Monday, January 27, 2025
ಸುದ್ದಿ

ಪ್ರತಿಯೊಂದು ಜಾತಿ, ಧರ್ಮ ಸಮುದಾಯವು ಸ್ವಸ್ಥ ಸಮಾಜವನ್ನು ರೂಪಿಸುವಲ್ಲಿ ಮುಂದಾಗಬೇಕು; ಡಾ. ವೈ ಭರತ್ ಶೆಟ್ಟಿ – ಕಹಳೆ ನ್ಯೂಸ್

ಸಮಾಜದಲ್ಲಿ ಮೇಲ್ವರ್ಗ, ಕೆಳಜಾತಿ ಈ ರೀತಿಯ ಯಾವುದೇ ಬೇಧಭಾವವಿಲ್ಲದೇ ಎಲ್ಲ ಜಾತಿ ಧರ್ಮವು ಒಂದೇ ಸೂರಿನಡಿಯಲ್ಲಿದ್ದು ಕೆಳವರ್ಗದ ಸಮುದಾಯವನ್ನು ಎಲ್ಲ ವರ್ಗದವರು ಒಂದಾಗಿ ಮೇಲಕ್ಕೆತ್ತುವ ಕಾರ್ಯವನ್ನು ಮಾಡಿದಾಗ ಮಾತ್ರವೇ ಸುಸ್ಥಿರವಾದ ಸಮಾಜವನ್ನು ಹೊಂದಲು ಸಾಧ್ಯ ಎಂದು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಅವರು ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅವರು ಪಣಂಬೂರು ಶ್ರೀ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಕೃಷ್ಣಾಪುರ ಆಯೋಜಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಘದ ಹೆಸರಿಗೆ ಜಮೀನನ್ನು ಕಾದಿರಿಸಿದ ಆದೇಶದ ಪ್ರತಿಯನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯೆ ಲಕ್ಷ್ಮೀಶೇಖರ್ ದೇವಾಡಿಗ, ನಾಮನಿರ್ದೇಶಿತ ಸದಸ್ಯರಾದ ಪ್ರಶಾಂತ್ ಮುಡಾಯಿಕೋಡಿ, ದಾಸ್ತವೇಜುದಾರ ಅಬೂಬಕ್ಕರ್ ಕೆಂಜಾರ್, ಸುರತ್ಕಲ್ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ದಿವಾಕರ್ ಜಿ.ಎಸ್ ಆಚಾರ್ಯ, ಪಣಂಬೂರು ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಗೌರವಧ್ಯಕ್ಷರಾದ ಪಿ‌.ಕೆ ದಾಮೋದರ ಆಚಾರ್ಯ ಹೊಸಬೆಟ್ಟು, ಅಧ್ಯಕ್ಷರಾದ ವಿವೇಕ್ ಆಚಾರ್ಯ ಕೃಷ್ಣಾಪುರ, ನೂತನ ಸಭಾಭವನ ಸಮಿತಿ ಅಧ್ಯಕ್ಷರಾದ ಶಿಲ್ಪಿ ಆನಂದ ಆಚಾರ್ಯ ಮಧ್ಯ, ಪ್ರಧಾನ ಕಾರ್ಯದರ್ಶಿ ಯಜ್ನೇಶ್ವರ ಆಚಾರ್ಯ, ಸುಧಾಕರ ಆಚಾರ್ಯ ಕುತ್ತೆತ್ತೂರು ಉಪಸ್ಥಿತರಿದ್ದರು.