Monday, January 20, 2025
ಕ್ರೈಮ್ಸುದ್ದಿ

ನಾನು ಬಾಯ್ಬಿಟ್ಟರೆ ರಾಜ್ಯದ ಸನ್ನಿವೇಶವೇ ಬದಲು : 18 ಶಾಸಕರನ್ನು, 25 ಪ್ರಭಾವಿಗಳನ್ನು ಬಲೆಗೆ ಕೆಡವಿದ ಹನಿಟ್ರ್ಯಾಪ್ ಕ್ವೀನ್​ ಅರ್ಚನಾ ವಾರ್ನಿಂಗ್..!​ – ಕಹಳೆ ನ್ಯೂಸ್

ಭುವನೇಶ್ವರ್​: ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಒಡಿಶಾ ಪೊಲೀಸರಿಂದ ಬಂಧನವಾಗಿರುವ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್, ನಾನು ಬಾಯಿ ಬಿಟ್ಟರೆ ಒಡಿಶಾದ ಇಡೀ ಸನ್ನಿವೇಶವೇ ಬದಲಾಗಲಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅರ್ಚನಾಳ ಹನಿಟ್ರ್ಯಾಪ್​ನಲ್ಲಿ ನಡೆದಿರುವ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿದೆ. ಆರೋಪಿಯನ್ನು 7 ದಿನಗಳ ಕಾಲ ಇಡಿ ತನ್ನ ಕಸ್ಟಡಿಗೆ ತೆಗೆದುಕೊಂಡಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸುವ ಮುನ್ನ ಝಾರ್ಪದ ಜೈಲಿನಿಂದ ವೈದ್ಯಕೀಯ ತಪಾಸಣೆಗೆಂದು ಕ್ಯಾಪಿಟಲ್​ ಹಾಸ್ಪಿಟಲ್​ಗೆ ಕರೆದೊಯ್ಯಲಾಯಿತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅರ್ಚನಾ, ಹಲವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.

ಒಂದು ವೇಳೆ ನಾನೇನಾದರೂ ಬಾಯಿ ಬಿಟ್ಟರೆ ಒಡಿಶಾದ ಇಡೀ ಸನ್ನಿವೇಶ ಬದಲಾಗಲಿದೆ. ಎಲ್ಲವನ್ನು ವಿವರಿಸಲು ನನಗೆ ಸಾಕಷ್ಟು ಕಾಲಾವಕಾಶ ಬೇಕಿದೆ. ಕನಿಷ್ಠ ಪಕ್ಷ ಅರ್ಧ ಗಂಟೆ ಸಮಯ ಕೊಡಿ, ನಾನು ನಿಮಗೆ ಎಕ್ಸ್​ಕ್ಲೂಸಿವ್​ ಸಾಕ್ಷಿಯನ್ನು ಕೊಡುತ್ತೇನೆ. ಈ ಪ್ರಕರಣದಲ್ಲಿ ನಾನೂ ಕೂಡ ಬಲೆಗೆ ಸಿಲುಕಿದ್ದೇನೆ. ಆದರೆ, ನಾನು ಯಾರನ್ನೂ ಬಿಡುವುದಿಲ್ಲ ಎಂದು ಹೇಳಿದ್ದಾಳೆ.

ಒಡಿಶಾ ಸಿನಿಮಾ ನಿರ್ಮಾಪಕ ಅಕ್ಷಯ ಪಾರಿಜಾ ವಿರುದ್ಧ ಲಕ್ಷ್ಮೀಸಾಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ದಿನದಿಂದಲೂ ತನ್ನ ಸಹವರ್ತಿ ಶ್ರದ್ಧಾಂಜಲಿ ಬೆಹೆರಾ ಕರೆ ದಾಖಲೆಗಳನ್ನು ಇಡಿ ಪರಿಶೀಲಿಸಬೇಕು ಎಂದು ಅರ್ಚನಾ ಆಗ್ರಹಿಸಿದ್ದಾರೆ. ಅಲ್ಲದೆ, ಈ ಪ್ರಕರಣದ ಬಗ್ಗೆ ಸರಿಯಾದ ತನಿಖೆಗಾಗಿ ಕಾಯುತ್ತಿದ್ದೇನೆ ಮತ್ತು ಪ್ರಕರಣ ತನ್ನ ಪರವಾಗಿ ಪ್ರಸ್ತುತಪಡಿಸಲು ಇನ್ನೂ ಅವಕಾಶವಿದೆ ಎಂದು ಮಾಧ್ಯಮಗಳಿಗೆ ಅರ್ಚನಾ ತಿಳಿಸಿದರು.

ಇಡಿ ಅಧಿಕಾರಿಗಳ ತನಿಖೆಗಾಗಿ ಸಹಕರಿಸಲು ನಾನು ಸಂಪೂರ್ಣವಾಗಿ ತಯಾರಾಗಿದ್ದೇನೆ. ನಾನು ಈ ದಿನಕ್ಕಾಗಿ ಕಾಯುತ್ತಿದ್ದೆ. ನಾನು ಯಾರನ್ನೂ ಬಿಡುವುದಿಲ್ಲ ಎಂದಿರುವ ಅರ್ಚನಾ, ನಾನು ಪ್ರಕರಣದಲ್ಲಿ ಸಿಕ್ಕಿಬಿದ್ದಿರುವಾಗ ಇಬ್ಬರು ವ್ಯಕ್ತಿಗಳು ಅದರ ಲಾಭ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಅವರು ಯಾರು ಎಂಬುದನ್ನು ಆಕೆ ತಿಳಿಸಲಿಲ್ಲ.

ಯಾರು ಈ ಅರ್ಚನಾ?
26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದು, ಆಕೆಯ ಎಲ್ಲ ಪುರಾಣಗಳು ಇದೀಗ ಬಯಲಾಗುತ್ತಿದೆ.

ಅಂದಹಾಗೆ ಅರ್ಚನಾ ನಾಗ್​, 18 ಶಾಸಕರು ಸೇರಿದಂತೆ 25 ಪ್ರಭಾವಿಗಳನ್ನು ತನ್ನ ಹನಿಟ್ರ್ಯಾಪ್​ ಬಲೆಗೆ ಕಡೆವಿರುವುದಾಗಿ ತಿಳಿದುಬಂದಿದೆ. ಈ ವಿಚಾರ ಇದೀಗ ಒಡಿಶಾ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟು ಮಾಡಿದೆ. ಹನಿಟ್ರ್ಯಾಪ್​ಗೆ ಒಳಗಾದ ಶಾಸಕರಲ್ಲಿ ಬಹುತೇಕರು ಮುಖ್ಯಮಂತ್ರಿ ನವೀನ್​ ಪಟ್ನಾಯಕ್​ ನೇತೃತ್ವದ ಬಿಜೆಡಿ ಸರ್ಕಾರದ ಸದಸ್ಯರಾಗಿದ್ದಾರೆ. 2018 ರಿಂದ 2022 ರವರೆಗಿನ ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ. (ಏಜೆನ್ಸೀಸ್​)