Sunday, January 19, 2025
ಸುದ್ದಿ

ವಿಶ್ವಹಿಂದೂ ಪರಿಷತ್ ಪುತ್ತೂರು ಮೊಸರು ಕುಡಿಕೆ ಉತ್ಸವದ ದಶಮಾನೋತ್ಸವ ಸಮಿತಿಗೆ ಅಧ್ಯಕ್ಷರಾಗಿ ಪೂರ್ಣಜಿತ್ ರೈ, ಕಾರ್ಯದರ್ಶಿಯಾಗಿ ದನ್ಯಕುಮಾರ್ ಬೆಳಂದೂರು ಆಯ್ಕೆ – ಕಹಳೆ ನ್ಯೂಸ್

ವಿಶ್ವ ಹಿಂದೂ ಪರಿಷತ್ ನ ಸ್ಥಾಪನ ದಿನದ ಅಂಗವಾಗಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆಯುವ 10 ನೇ ವರುಷದ ಮೊಸರು ಕುಡಿಕೆ ಉತ್ಸವ ಕಾರ್ಯಕ್ರಮ ದ ಅಂಗವಾಗಿ ಪುತ್ತೂರು ಮೊಸರು ಕುಡಿಕೆ ದಶಮಾನೋತ್ಸವ ಸಮಿತಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬೈಠಕ್ ನಲ್ಲಿ ನಡೆಯಿತು.
ಪುತ್ತೂರು ಮೊಸರು ಕುಡಿಕೆ ದಶಮಾನೋತ್ಸವ ಸಮಿತಿ ಯ ಅಧ್ಯಕ್ಷರಾಗಿ ಯುವ ಉದ್ಯಮಿ ಪೂರ್ಣಜೀತ್ ರೈ ಬೆಳ್ಳಿಪ್ಪಾಡಿ,ಉಪಾಧ್ಯಕ್ಷ ರಾಗಿ ವೆಂಕಟರಮಣ ನಾಯಕ್,ರಾಧಾಕೃಷ್ಣ ನಂದಿಲ,ತ್ರಿವೇಣಿ ಪೆರ್ವೋಡಿ, ವಿದ್ಯಾ ಕಿಣಿ,ಕಾರ್ಯದರ್ಶಿ ಯಾಗಿ ಧನ್ಯ ಕುಮಾರ್ ಬೆಳಂದೂರು,ಸಹ ಕಾರ್ಯದರ್ಶಿ ಯಾಗಿ ಸಚಿನ್ ಶೆಣೈ,ಕೋಶಾಧಿಕಾರಿಯಾಗಿ ಅನಿಲ್ ಕುಮಾರ್ ತೆಂಕಿಲ ಆಯ್ಕೆಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇ ಸಂದರ್ಭದಲ್ಲಿ ಬಜರಂಗದಳ ಪ್ರಾಂತ ಸಹ ಸಂಚಾಲಕ ಮುರಳಿ ಕೃಷ್ಣ ಹಸಂತ್ತಡ್ಕ,ವಿಶ್ವ ಹಿಂದೂ ಪರಿಷತ್ ನ ಪುತ್ತೂರು ಜಿಲ್ಲಾ ಅಧ್ಯಕ್ಷರಾದ ಡಾ. ಕ್ರಷ್ಣ ಪ್ರಸನ್ನ,ಜಿಲ್ಲಾ ಕಾರ್ಯದರ್ಶಿ ಸತೀಶ್ ಬಿ ಎಸ್,ಬಜರಂಗದಳ ಜಿಲ್ಲಾ ಸಂಚಾಲಕ್ ಶ್ರೀಧರ್ ತೆಂಕಿಲ,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್,ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ, ಪ್ರಖಂಡ ಕಾರ್ಯದರ್ಶಿ ನವೀನ್ ಕುಲಾಲ್,ಬಜರಂಗದಳ ಪ್ರಖಂಡ ಸಂಚಾಲಕ ನೀತಿನ್ ನಿಡ್ಪಳ್ಳಿ ಹಾಗೂ ಪ್ರಮುಖ ಕಾರ್ಯಕರ್ತರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು