Monday, November 25, 2024
ದಕ್ಷಿಣ ಕನ್ನಡರಾಜ್ಯಸುದ್ದಿ

ಪಂಪ್‌ವೆಲ್ ವೃತ್ತದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ; ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಆಕ್ಷೇಪ – ಕಹಳೆ ನ್ಯೂಸ್

ನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ನ ಬೇಡಿಕೆಯನ್ನು ಪರಿಗಣಿಸಿ ನಗರದ ಮಹಾವೀರ್ ವೃತ್ತದಲ್ಲಿ (ಪಂಪ್‌ವೆಲ್ ವೃತ್ತ) ಶಿವಾಜಿ ಪ್ರತಿಮೆ ಸ್ಥಾಪಿಸುವ ಕಾರ್ಯಸೂಚಿಗೆ ಅನುಮೋದನೆ ನೀಡಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು: ನಗರದಲ್ಲಿ ಛತ್ರಪತಿ ಶಿವಾಜಿ ಪ್ರತಿಮೆ (Chhatrapati Shivaji statue) ಸ್ಥಾಪಿಸುವ ಪ್ರಸ್ತಾವನೆಗೆ ಮಂಗಳೂರು ಮಹಾನಗರ ಪಾಲಿಕೆ (ಎಂಸಿಸಿ) ಕೌನ್ಸಿಲ್‌ನಲ್ಲಿ ಕಾಂಗ್ರೆಸ್ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಛತ್ರಪತಿ ಶಿವಾಜಿ ಮರಾಠ ಅಸೋಸಿಯೇಷನ್‌ನ ಬೇಡಿಕೆಯನ್ನು ಪರಿಗಣಿಸಿ ನಗರದ ಮಹಾವೀರ್ ವೃತ್ತದಲ್ಲಿ (ಪಂಪ್‌ವೆಲ್ ವೃತ್ತ) ಶಿವಾಜಿ ಪ್ರತಿಮೆ ಸ್ಥಾಪಿಸುವ ಕಾರ್ಯಸೂಚಿಯನ್ನು ಅಕ್ಟೋಬರ್ 29 ರಂದು ಎಂಸಿಸಿ ತನ್ನ ಸಭೆಯಲ್ಲಿ ಅನುಮೋದಿಸಿತು.

ಬುಧವಾರ ಕೌನ್ಸಿಲ್ ಸಭೆ ಸೇರಿದಾಗ, ವಿರೋಧ ಪಕ್ಷದ ನಾಯಕ ನವೀನ್ ಡಿಸೋಜಾ ಅವರು ಕರ್ನಾಟಕದ ವಿರುದ್ಧ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಲುವನ್ನು ಎತ್ತಿ ಹಿಡಿದ ಕ್ರಮವನ್ನು ವಿರೋಧಿಸಿದರು. ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಶಾಂತಿ ಕದಡಲು ಎಂಇಎಸ್ ಯತ್ನಿಸುತ್ತಿರುವ ಸಂದರ್ಭದಲ್ಲಿ ನಗರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವುದು ಸರಿಯಲ್ಲ ಎಂದರು. ಶಿವಾಜಿ ಪ್ರತಿಮೆಯ ಬದಲು ತುಳುನಾಡಿನ ಅವಳಿ ಯೋಧರಾದ ಕೋಟಿ-ಚೆನ್ನಯರ ಪ್ರತಿಮೆ ಸ್ಥಾಪಿಸಬಹುದು ಎಂದು ಸಲಹೆ ನೀಡಿದರು.

ಕರಾವಳಿ ಭಾಗದ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಸಾಧಕರೊಬ್ಬರ ಪ್ರತಿಮೆಯನ್ನು ಪರಿಗಣಿಸಬೇಕು ಎಂದು ಕಾಂಗ್ರೆಸ್ ಸದಸ್ಯ ಶಶಿಧರ ಹೆಗಡೆ ಹೇಳಿದರು. ಬಿಜೆಪಿ ಸದಸ್ಯರು ಕಾಂಗ್ರೆಸ್ ಈ ಮಾತಿಗೆ ಪ್ರತಿಯಾಗಿ, ಹಿಂದೂ ನಾಯಕರನ್ನು ವಿರೋಧಿಸುವುದನ್ನು ಕಾಂಗ್ರೆಸ್ ಅಭ್ಯಾಸ ಮಾಡಿಕೊಂಡಿದೆ. ಶಿವಾಜಿ ಹೆಸರನ್ನು ಮಹಾರಾಷ್ಟ್ರಕ್ಕೆ ಸೀಮಿತಗೊಳಿಸಬಾರದು ಎಂದು ಪಕ್ಷದ ಕಾರ್ಪೊರೇಟರ್‌ಗಳು ಹೇಳಿದರು. ಕಾರ್ಪೊರೇಟರ್‌ಗಳ ನಡುವೆ ಮಾತಿನ ಚಕಮಕಿ ಮುಂದುವರಿದಾಗ ಪಾಲಿಕೆ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಅವರು ಪ್ರಸ್ತಾವನೆಗೆ ಈಗಾಗಲೇ ಕಳೆದ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಪ್ರತಿಪಕ್ಷಗಳ ಆಕ್ಷೇಪಣೆಗಳನ್ನು ದಾಖಲಿಸಲಾಗಿದೆ ಎಂದು ಹೇಳಿದರು.