Wednesday, January 22, 2025
ಸುದ್ದಿ

ಮಂಗಳೂರು: ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆ ತಡೆ ಕುರಿತು ಕಾರ್ಯಕ್ರಮ – ಕಹಳೆ ನ್ಯೂಸ್

ಮಂಗಳೂರು: ದೇಶದಲ್ಲಿ ಕಳೆದ ಐದು ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಶೇಕಡಾ 27 ರಷ್ಟು ಹೆಚ್ಚಾಗಿದೆ. ಅದರಲ್ಲೂ 2021 ರಲ್ಲಿ, ಒಂದೇ ವರ್ಷದಲ್ಲಿ 1.64 ಲಕ್ಷ ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಲ್ಲಿ 1600 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದೇವೆ ಎಂಬ ಒಂದೇ ಕಾರಣಕ್ಕೆ ಜೀವ ಕಳೆದುಕೊಂಡಿದ್ದಾರೆ. ಈ ಅಂಕಿ ಅಂಶಗಳು ಮಾನಸಿಕ ಆರೋಗ್ಯದ ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತವೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕಲಾ ನಿಖಾಯದ ಡೀನ್‌ ಪ್ರೊ. ಜಯರಾಜ್‌ ಅಮೀನ್‌ ಅಭಿಪ್ರಾಯಪಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಸಹಯೋಗದೊಂದಿಗೆ, ಯುವ ಸಬಲೀಕರಣದ ಭಾಗವಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್‌ ಆಫ್‌ ಮೆಂಟಲ್ ಹೆಲ್ತ್ ಆಂಡ್‌ ನ್ಯೂರೋ ಸೈನ್ಸ್, ಬೆಂಗಳೂರು, ಮಂಗಳೂರಿನ ಮನಃಶಾಂತಿ ಕೌನ್ಸಿಲಿಂಗ್‌ ರಿಸರ್ಚ್‌ ಆಂಡ್‌ ಟ್ರೈನಿಂಗ್‌ ಸೆಂಟರ್‌, ಫಾದರ್‌ ಮುಲ್ಲರ್‌ ಮೆಡಿಕಲ್‌ ಕಾಲೇಜು, ಮಂಗಳೂರಿನ ಸುಶೇಗ್ ಚಾರಿಟೇಬಲ್ ಟ್ರಸ್ಟ್ನ ಭಾಗವಾದ ಸ್ಯುಸೈಡ್‌ ಲೈಫ್‌ಲೈನ್‌, ಲಯನ್ಸ್‌ ಕ್ಲಬ್‌, ಮಂಗಳೂರು, ಇವುಗಳ ಆಶ್ರಯದಲ್ಲಿ ನಡೆದ “ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗಾಗಿ ಸ್ನೇಹಿತರ ಮುಂದಾಳತ್ವದ ಆತ್ಮಹತ್ಯೆ ತಡೆ” ಕಾರ್ಯಕ್ರಮವನ್ನು ರವೀಂದ್ರ ಕಲಾಭವನದಲ್ಲಿ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಒತ್ತಡದ ಜೀವನದಲ್ಲಿ ಮಾನಸಿಕ ಆರೋಗ್ಯವನ್ನು ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಮ್ಮ ಮಾನಸಿಕ ಆರೋಗ್ಯದ ಜೊತೆಗೆ ನಮ್ಮವರ ಮಾನಸಿಕ ಸಮಸ್ಯೆಗಳನ್ನು ಗಮನಿಸಿ ಸೂಕ್ತ ಸಮಯದಲ್ಲಿ ಸಹಾಯ ಮಾಡಿದರೆ ಆತ್ಮಹತ್ಯೆ ಪ್ರಕರಣಗಳನ್ನು ತಗ್ಗಿಸಬಹುದು. ಸ್ವಯಂಸೇವಕರ ಬಳಗ ತರಬೇತಿ ಪಡೆದ ಶಿಕ್ಷಕರು, ಸಮಾಲೋಚಕರ ಸಹಾಯ ಪಡೆದು ತಮ್ಮವರ ಬಗ್ಗೆ ಗಮನಹರಿಸಬಹುದು, ಎಂದರು.

ಮುಖ್ಯ ಅತಿಥಿ ಕೆ.ಎಂ.ಸಿ. ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ. ಕೇಶವ ಪೈ ಮಾತನಾಡಿ, ಯಾವುದೇ ಸಂದರ್ಭ ಬಂದರೂ ನಮ್ಮ ಮನಸ್ಸು ನಿಯಂತ್ರಣದಲ್ಲಿರಬೇಕು. ಮಾನಸಿಕ ಸಮಸ್ಯೆ ಎದುರಾದಾಗ ಅದನ್ನು ಇತರರಲ್ಲಿ ಹೇಳಿಕೊಳ್ಳಲು, ಸಹಾಯ ಪಡೆದುಕೊಳ್ಳಲು ಹಿಂಜರಿಯಬೇಕಾಗಿಲ್ಲ, ಎಂದು ಅವರು ಹೇಳಿದರು. ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ಲತಾ ಎ. ಪಂಡಿತ್‌ ಅವರು ಮಾತನಾಡಿ, ಸಣ್ಣಪುಟ್ಟ ಕಾರಣಗಳಿಗೆ ವಿದ್ಯಾರ್ಥಿಗಳು ಎಳೆ ವಯಸ್ಸಿನಲ್ಲೇ ತಮ್ಮ ಜೀವನವನ್ನು ಕೊನೆಗೊಳಿಸುತ್ತಿದ್ದಾರೆ. ಆದರೆ ಬದುಕಿನ ಪ್ರತಿಯೊಂದು ಸೋಲು ನಮ್ಮ ಗೆಲುವಿನ ಮೆಟ್ಟಿಲಾಗಬೇಕೆಂದು, ಹೇಳಿದರು.

ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಎಂ.ಅರುಣ್ ಶೆಟ್ಟಿ, ಲಯನ್ಸ್‌ ಕ್ಲಬ್‌ ಮಂಗಳೂರು ಗುರುಪ್ರೀತ್‌ ಆಳ್ವ, ಬೆಂಗಳೂರಿನ ನಿಮ್ಹಾನ್ಸ್‌ನ ಡಾ.ಅನೀಶ್.ವಿ.ಚೆರಿಯನ್, ಮಂಗಳೂರಿನ ಎಫ್‌ಎಂಎಂಸಿ ಯ ಡಾ. ಅವಿನಾಶ್‌ ಶೇಖರ್‌, ಸ್ಯುಸೈಡ್‌ ಲೈಫ್‌ ಲೈನ್‌ನ ಡಾ. ಲವೀನಾ ನೊರೋನ್ಹಾ, ಶೀನ ಪೂಜಾರಿ , ಅರುಣ್ ಪೀಟರ್ ಪಿಂಟೋ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.

ಮಂಗಳೂರಿನ ಮನಃಶಾಂತಿಯ ಡಾ. ರಮೀಳಾ ಶೇಖರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿವಿ ಕಾಲೇಜಿನ ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ಗಾಯತ್ರಿ ಎನ್‌ ಕಾರ್ಯಕ್ರಮ ನಿರೂಪಿಸಿದರು, ಇನ್ನೋರ್ವ ಅಧಿಕಾರಿ ಡಾ.ಸುರೇಶ್ ವಂದಿಸಿದರು.