Wednesday, January 22, 2025
ಸುದ್ದಿ

AU Creations ನಿರ್ಮಾಣದಲ್ಲಿ ಹೊಸ ಕನ್ನಡ ಫ್ಯೂಷನ್ ಸಾಂಗ್ “ಶಾಂತಿನಗರ ಕ್ಷೇತ್ರದೊಡೆಯನೇ” ಯ ಪೋಸ್ಟರ್ ಬಿಡುಗಡೆ – ಕಹಳೆ ನ್ಯೂಸ್

ಉಪ್ಪಿನಂಗಡಿ : ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಕಲ ಸಿದ್ದತೆಗಳು ನಡೆಯುತ್ತಿದೆ. ಇದೀಗ ಪುಣ್ಯ ಕ್ಷೇತ್ರದಲ್ಲಿ ನೆಲೆಯಾಗಿರುವ ಶ್ರೀ ಮಹಾವಿಷ್ಣು ದೇವರನ್ನ ಭಕ್ತಿಯಿಂದ ಸ್ಮರಿಸುವ ಹಾಡು ಸಿದ್ದವಾಗಿದ್ದು ಇಂದು ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆದಿದೆ.

ಕನ್ನಡ ಫ್ಯೂಷನ್ ಸಾಂಗ್ ‘ಶಾಂತಿನಗರ ಕ್ಷೇತ್ರದೊಡೆಯನೇ’ AU Creations ನಿರ್ಮಾಣದಲ್ಲಿ ಮೂಡಿ ಬಂದಿದ್ದು, ಪದ್ಯದ ಸಾಹಿತ್ಯವನ್ನು ಚಿದು ಪಾಂಗಲ್ಪಾಡಿ ಬರೆದಿದ್ದು, ತೇಜಸ್ವಿನಿ ಕುಕ್ಕಿಲ ಇವರು ಹಾಡಿದ್ದಾರೆ. ಇದರ ಛಾಯಾಗ್ರಹಣವನ್ನು ಪ್ರಸಾದ್ ಸ್ಟುಡಿಯೋದ ಚಂದ್ರಶೇಖರ್ ಶೆಟ್ಟಿ ಮತ್ತು ಅಶ್ವಥ್ ಇವರು ಮಾಡಿದ್ದು, ಸಂಕಲನವನ್ನು ಹಿತೇಶ್ ಪಮ್ಮನಮಜಲು ಮಾಡಿದ್ದಾರೆ. ಕೀರ್ತಿರಾಜ್.ಕೆ ಇವರು ಸಾಂಗ್‌ನ ಸಂಗೀತವನ್ನು ಮಾಡಿದ್ದು, ಶಾಂತಿನಗರ ಕ್ಷೇತ್ರದೊಡೆಯನೇ ಪದ್ಯದ ನಿರ್ದೇಶನವನ್ನು ಅಚಲ್ ಉಬರಡ್ಕ ಇವರು ಮಾಡಿರುತ್ತಾರೆ.
ಪೋಸ್ಟರನ್ನು ತಲಕಾವೇರಿಯ ಅನುವಂಶಿಕ ಅರ್ಚಕರಾದ ಟಿ.ಎಸ್ ಸುಧೀರ್ ಆಚಾರ್ ಇವರು ಬಿಡುಗಡೆಗೊಳಿಸಿದರು. ಈ ಸಂಧರ್ಭದಲ್ಲಿ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯು ಜಿ ರಾಧ, ಅರ್ಚಕರಾದ ನಾಗರಾಜ ಭಟ್, ಸಾಯಿ ಗೀತ, ದಿವ್ಯ ಸುಧೀರ್, ಸುಜಿತ್ ಶಾಂತಿನಗರ, ಶ್ಯಾಮಲ ನಾಗರಾಜ್ ಹಾಗೂ ಸಾಂಗ್‌ನ ತಂಡದವರು ಉಪಸ್ಥಿತರಿದ್ದರು. ಈ ಪದ್ಯದ ಚಿತ್ರೀಕರಣ ಪೂರ್ಣಗೊಂಡಿದ್ದು ಬಿಡುಗಡೆÀಯ ದಿನಾಂಕವನ್ನು ಚಿತ್ರತಂಡ ಸದ್ಯದಲ್ಲೇ ಹೇಳಲಿದೆ.