Wednesday, January 22, 2025
ಸುದ್ದಿ

ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕನಗರ ತೆಂಕಿಲದಲ್ಲಿ ಡಿ. 10 ರಂದು ‘ಸಾಂಸ್ಕೃತಿಕ ಸಮನ್ವಯ 2022 ಮಕ್ಕಳ ಸಾಂಸ್ಕೃತಿಕ ಹಬ್ಬ’ –ಕಹಳೆ ನ್ಯೂಸ್

ಪುತ್ತೂರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕನಗರ ತೆಂಕಿಲ, ಇದರ ಆಶ್ರಯದಲ್ಲಿ ಡಿಸೆಂಬರ್ 10 ರಂದು ‘ಸಾಂಸ್ಕೃತಿಕ ಸಮನ್ವಯ 2022 ಮಕ್ಕಳ ಸಾಂಸ್ಕೃತಿಕ ಹಬ್ಬ’ ಕಾರ್ಯಕ್ರಮವು ನಡೆಯಲಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಡಾ. ಕೆ.ಎಂ.ಕೃಷ್ಣ ಭಟ್ ವಹಿಸಲಿದ್ದು, ದ್ವಾರಕಾ ಕನ್‌ಸ್ಟçöಕ್ಷನ್ ನ ಮಾಲಕರಾದ ಗೋಪಾಲ ಕೃಷ್ಟ ಭಟ್ ಕಾರ್ಯಕ್ರಮವನ್ನ ದೀಪ ಪ್ರಜ್ವಲಿಸಿ ಉದ್ಘಾಟಿಸಲಿದ್ದಾರೆ, ಇದೇ ವೇಳೆ ಕ್ಷೇತ್ರ ಶಿಕ್ಷಣಧಿಕಾರಿ ಶ್ರೀ ಲೋಕೇಶ್ ಎಸ್ ಆರ್, ಶಾಲಾ ಸಂಚಿಕೆ ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿ ಪುತ್ತೂರು ನಗರ ಸಭೆಯ ಸದಸ್ಯರಾದ ಪಿ.ಜಿ. ಜಗನ್ನಿವಾಸ್ ರಾವ್, ಮುಖ್ಯ ಸಲಹೆಗಾರರಾದ ರಮೇಶ್ ಕೆ, ಹಿರಿಯ ವಿದ್ಯಾರ್ಥಿ ಡಾ. ಚಂದನ್ ಪಾಲ್ಗೋಳ್ಳಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು