ಮಂಗಳೂರು ವಿವಿ ಆವರಣದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಪ್ರತಿಮೆ ಅನಾವರಣಗೊಳಿಸಿದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ – ಕಹಳೆ ನ್ಯೂಸ್
ಮಂಗಳೂರು: ಡಾ. ಬಿ ಆರ್ ಅಂಬೇಡ್ಕರ್ ಸಮಾಜದ ಎಲ್ಲಾ ವರ್ಗಗಳಿಗೂ ಸೇರಿದವರು. ಎಲ್ಲರ ನಡುವೆ ಸಮಾನತೆ, ಸಮರಸತೆ ತರಲು ಪ್ರಯತ್ನಿಸಿದವರು. ಈ ಚಿಂತನೆ ಅವರು ರಚಿಸಿದ ಸಂವಿಧಾನದಲ್ಲೂ ಪ್ರತಿಫಲಿಸುತ್ತದೆ. ಈಗಿನ ಪರಿಸ್ಥಿತಿಯಲ್ಲಿ ಅವುಗಳ ಜಾರಿ ಅಗತ್ಯವಾಗಿದೆ, ಎಂದು ಕರ್ನಾಟಕದ ರಾಜ್ಯಪಾಲ, ಮಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಗಳೂ ಆಗಿರುವ ಥಾವರ್ ಚಂದ್ ಗೆಹ್ಲೋಟ್ ಅಭಿಪ್ರಾಯಪಟ್ಟರು.
ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ರವರ 66 ನೇ ಮಹಾ ಪರಿನಿರ್ವಾಣ ದಿನವಾದ ಡಿ. 6ರಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ವಿಭಾಗದ ಬಳಿ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ಮೂಲಕ ಸ್ಥಾಪಿಸಲಾಗಿರುವ ಬಾಬಾಸಾಹೇಬರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಮಂಗಳಾ ಸಭಾಂಗಣದಲ್ಲಿ ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅತ್ಯುನ್ನತ ಶಿಕ್ಷಣ ಪಡೆದಿದ್ದ ಅಂಬೇಡ್ಕರ್ ತಮ್ಮ ಸುಖಜೀವನವನ್ನು ನಿರ್ಲಕ್ಷಿಸಿ ಸಮಾಜದ ಲೋಪಗಳನ್ನು ತಿದ್ದಲು ಪ್ರಯತ್ನಿಸಿದರು, ಎಂದರು.
“ಅವರ ಕೊಡುಗೆಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಈಗ ನಡೆದಿದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಹಲವರ ಪ್ರಯತ್ನದಿಂದ ಅಂಬೇಡ್ಕರ್ ಅವರ ಜನ್ಮಸ್ಥಳವಾದ ಮಾಹೋದಲ್ಲಿ ಅವರ ಸ್ಮಾರಕ ನಿರ್ಮಾಣವಾಗಿದೆ.
ಈಗಿನ ಪ್ರಧಾನಿ ನರೇಂದ್ರ ಮೋದಿಯವರ ಅವಧಿಯಲ್ಲಿ ಅಂಬೇಡ್ಕರ್ ಅವರನ್ನು ಎಲ್ಲರೂ ಅರಿಯಬೇಕು ಎಂಬ ಉದ್ದೇಶದಿಂದ ಅಂಬೇಡ್ಕರ್ ಅಂತಾರಾಷ್ಟ್ರೀಯ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಅಂಬೇಡ್ಕರ್ ಅವರ ಜನ್ಮಭೂಮಿ, ಶಿಕ್ಷಾ ಭೂಮಿ, ಕರ್ಮ ಭೂಮಿ, ದೀಕ್ಷಾ ಭೂಮಿ, ಪರಿನಿರ್ವಾಣ ಭೂಮಿ ಹಾಗೂ ಚೈತ್ಯ ಭೂಮಿಗಳು ಅಂಬೇಡ್ಕರ್ ಅವರ ಸಮಗ್ರ ಪರಿಚಯ ನೀಡುತ್ತವೆ,” ಎಂದರು.
ಡಾ. ಬಿ. ಆರ್. ಅಂಬೇಡ್ಕರ್ರವರ ಪುತ್ಥಳಿ ಸ್ಥಾಪಿಸಿದ ಮಂಗಳೂರು ವಿವಿಯನ್ನು ಅಭಿನಂದಿಸಿದ ರಾಜ್ಯಪಾಲರು, ಪುತ್ಥಳಿಯ ಮೂಲಕ ಅವರ ಸತ್ಕರ್ಮಗಳನ್ನು ಅರಿತು ಅಳವಡಿಸಿಕೊಳ್ಳುವಂತಾಗಲಿ, ಎಂದು ಹಾರೈಸಿದರು. ಇದೇ ವೇಳೆ ಅವರು ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಅಧ್ಯಯನ ಪೀಠ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ಅಗತ್ಯ ಬೆಂಬಲ ನೀಡುತ್ತೇನೆ, ಎಂಬ ಭರವಸೆ ನೀಡಿದರು.
ಮಹಾತ್ಮ ಗಾಂಧಿ ತೋಟಗಾರಿಕೆ ಮತ್ತು ಅರಣ್ಯ ವಿಶ್ವವಿದ್ಯಾನಿಲಯ, ದುರ್ಗ್, ಛತ್ತೀಸ್ಘರ್ ಕುಲಪತಿ ಮತ್ತು ಡಾ. ಬಿ. ಆರ್. ಅಂಬೇಡ್ಕರ್ ವಿಶ್ವವಿದ್ಯಾನಿಲಯ ಸಮಾಜ ವಿಜ್ಞಾನಗಳು, ಮಾಹೊ ಇಲ್ಲಿನ ಸಂಸ್ಥಾಪಕ ಕುಲಪತಿ ಪೆÇ್ರ. ಆರ್. ಎಸ್. ಕುರೀಲ್ ಅವರು ಡಾ ಬಿ ಆರ್ ಅಂಬೇಡ್ಕರ್ ಅವರ ಜೀವನದ ಮಹತ್ತರ ಘಟ್ಟಗಳು, ಸಾಧನೆಗಳನ್ನು ವಿವರಿಸಿದರು. ಸಂವಿಧಾನವೇ ಅಂಬೇಡ್ಕರ್ ಅವರು ಸಮಾಜದ ಸಮಸ್ಯೆಗಳಿಗೆ ನೀಡಿದ ಪರಿಹಾರ ಎಂದು ಬಣ್ಣಿಸಿದ ಅವರು, ಅಂಬೇಡ್ಕರ್ ಅವರಂತೆಯೇ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ನಾರಾಯಣ ಗುರುಗಳಿಗೆ ʼಭಾರತ ರತ್ನʼ ನೀಡಬೇಕು. ಸಾಮಾಜಿಕ ನ್ಯಾಯ ಹಾಗೂ ಬಡವರ್ಗಗಳ ಏಳಿಗೆಗೆ ಪ್ರತ್ಯೇಕ ವಿಶ್ವವಿದ್ಯಾನಿಲಯ ಸ್ಥಾಪಿಸಬೇಕು, ಎಂದು ಆಗ್ರಹಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪೆÇ್ರ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಸಾಮಾಜಿಕ ಸಮಾನತೆ ಪಾಲಿಸುವುದೇ ನಾವು ಅಂಬೇಡ್ಕರ್ ಅವರಿಗೆ ಸಲ್ಲಿಸಬಹುದಾದ ಅತ್ಯುತ್ತಮ ಗೌರವ, ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಬಿ. ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕ ಪೆÇ್ರ. ವಿಶ್ವನಾಥ ಧನ್ಯವಾದ ಸಮರ್ಪಿಸಿದರು. ಪ್ರಾಧ್ಯಾಪಕರಾದ ಡಾ. ಧನಂಜಯ ಕುಂಬ್ಳೆ ಹಾಗೂ ಪ್ರೀತಿ ಕೀರ್ತಿ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕುಲಸಚಿವ ಡಾ. ಸಿ.ಕೆ. ಕಿಶೋರ್ ಕುಮಾರ್, ಕುಲಸಚಿವ (ಪರೀಕ್ಷಾಂಗ) ಡಾ. ಪಿ ಎಲ್ ಧರ್ಮ, ಸಿಂಡಿಕೇಟ್ ಸದಸ್ಯರು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.
ಪ್ರತಿಮೆಯ ವಿಶೇಷ:
ಸುಮಾರು 9 ಅಡಿ ಎತ್ತರದ ಕಂಚಿನ ಪ್ರತಿಮೆ 600 ಕೆಜಿಗೂ ಹೆಚ್ಚು ತೂಕವಿದೆ. ಸುಮಾರು 14. 30 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರತಿಮೆಯನ್ನು ವಿಶ್ವವಿದ್ಯಾನಿಲಯದ ಕ್ಯಾಂಪಸ್ನ ವಿಜ್ಞಾನ ಸಂಕೀರ್ಣದ ಮುಂಬಾಗದಲ್ಲಿರುವ ಹೂದೋಟದ ಬಳಿ ಸ್ಥಾಪಿಸಲಾಗಿದೆ. ಇದರಿಂದ ಪ್ರತಿಮೆ ಎಲ್ಲರ ಗಮನ ಸೆಳೆಯುತ್ತಿದೆ.