Wednesday, January 22, 2025
ಕ್ರೈಮ್ರಾಷ್ಟ್ರೀಯಸುದ್ದಿ

​ರಾಜಸ್ಥಾನದಲ್ಲಿ ಕಾಂಗ್ರೆಸ್​ಗೆ ಮತ್ತೊಂದು ಶಾಕ್ ​; ಬಯಲಾಯ್ತು ಸಚಿವ ಸಲೇಹ್​ ಮೊಹಮ್ಮದ್ ಅಶ್ಲೀಲ ಅವತಾರ..! ಸಚಿವರು ಮತ್ತು ಒಳ ಉಡುಪು ಮಾತ್ರ ಧರಿಸಿದ್ದ ಮಹಿಳೆ ಒಬ್ಬರ ನಡುವಿನ ವೀಡಿಯೊ ಚಾಟ್ ಇದೀಗ ವೈರಲ್​ – ಕಹಳೆ ನ್ಯೂಸ್

ಜೈಪುರ: ರಾಜಸ್ಥಾನದ ಅಲ್ಪಸಂಖ್ಯಾತ ಇಲಾಖೆಯ ಸಚಿವ ಸಲೇಹ್ ಮೊಹಮ್ಮದ್ ಇರುವ ಒಂದು ಅಶ್ಲೀಲ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಬಿಜೆಪಿ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್​ ಸಚಿವರ ಅಶ್ಲೀಲ ವಿಡಿಯೋ ಒಂದು ಹರಿದಾಡುತ್ತಿದೆ.

ಸಚಿವರು ಮತ್ತು ಒಳ ಉಡುಪು ಮಾತ್ರ ಧರಿಸಿದ್ದ ಮಹಿಳೆ ಒಬ್ಬರ ನಡುವಿನ ವೀಡಿಯೊ ಚಾಟ್ ಇದೀಗ ವೈರಲ್​ ಆಗಿದೆ. ವೈರಲ್​ ಆಗಿರುವ ವಿಡಿಯೋದಲ್ಲಿ ಏನು ಮಾತನಾಡುತ್ತಿದ್ದಾರೆ ಎನ್ನುವುದು ಕೇಳಿಸುತ್ತಿಲ್ಲ. ವಿಡಿಯೋ ವೈರಲ್​ ಆದ ಬಳಿಕ ಸಚಿವ ಸಲೇಹ್​ ಮೊಹಮ್ಮದ್​​ ಸಂಪರ್ಕಕ್ಕೆ ಸಿಗುತ್ತಿಲ್ಲ.

ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ಸಲೇಹ್​ ಮೊಹಮ್ಮದ್​ರನ್ನು ವಜಾಗೊಳಿಸಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಈ ಬಗ್ಗೆ ರಾಜಸ್ಥಾನದ ಬಿಜೆಪಿ ಟ್ವೀಟ್​ ಮಾಡಿದ್ದು ‘ಅಶೋಕ್ ಗೆಹ್ಲೋಟ್ ಜಿ, ನಿಮ್ಮ ಸಚಿವರು ಮಹಿಳೆಯೊಂದಿಗೆ ಇರುವ ಆಕ್ಷೇಪಾರ್ಹ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ನೀವು ಸಚಿವ ಸಲೇಹ್ ಮೊಹಮ್ಮದ್​ರನ್ನು ವಜಾ ಮಾಡುತ್ತೀರಾ ಅಥವಾ ನಿಮ್ಮ ಮತ ಬ್ಯಾಂಕ್‌ಗಾಗಿ ದುರಾಸೆಯಿಂದ ಅವರನ್ನು ಬಿಡುತ್ತೀರಾ’ ಎಂದು ತಮ್ಮ ಖಾತೆಯಲ್ಲಿ ಬರೆದುಕೊಂಡಿದೆ.

ರಾಜಸ್ಥಾನ ಸಚಿವರ ಅಶ್ಲೀಲ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಅವರನ್ನು ತೆಗೆದುಹಾಕುವಂತೆ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವಿಯ ‘ಸಲೇಹ್ ಮೊಹಮ್ಮದ್ ಮುಸ್ಲಿಂ ಸಮುದಾಯದ ಧಾರ್ಮಿಕ ಗುರು ಮತ್ತು ಮಾಜಿ ಕ್ಯಾಬಿನೆಟ್ ಸಚಿವ ಗಾಜಿ ಫಕೀರ್ ಅವರ ಪುತ್ರ. ಜಾಜೀ ಫಕೀರ್​ ಕಾರಣದಿಂದಾಗಿ ಸಲೇಹ್​ರನ್ನು ಮಂತ್ರಿ ಮಾಡಲಾಯಿತು. ಇವರ ಕುಟುಂಬ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಭೇಟಿ ಮಾಡಿದ್ದು, ಅಶೋಕ್ ಗೆಹ್ಲೋಟ್ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ. (ಏಜೆನ್ಸೀಸ್​)