ಬರೆಯುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪಟ್ಟಣದ 9 ಕ್ಕೂ ಹೆಚ್ಚು ಕಡೆ ಗೋಡೆ ಬರಹ ಬರೆಯಲಾಗಿದೆ. ನೀಲಿ, ಕೆಂಪು ಬಣ್ಣದ ಸ್ಪೇಯಿಂದ ಬರೆದು ಸ್ಟಾರ್ ಇಡಲಾಗಿದೆ. ಹಳೇ ಪೆಟ್ರೋಲ್ ಬಂಕ್ ಪಕ್ಕದಲ್ಲಿನ ಸಿಮೆಂಟ್ ಕಾಂಪೌಂಡ್, ಬೋವಿ ಕಾಲೋನಿಗೆ ಹೋಗುವ ವಿದ್ಯುತ್ ಕಂಬ, ದೊಡ್ಡ ಬ್ಯಾಣದಕೇರಿಗೆ ಹೋಗುವ ಕ್ರಾಸ್ ಬಳಿ ಗೋಡೆ ಮತ್ತು ಚಂದ್ರಪ್ಪ ಎಂಬವರ ಮನೆಯ ಕ್ರಾಸ್‍ನ ವಿದ್ಯುತ್ ಕಂಬ, ಬಿಲಾಲ್ ಎಂಬವರ ಮನೆಯ ಬಳಿ ಇರುವ ಗ್ಯಾರೇಜ್ ಗೋಡೆ, ದೊಡ್ಡ ಬ್ಯಾಣದ ಕೇರಿಯ ರಸ್ತೆಯಿಂದ ಮಠದ ಕೇರಿಯ ರಸ್ತೆಯ ಬಾಜುವಿನ ಗೋಡೆ, ಫಾರೂಕ್ ಮತ್ತು ಬಿಲಾಲ್ ಮನೆಯ ಗೋಡೆಗಳ ಮೇಲೆ ಬರಹ ಬರೆಯಲಾಗಿದೆ.

ನ.28 ರಂದು ಪೊಲೀಸರು ಗಸ್ತು ತಿರುಗುವಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿರಾಳಕೊಪ್ಪ ಠಾಣೆ (Shiralakoppa Police Station) ಯಲ್ಲಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ. ಸದ್ಯ ಖಾಕಿ ಪಡೆ ಯಾರು ಬರೆದಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಬಲೆ ಬೀಸಿದೆ.