Wednesday, January 22, 2025
ಕ್ರೈಮ್ಬೆಂಗಳೂರುರಾಜ್ಯಸುದ್ದಿ

ಪಿಜಿಯಲ್ಲಿರೋ ಹುಡುಗಿಯರೇ ಎಚ್ಚರ! ಬಾತ್​ರೂಮ್​ ಕಿಟಕಿಯಲ್ಲಿ ಮೊಬೈಲ್​ ಇಟ್ಟು ಯುವತಿಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ರೆಕಾರ್ಡ್ ಮಾಡ್ತಿದ್ದ ಕಾಮುಕ ಅಂದರ್​ – ಕಹಳೆ ನ್ಯೂಸ್

ಬೆಂಗಳೂರು: ಪಿಜಿಯಲ್ಲಿ ವಾಸವಿರುವ ಹುಡುಗಿಯರೇ ಎಚ್ಚರ ಎಚ್ಚರ! ಸ್ನಾನಕ್ಕೆ ಹೋಗುವಾಗ ಒಮ್ಮೆ ಬಾತ್​ರೂಮ್ ಕಿಟಕಿ ಮುಚ್ಚಿದೆಯಾ ಅಂತಾ ಪರಿಶೀಲಿಸಿಕೊಳ್ಳಿ. ಕೊಂಚ ಎಚ್ಚರ ತಪ್ಪಿದರೂ ನಿಮ್ಮ ಖಾಸಗಿ ವಿಡಿಯೋಗಳು ರೆಕಾರ್ಡ್ ಆಗಿ, ಬ್ಲಾಕ್​ಮೇಲ್​ಗೆ ಒಳಗಾಗಿ ಸಂಕಷ್ಟಕ್ಕೆ ಸಿಲುಕಬಹುದು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೌದು, ಪಿಜಿಯ ಬಾತ್​ರೂಮ್​ ಕಿಟಕಿಯಲ್ಲಿ ಮೊಬೈಲ್​ ಇಟ್ಟು ಯುವತಿಯರು ಸ್ನಾನ ಮಾಡುವುದನ್ನು ಕದ್ದು ವಿಡಿಯೋ ರೆಕಾರ್ಡ್​ ಮಾಡಿ, ಬೆದರಿಸಿ, ಲೈಂಗಿಕ ಬಯಕೆ ಪೂರೈಸುವಂತೆ ಬೇಡಿಕೆ ಇಡುತ್ತಿದ್ದ ಕಾಮುಕನನ್ನು ಬೆಂಗಳೂರು ಪೊಲೀಸರು ಬಂಧಿಸಿ, ಕಂಬಿ ಹಿಂದೆ ತಳ್ಳಿದ್ದಾರೆ.

ಇಂಜಿನಿಯರಿಂಗ್​ ಓದಿದ್ದ ಆರೋಪಿ, ಒಳ್ಳೆಯ ಕೆಲಸ ಹುಡುಕಿಕೊಂಡು ಸರಿಯಾದ ಜೀವನ ನಡೆಸುವುದನ್ನು ಬಿಟ್ಟು, ಹುಡುಗಿಯರ ಅಶ್ಲೀಲ ವಿಡಿಯೋ ರೆಕಾರ್ಡ್​ ಮಾಡುವ ಖಯಾಲಿ ಬೆಳೆಸಿಕೊಂಡಿದ್ದ. ನಾಲ್ಕು ವರ್ಷದಿಂದ ಒಂದೇ ಪಿಜಿಯಲ್ಲಿದ್ದುಕೊಂಡೆ ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ. ವಿಡಿಯೋ ಮಾಡುವುದರಲ್ಲೂ ಆತ ಜೀವ ಪಣಕ್ಕಿಡುತ್ತಿದ್ದ. ಕಟ್ಟಡದ ಟಾಪ್ ಪ್ಲೋರ್ ಮೇಲೆ ಹತ್ತಿ ವಿಡಿಯೋ ರೆಕಾರ್ಡ್​ ಮಾಡುತ್ತಿದ್ದ.

ಒಂದೇ ಕಾಂಪ್ಲೆಕ್ಸ್​ನಲ್ಲಿದ್ದ ಪಿಜಿ ಹುಡುಗಿಯರ ಸ್ನಾನದ ವಿಡಿಯೋ ರೆಕಾರ್ಡ್​ ಮಾಡಿ, ಬಳಿಕ ವಿಡಿಯೋ ಹರಿಬಿಡುವುದಾಗಿ ಸಂತ್ರಸ್ತೆಯನ್ನು ಬೆದರಿಸಿ, ಲೈಂಗಿಕ ಆಸೆ ಈಡೇರಿಸುವಂತೆ ಬೇಡಿಕೆ ಇಡುತ್ತಿದ್ದ. ಓರ್ವ ಹುಡುಗಿ ನೀಡಿದ್ದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಬಳಿಕ ಹುಡುಗಿಯ ಮೊಬೈಲ್​ನಿಂದ ಆರೋಪಿಗೆ ಮೆಸೇಜ್ ಮಾಡಿ ಆತನನ್ನು ಉಪಾಯವಾಗಿ ಪೊಲೀಸರು ಕರೆಸಿಕೊಂಡಿದ್ದರು.

ಹೇಳಿದ ಜಾಗಕ್ಕೆ ಬಂದಿದ್ದ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ಈತನೇ ಆ ಕಾಮುಕ ಅನ್ನೋದು ಖಚಿತವಾದ ನಂತರ ಆಗ್ನೆಯ ವಿಭಾಗದ ಸೆನ್ ಪೊಲೀಸರು ಬಂಧಿಸಿದ್ದಾರೆ. ಆತನ ಮೊಬೈಲ್, ಲ್ಯಾಪ್ ಟ್ಯಾಪ್ ವಶಕ್ಕೆ ಪಡೆದಿದ್ದು, ಅದರಲ್ಲಿ ಸಾಕಷ್ಟು ಹುಡುಗಿಯರ ವಿಡಿಯೋಗಳು ಪತ್ತೆಯಾಗಿವೆ. ಆರೋಪಿಯನ್ನು ಮತ್ತೆ ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.