Tuesday, January 21, 2025
ಸುದ್ದಿ

ಉಪ್ಪಿನಂಗಡಿಯ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ದಿನೇಶ್‌ಗೆ ಕಂಚಿನ ಪದಕ – ಕಹಳೆ ನ್ಯೂಸ್

ಉಪ್ಪಿನಂಗಡಿ: ಪ್ರಾಕೃತಿಕ ವಿಕೋಪ ಪರಿಹಾರ ಕಾರ್ಯಾಚರಣೆಯಲ್ಲಿ ಅತ್ಯುತ್ತಮ ಕಾರ್ಯದಕ್ಷತೆಯನ್ನು ಮೆರೆದ ಕಾರಣಕ್ಕೆ ಉಪ್ಪಿನಂಗಡಿಯ ಗೃಹ ರಕ್ಷಕ ದಳದ ಪ್ರಭಾರ ಘಟಕಾಧಿಕಾರಿ ಹಾಗೂ ಸೆಕ್ಷನ್ ಲೀಡರ್ ಆಗಿರುವ ದಿನೇಶ್ ಬಿ.ಯವರಿಗೆ ಭಾರತ ಸರಕಾರದ ಗೃಹ ಮಂತ್ರಾಲಯ ನವದೆಹಲಿ ಕೊಡಮಾಡಿದ ಕಂಚಿನ ಪದಕ ಹಾಗೂ ಪ್ರಶಂಸನೀಯ ಪತ್ರವನ್ನು ಪ್ರದಾನ ಮಾಡಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬೆಂಗಳೂರಿನ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಪೊಲೀಸ್ ಮಹಾನಿರ್ದೇಶಕರು ಹಾಗೂ ಗೃಹ ರಕ್ಷಕ ದಳದ ಮಹಾ ಸಮಾದೇಷ್ಠರಾದ ಅಮರ್ ಕುಮಾರ್ ಪಾಂಡೆ (ಐಪಿಎಸ್) ಪದಕ ಹಾಗೂ ಪ್ರಶಂಸನೀಯ ಪತ್ರವನ್ನು ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಗೃಹರಕ್ಷಕ ದಳ ಆರಕ್ಷಕ ಉಪ ಮಹಾ ಸಮಾದೇಷ್ಠರಾದ ರೇಣುಕಾ ಸುಕುಮಾರನ್ (ಐಪಿಎಸ್) ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು, ಗೃಹ ರಕ್ಷಕ ದಳದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.