Thursday, January 23, 2025
ಬೆಂಗಳೂರುಸುದ್ದಿ

ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೆ, ಒಂದು ಲೀಟರ್ ನೀರು ಕುಡಿದು, ರಗ್ಗು ಹೊದ್ದು ಮಲಗಿ : ಮಂಜಮ್ಮ ಜೋಗತಿ –ಕಹಳೆ ನ್ಯೂಸ್

ಯಾವುದೇ ಕಾರಣಕ್ಕೆ ಯಾರಿಗಾದರೂ ಆತ್ಮಹತ್ಯೆ ಮಾಡಿಕೊಳ್ಳಬೇಕೆನಿಸಿದರೆ, ಒಂದು ಲೀಟರ್ ನೀರು ಕುಡಿದು, ರಗ್ಗು ಹೊದ್ದು ಮಲಗುವಂತೆ ಮಂಜಮ್ಮ ಜೋಗತಿ ಸಲಹೆ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾನುವಾರ ಬೆಂಗಳೂರಿನಲ್ಲಿ ನಡೆದ ಸಾಹಿತ್ಯ ಉತ್ಸವದಲ್ಲಿ ‘ನಡುವೆ ಸುಳಿವ ಹೆಣ್ಣು’ ವಿಚಾರದ ಕುರಿತು ಅನುಭವ ಹೇಳಿಕೊಳ್ಳುವ ಕರ‍್ಯಕ್ರಮದಲ್ಲಿ ಮಂಜಮ್ಮ ಜೋಗತಿ ತಮ್ಮ ಬದುಕಿನ ಕಷ್ಟಗಳ ಪುಟಗಳನ್ನು ಮೆಲುಕು ಹಾಕಿ, ಯುವ ಜನತೆಗೆ ಸಲಹೆ ನೀಡಿದ್ದಾರೆ.

‘ದಾವಣಗೆರೆಯ ಹೈಸ್ಕೂಲು ಮೈದಾನದ ಫುಟ್‌ಪಾತ್ ಬಳಿ ಐವರು ನನ್ನ ಮೇಲೆ ದರ‍್ಜನ್ಯ ಮಾಡಿದರು. ಈ ಸಂರ‍್ಭದಲ್ಲಿ ಸಾಗುವ ರೈಲಿಗೆ ದೇಹ ಕೊಟ್ಟು, ಛಿದ್ರವಾಗಿಬಿಡಬೇಕು ಎಂಬ ನರ‍್ಧಾರ ಆ ಘಟನೆಯ ನಂತರ ಮೂಡಿತು. ಆತ್ಮಹತ್ಯೆಯ ನರ‍್ಧಾರಕ್ಕೆ ಬಂದದ್ದು ಇದು ಎರಡನೇ ಸಲ. ಮೊದಲ ಸಲ ನೊಂದು ಭಿಕ್ಷೆ ಬೇಡಿದ ಹಣದಲ್ಲಿ ಟಿಕ್‌ಟ್ವೆಂಟಿ ತಂದು ಅದನ್ನ ಕುಡಿದಿದ್ದೆ. ಆದ್ರೀ ಬದುಕಿದೆ. ಈ ಸಲ ಸಾಯಬೇಕು ಅಂದುಕೊಂಡರೂ ಎರಡನೇ ಮನಸ್ಸು ಬದುಕು ಎಂದಿತು. ಈ ಹೊತ್ತಿನಲ್ಲಿ ನಾನು ಒಂದು ಚೊಂಬು ನೀರು ಕುಡಿದು, ಹೊದ್ದು ಮಲಗಿಬಿಟ್ಟೆ. ಆಮೇಲೆ ಎಂದೂ ಸಾಯುವ ನರ‍್ಧಾರ ಕೈಗೊಳ್ಳಲಿಲ್ಲ ಎಂದು ಮನಕಲುಕುವಂತೆ ತಮ್ಮ ನೋವನ್ನ ಹೊರಹಾಕಿದ್ದರು.
ಹುಡುಗನಾಗಿದ್ದ ತಮ್ಮಲ್ಲಿ ಹೆಣ್ಣಾಗುವ ಬಯಕೆ ಮೂಡಿದ್ದು, ಅದಕ್ಕೆ ಸಮಾಜದಿಂದ ಸವಾಲುಗಳು ಎದುರಾಯಿತು. ತಂದೆ-ತಾಯಿಯೇ ಮನೆಯಿಂದ ಹೊರಹಾಕುವಾಗಲೂ ಹೋಳಿಗೆ ತಿನಿಸಿ ಕಳುಹಿಸಿದ್ದು, ಮುತ್ತು ಕಟ್ಟಿಸಿ ಪರಿಹಾರಕ್ಕೆ ಹುಡುಕಾಡಿದ್ದು, ಭಿಕ್ಷಾಟನೆ ಬೇಡಿದ್ದು, ಯಲ್ಲಮ್ಮ ಜೋಗತಿಯಾಗಿ ಗೆದ್ದದ್ದು ಎಲ್ಲವನ್ನೂ ಅವರು ತುಂಬಿದ ವೇದಿಕೆಯಲ್ಲಿ ಮೆಲುಕು ಹಾಕಿದರು.