ಕಾಸರಗೋಡು: ಶಬರಿಮಲೆಗೆ ಯುವತಿಯರಿಗೆ ಪ್ರವೇಶ ವಿಷಯಕ್ಕೆ ಸಂಬಂದಿಸಿದ ನಿರ್ಣಾಯಕ ಮಾಹಿತಿ ಬಹಿರಂಗಗೊಂಡಿದೆ.
ಯುವತಿಯರಿಗೆ ಪ್ರವೇಶ ನೀಡಬೇಕೆಂದು ಆಗ್ರಹಿಸಿ ಸುಪ್ರೀಮ್ ಕೋರ್ಟಿನ ಮೆಟ್ಟಿಲೇರಿದ್ದು ತಪ್ಪು ಗೃಹಿಕೆಯಿಂದಾಗಿದೆ ಎಂದು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ಸಲ್ಲಿಸಿದ್ದ ನ್ಯಾ.ಪ್ರೇರಣಾಕುಮಾರಿ, ನ್ಯಾ.ಸುಧಾ ಪಾಲ್ ಎಂಬವರು ಬಹಿರಂಗ ಪಡಿಸಿದ್ದಾರೆ. ತಾವೆಂದಿಗೂ ಆಸ್ತಿಕರೊಂದಿಗಿದ್ದೇವೆ. ಶಬರಿಮಲೆಗೆ ಪ್ರವೇಶಿಸಲು ೫೦ವಯಸ್ಸಿನ ವರೆಗೆ ಕಾಯಲು ಸಿದ್ಧರಿರುವ ಮಾತೆಯರ ಆಸ್ತಿಕ ಭಾವನೆಗಳನ್ನು ಮತ್ತು ಶ್ರೀ ಕ್ಷೇತ್ರದ ಧಾರ್ಮಿಕ ಆಚಾರಗಳನ್ನು ಗೌರವಿಸುತ್ತೇವೆ. ಇದೀಗ ಇರುವ ಆಚಾರ ಅನುಷ್ಠಾನಗಳು ಯಥಾಸ್ಥಿತಿಯಲ್ಲಿ ಮುಂದುವರಿಯಲು ಆಗ್ರಹಿಸುತ್ತಿರುವುದಾಗಿ ಅವರು ಸ್ಪಷ್ಟ ಪಡಿಸಿದ್ದಾರೆ.
ಇವರೂ ಸೇರಿದಂತೆ ಯಂಗ್ ಲಾಯರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ ಐದು ಮಂದಿ ಯುವತಿಯರು ಶಬರಿಮಲೆಗೆ ಪ್ರವೇಶಿಸಲು ಯುವತಿಯರಿಗೂ ಅವಕಾಶ ನೀಡಬೇಕೆಂದು ಆಗ್ರಹಿಸಿ ಅರ್ಜಿ ಸಲ್ಲಿಸಿದ್ದರು. ಇದರ ಹಿಂದೆ ಭಾರೀ ದೊಡ್ಡ ಮಟ್ಟಿನ ಸಂಚು ಇದೆ ಎನ್ನುವ ಭಕ್ತಾದಿಗಳ ಗಂಭೀರ ಆರೋಪಕ್ಕೆ ಯುವತಿಯರ ಮಧ್ಯೆಗಿನ ಬಿನ್ನಾಭಿಪ್ರಾಯಗಳೇ ಬಲವಾದ ಪುಷ್ಠಿ ನೀಡುತ್ತಿದೆ.