Saturday, November 23, 2024
ಸುದ್ದಿ

ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಲಾ, ವಿಜ್ಞಾನ ಮತ್ತು ವಾಣಿಜ್ಯ ಹಾಗು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಮತದಾನದ ಪ್ರಾಮುಖ್ಯದ ಕುರಿತು ಕಾರ್ಯಗಾರ – ಕಹಳೆ ನ್ಯೂಸ್

ಪುತ್ತೂರು: ನಮ್ಮ ದೇಶದ ಉನ್ನತಿಗಾಗಿ ಮತದಾನ ಮಾಡುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ. ಇದು ನಮ್ಮ ದೇಶದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ. ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಯ ಆಡಳಿತವಿರುತ್ತದೆ. ಆದರೆ ನಮ್ಮ ದೇಶದಲ್ಲಿ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ತಮಗೆ ಬೇಕಾದ ನಾಯಕತ್ವದ ಗುಣ ಹೊಂದಿರುವ ನಾಯಕನನ್ನು ಆಯ್ಕೆ ಮಾಡಿಕೊಳ್ಳುವ ಪ್ರತಿಯೊಬ್ಬನಿಗೂ ಅವಕಾಶವಿದೆ ಎಂದು ಪುತ್ತೂರು ಉಪವಿಭಾಗದ ಕೆಎಎಸ್ ಚುನಾವಣಾ ನೋಂದಾವಣಿ ಮತ್ತು ಸಹಾಯಕ ಆಯುಕ್ತರಾದ ಗಿರೀಶ ನಂದನ್ ಎಂ ಹೇಳಿದರು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ಇಲ್ಲಿನ ವಿವೇಕಾನಂದ ಮಹಾವಿದ್ಯಾಲಯ (ಸ್ವಾಯತ್ತ) ಕಲಾ, ವಿಜ್ಞಾನ ಮತ್ತು ವಾಣಿಜ್ಯ ಹಾಗು ಐಕ್ಯೂಎಸಿ ಘಟಕದ ಸಂಯುಕ್ತಾಶ್ರಯದಲ್ಲಿ ಮತದಾನದ ಪ್ರಾಮುಖ್ಯದ ಕುರಿತು ವಿದ್ಯಾರ್ಥಿಗಳೊಂದಿಗೆ ಮಾತನಾಡಿದ ಅವರು ನಮ್ಮಿಂದ ಆಯ್ಕೆಯಾದ ನಾಯಕನು ನಮಗೆ ಬೇಕಾದ ಹಲವಾರು ಸೌಕರ್ಯಗಳನ್ನು ಒದಗಿಸಿಕೊಡುವುದರ ಜೊತೆಗೆ ಶಿಸ್ತುಬದ್ದ ನೀತಿಗಳನ್ನು ಜಾರಿಗೆ ತರುವ ಮೂಲಕ ರಾಷ್ಟ್ರ ನಿರ್ಮಾಣಕ್ಕೆ ಹೊಸ ಆಯಾಮವನ್ನು ನೀಡುತ್ತಾನೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಪುತ್ತೂರಿನ ಕೆಎಎಸ್ ಸಹಾಯಕ ಚುನಾವನಾ ನೋಂದಣಾಧಿಕಾರಿ ಮತ್ತು ತಹಶೀಲ್ದಾರ್ ನಿಸರ್ಗಪ್ರಿಯ ಜೆ, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಚುನಾವಣಾ ಯೋಜನಾಧಿಕಾರಿ ಸುಕನ್ಯಾ ಹಾಗೂ ಕಾಲೇಜಿನ ಆಡಳಿತ ವ್ಯವಹಾರ ಶಾಸ್ತ್ರ ವಿಭಾಗದ ಉಪನ್ಯಾಸಕಿ ದೀಪಿಕಾ ಉಪಸ್ಥಿತರಿದ್ದರು.
ಸಮಾಜಸಾಸ್ತ್ರ ವಿಭಾಗದ ಮುಖ್ಯಸ್ಥೆ ವಿದ್ಯಾ ಕಾರ್ಯಕ್ರಮ ನಿರೂಪಿಸಿ, ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಈಶ್ವರ ಪ್ರಸಾದ್ ಸ್ವಾಗತಿಸಿ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ವಂದಿಸಿದರು.

ಪ್ರೋ.ವಿಷ್ಣು ಗಣಪತಿ ಭಟ್:
ಮತದಾನದ ಸಂದರ್ಭದಲ್ಲಿ ಪಕ್ಷ ಯಾವುದು ಎನ್ನುವುದು ಮುಖ್ಯವಲ್ಲ. ಬದಲಾಗಿ ನಮ್ಮ ಸಮಸ್ಯೆಗಳನ್ನು ಬಗೆಹರಿಸುವ ವ್ಯಕ್ತಿ ಮುಖ್ಯ. ಈ ವಿಚಾರವನ್ನು ಪ್ರತಿಯೊಬ್ಬರು ಮನದಲ್ಲಿಟ್ಟುಕೊಂಡು ಮತದಾನ ಚಲಾಯಿಸಬೇಕು