Tuesday, January 21, 2025
ಸುದ್ದಿ

ಕುಂದಾಪುರದಲ್ಲಿ ನಡೆದ ‘Best physic Body Building’ ಸ್ಪರ್ಧೆಯಲ್ಲಿ ಪುತ್ತೂರಿನ ನಿಶಾಂತ್ ಆರ್.ಎಚ್. ರವರಿಗೆ ಬೆಳ್ಳಿ ಪದಕ – ಕಹಳೆ ನ್ಯೂಸ್

ಕುಂದಾಪುರದ ಡಾ. ಬಿ.ಬಿ. ಹೆಗ್ಡೆ ಫೆಸ್ಟ್ ಗ್ರೇಡ್ ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವತಿಯಿಂದ ನಡೆದ ‘Best physic Body Building’ ಸ್ಪರ್ಧೆಯಲ್ಲಿ ಭಾಗವಹಿಸಿದ ಪುತ್ತೂರಿನ Waves Fitness, ಪಡೀಲ್ ನ ನಿಶಾಂತ್ ಆರ್.ಎಚ್ ರವರು ಬೆಳ್ಳಿಯ ಪದಕವನ್ನು ಪಡೆದಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಲ್ಮರ ಮಹಾಸತಿನಗರದ ರವೀಂದ್ರ ಸಿ.ಎಚ್ ಮತ್ತು ಮೇನಕ ದಂಪತಿಯ ಪುತ್ರರಾದ ಇವರು ದಕ್ಷಿಣ ಕನ್ನಡ 2019 ಚಾಂಪಿಯನ್ ಮತ್ತು ಡಬ್ಲ್ಯು ಎಫ್ ಎಫ್ ಏಷ್ಯಾ ಪೆಸಿಫಿಕ್ 2019 ರ ವಿಜೇತ ಸಚಿನ್ ರೈ ಪುತ್ತೂರು ರವರಿಂದ ತರಬೇತಿ ಪಡೆದಿರುತ್ತಾರೆ.

ನಿಶಾಂತ್ ರವರು ಬೆಂಗಳೂರಿನಲ್ಲಿ ನಡೆದ ಡಬ್ಲ್ಯು ಎಫ್ ಎಫ್ ಇಂಡಿಯಾ ಚಾಂಪಿಯನ್ ಶಿಫ್ ನಲ್ಲಿ 19 ವರ್ಷದೊಳಗಿನ ದೇಹದಾಡ್ಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಪಡೆದಿರುತ್ತಾರೆ..