
ಲಕ್ನೋ: “ಪ್ರಧಾನಿ ಮೋದಿ ನನಗಿಂತಲೂ ಉತ್ತಮ ನಟ’ ಎಂದು ಹೇಳಿ ವಿವಾದಕ್ಕೆ ಕಾರಣವಾಗಿದ್ದ ನಟ ಪ್ರಕಾಶ್ ರೈ ವಿರುದ್ಧ ಲಕ್ನೋ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರಿನಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಪ್ರಧಾನಿ ಮೌನವಾಗಿರುವ ಬಗ್ಗೆ ಆಕ್ಷೇಪಿಸಿ, ಪ್ರಧಾನಿ ಮೋದಿ ಮತ್ತು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ನನಗಿಂತಲೂ ಉತ್ತಮ ನಟರು ಎಂದಿದ್ದರು. ಈ ಸಂಬಂಧ ವಕೀಲರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಇದೇ 7ರಂದು ವಿಚಾರಣೆ ನಡೆಯಲಿದೆ.