Monday, November 25, 2024
ರಾಷ್ಟ್ರೀಯಸುದ್ದಿ

ಮುಸ್ಲಿಂ ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡುವುದು ಇಸ್ಲಾಂ ವಿರೋಧಿ – ಮುಸ್ಲಿಂ ಮಹಿಳೆಯರು ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಳುವುದು ಮತ್ತು ಮಸೀದಿಗಳಲ್ಲಿ ನಮಾಜ್ ಮಾಡುವುದು ಇಸ್ಲಾಮಿಕ್ ಮೌಲ್ಯಗಳ ವಿರುದ್ಧ ಎಂದ ಜಾಮಾ ಮಸೀದಿ ಶಾಹಿ ಇಮಾಮ್ – ಕಹಳೆ ನ್ಯೂಸ್

ಮುುಸ್ಲಿಂ ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡುವುದು ಇಸ್ಲಾಂ ವಿರೋಧಿʼ ಎನ್ನುವ ಮೂಲಕ ಗುಜರಾತ್‌ನ ಅಹಮದಾಬಾದ್‌ನ ಜಾಮಾ ಮಸೀದಿಯ ಶಾಹಿ ಇಮಾಮ್ ಶಬ್ಬೀರ್ ಅಹ್ಮದ್ ಸಿದ್ದಿಕಿ ಅವರು ರಾಜಕೀಯದಲ್ಲಿ ಮುಸ್ಲಿಂ ಮಹಿಳೆಯರ ಭಾಗವಹಿಸುವಿಕೆಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಸ್ಲಿಂ ಮಹಿಳೆಯರಿಗೆ ಚುನಾವಣಾ ಟಿಕೆಟ್ ನೀಡುತ್ತಿರುವುದು ಇಸ್ಲಾಂಗೆ ವಿರುದ್ಧ ಮತ್ತು ಆ ಮೂಲಕ ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

“ನಮ್ಮ ಇಸ್ಲಾಂ ಧರ್ಮದ ಬಗ್ಗೆ ನಿಮಗೆ ಕೆಲವೊಂದು ವಿಚಾರಗಳನ್ನು ಹೇಳುತ್ತೇನೆ . ಮುಸ್ಲಿಂ ಮಹಿಳೆಯರಿಗೆ ಈ ರೀತಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವಕಾಶ ನೀಡಿದರೆ ಅವರನ್ನು ಮಸೀದಿ ಆವರಣಕ್ಕೆ ಬಂದು ಮಾಡುವುದರಿಂದ ನಿಷೇಧಿಸಲಾಗುವುದಿಲ್ಲ. ಮಸೀದಿಗಳಲ್ಲಿ ಅವರಿಗೆ ಇದಕ್ಕೆಲ್ಲ ಅವಕಾಶವಿಲ್ಲ, ಏಕೆಂದರೆ ಮಹಿಳೆಯರು ಇಸ್ಲಾಂನಲ್ಲಿ ಒಂದು ನಿರ್ದಿಷ್ಟ ಸ್ಥಾನವನ್ನು ಹೊಂದಿದ್ದಾರೆ. ಆದ್ದರಿಂದ ಮಹಿಳೆಯರಿಗೆ ಚುನಾವಣೆ ಟಿಕೆಟ್ ನೀಡುವರು ಇಸ್ಲಾಮಿಕ್ ಮೌಲ್ಯಗಳ ವಿರುದ್ಧ ಬಂಡಾಯವೆದ್ದವರು ಎಂದು ನಾವು ಪರಿಗಣಿಸುತ್ತೇವೆ. ಅಷ್ಟಕ್ಕೂ ರಾಜಕೀಯದಲ್ಲಿ ಮಹಿಳೆಯರೇಕೆ ಬೇಕು? ಅಲ್ಲಿ ಗಂಡಸರು ಇಲ್ಲವೇ? ಅವರು ಕಾಜಕೀಯವನ್ನು ಮುಂದುವರಿಸುತ್ತಾರೆ ಬಿಡಿ. ನೀವು ಮಹಿಳೆಯರನ್ನು ಎಂಎಲ್‌ಎ, ಕೌನ್ಸಿಲರ್‌ಗಳನ್ನಾಗಿ ಮಾಡುವುದನ್ನು ಮುಂದುವರಿಸಿದರೆ ನಾವು ಹಿಜಾಬ್ ಅನ್ನು ರಕ್ಷಿಸಲು ಸಹ ಸಾಧ್ಯವಾಗುವುದಿಲ್ಲ” ಎಂದು ಇಮಾಮ್‌ ಹೇಳಿದ್ದಾರೆ.
ಕರ್ನಾಟಕದ ಹಿಜಾಬ್ ವಿವಾದವನ್ನು ಉಲ್ಲೇಖಿಸಿದ ಇಮಾಂ, “ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವುದು ಹಿಜಾಬ್‌ ರಕ್ಷಿಸಿಕೊಳ್ಳುವಂತಹ ವಿಷಯಗಳಲ್ಲಿ ನ್ಯಾಯಾಲಯದಲ್ಲಿ ನಮ್ಮ ವಾದವನ್ನು ದುರ್ಬಲಗೊಳಿಸುತ್ತದೆ. ಮುಸ್ಲಿಂ ಮಹಿಳೆಯರು ಅಸೆಂಬ್ಲಿ ಹಾಲ್‌ಗಳು, ಸಂಸತ್ತು, ಪುರಸಭೆಗಳಲ್ಲಿ ಓಡಾಡಿಕೊಂಡಿದ್ದರೆ, ಹಿಜಾಬ್ ಅಗತ್ಯವೇನಿದೆ ಎಂದು ನ್ಯಾಯಾಲಯವು ಕೇಳುತ್ತದೆ” ಎಂದು ಅವರು ಮುಸ್ಲಿಮರನ್ನು ಆಕ್ಷೇಪಿಸಿದ್ದಾರೆ.

“ನಮ್ಮ ದೇಶದಲ್ಲಿ ಒಂದು ನಿರ್ದಿಷ್ಟ ಕ್ಷೇತ್ರದಿಂದ ಮಾತ್ರ ಮಹಿಳೆಯರು ಸ್ಪರ್ಧಿಸಬಹುದು ಎಂದು ಕಡ್ಡಾಯಗೊಳಿಸುವ ಕಾನೂನು ಇದ್ದಿದ್ದರೆ ಬಲವಂತದಿಂದ ಅದನ್ನು ಅನುಮತಿಸಬಹುದಿತ್ತು. ಆದರೆ ಅನಗತ್ಯವಾಗಿ ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಅಗತ್ಯವಿಲ್ಲ ಎಂದು ಅವರು ಹೇಳಿದರು.
ಶಾಹಿ ಇಮಾಮ್ ದೆಹಲಿ ಎಂಸಿಡಿ ಚುನಾವಣೆಯನ್ನು ಉಲ್ಲೇಖಿಸಿ ʼಪಕ್ಷಗಳು ಮಹಿಳೆಯರನ್ನು ರಾಜಕೀಯದಲ್ಲಿ ತೊಡಗಿಸಿಕೊಳ್ಳುತ್ತವೆ ಮತ್ತು ಟೋಕನಿಸಂಗಾಗಿ ಮಾತ್ರ ಅವರಿಗೆ ಟಿಕೆಟ್ ನೀಡುತ್ತವೆʼ ಎಂದು ಆರೋಪಿಸಿದರು.
ಮುಸ್ಲಿಮರು ವಾಟ್ಸಾಪ್‌ನಲ್ಲಿ ಪರಸ್ಪರ ಸಂದೇಶಗಳನ್ನು ಕಳುಹಿಸುತ್ತ ಸಂಪರ್ಕದಲ್ಲಿದ್ದಾರೆ. ಮತ್ತು 2012 ರ ಚುನಾವಣೆಯನ್ನು ಪರಸ್ಪರ ನೆನಪಿಸಿಕೊಳ್ಳುತ್ತಿದ್ದಾರೆ ಎಂದು ಸಿದ್ದಿಕಿ ಈ ಹಿಂದೆ ಹೇಳಿದ್ದರು. 2012 ರ ಚುನಾವಣೆಯ ಸಮಯದಲ್ಲಿ, ಮುಸ್ಲಿಂ ಮತಗಳು ವಿಭಜನೆಯಾದ ಕಾರಣ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯು ಮುಸ್ಲಿಂ ಬಾಹುಳ್ಯದ ಜಮಾಲ್‌ಪುರದ ಸ್ಥಾನವನ್ನು ಗೆದ್ದಿದ್ದರು ಎಂದು ಅವರು ಹೇಳಿದರು.

ಇತ್ತೀಚೆಗೆ ಡಿಸೆಂಬರ್ 2 ರಂದು ಅಸ್ಸಾಂ ಸಂಸದ ಬದ್ರುದ್ದೀನ್ ಅಜ್ಮಲ್ ಹಿಂದೂಗಳ ವಿರುದ್ಧ ಅತ್ಯಂತ ಆಘಾತಕಾರಿ ಕಾಮೆಂಟ್‌ಗಳನ್ನು ಮಾಡಿದ್ದರು. ‘ಜನಸಂಖ್ಯಾ ಬೆಳವಣಿಗೆಯ ಮುಸ್ಲಿಂ ಸೂತ್ರವನ್ನು ನಕಲಿಸಲು’ ಹಿಂದೂಗಳು ತಮ್ಮ ಹೆಣ್ಣುಮಕ್ಕಳನ್ನು 18-20 ವರ್ಷ ವಯಸ್ಸಿನಲ್ಲೇ ಮದುವೆಯಾಗಬೇಕು ಎಂದು ಹೇಳಿದ್ದರು. ಹಿಂದೂಗಳಿಗೆ ಸಮಸ್ಯೆ ಇದೆ – ಅವರ ಜನಸಂಖ್ಯೆಯು ಮುಸ್ಲಿಮರ ವೇಗದಲ್ಲಿ ಬೆಳೆಯುತ್ತಿಲ್ಲ ಎಂದು ಅಜ್ಮಲ್ ಕುಹಕವಾಡಿದ್ದರು.