ಲವ್ ಜಿಹಾದ್ ಮೂಲಕ ಮತಾಂತರದ ಘಟನೆಗಳನ್ನು ತಡೆಯಲು ಮತ್ತು ಮತಾಂತರ ನಿಷೇಧ ಕಾಯಿದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡಲು ವಿಶೇಷ ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ದ ಸ್ಥಾಪನೆ ಮಾಡಿ !: ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಮಾನ್ಯ ಗೃಹ ಸಚಿವರಿಗೆ ಮನವಿ – ಕಹಳೆ ನ್ಯೂಸ್
ಬೆಂಗಳೂರು : ರಾಜ್ಯದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಘಟನೆಗಳ ಹಿನ್ನೆಲೆ ‘ಲವ್ ಜಿಹಾದ್’ ಪ್ರಕರಣಗಳ ತನಿಖೆ ನಡೆಸಲು ಉತ್ತರ ಪ್ರದೇಶ ಸರ್ಕಾರದ ಮಾದರಿಯಲ್ಲಿ ‘ಪೊಲೀಸ್ ವಿಶೇಷ ಶಾಖೆ’ಯನ್ನು ಸ್ಥಾಪಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ದುರ್ಗಾ ವಾಹಿನಿಯಿಂದ ಮಾನ್ಯ ಗೃಹ ಸಚಿವರಾದ ಶ್ರೀ. ಅರಗ ಜ್ಞಾನೇಂದ್ರ ಇವರಿಗೆ ಮನವಿ ನೀಡಲಾಯಿತು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, ರಣರಾಗಿಣಿ ಮಹಿಳಾ ಶಾಖೆಯ ಸೌ. ಭವ್ಯ ಗೌಡ, ದುರ್ಗಾ ವಾಹಿನಿಯ ಸೌ. ನಂದಿನಿ ರಾಜ್, ಶ್ರೀರಾಮ ಸೇನೆಯ ಸುಂದ್ರೇಶ, ಅಮರನಾಥ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ್ ಗೌಡ ಇವರು ಮಾತನಾಡಿ, ದೆಹಲಿಯ ಜಿಹಾದಿ ಅಪ್ತಾಭ್ ಹಿಂದೂ ಯುವತಿ ಶ್ರದ್ಧಾ ಬರ್ಬರವಾಗಿ ಹತ್ಯೆ ಮಾಡಿದಂತೆ ರಾಜಗಯದಲ್ಲಿ ಸಹ ಹೆಚ್ಚು ಲವ್ ಜಿಹಾದ್ ಘಟನೆಗಳು ನಡೆಯುತ್ತಿದೆ. ಕಳೆದ ವಾರ ರಾಯಚೂರಿನಲ್ಲಿ ಇಬ್ಬರು ಹಿಂದೂ ಯುವತಿಯರು ಲವ್ ಜಿಹಾದ್ ಗೆ ಬಲಿಯಾಗಿ ಇಸ್ಲಾಮ್ ಗೆ ಮತಾಂತರವಾದರು. ಪೋಷಕರು ದೂರು ನೀಡಿದರೂ ಸಹ ಪೋಲಿಸರು ಅಪರಾಧಿಯ ಬಂಧನ ಮಾಡಿಲ್ಲ. ಈ ಪ್ರಕರಣವನ್ನು ಮತಾಂತರ ಕಾಯಿದೆ ಎಂದು ನೊಂದಣೆ ಮಾಡಿಲ್ಲ. ಮಾರ್ಚ್ 2022 ರಂದು ಗದಗದಲ್ಲಿ ಅಪೂರ್ವ ಯುವತಿಯು ಇಸ್ಲಾಮ್‌ಗೆ ಮತಾಂತರ ಮಾಡಿ, ನಂತರ ಆಕೆಯ ಹತ್ಯೆ ಮಾಡಲು ಪ್ರಯತ್ನ ನಡೆಯಿತಯ. ಮಂಗಳೂರು, ಉಡುಪಿ, ಶಿವಮೊಗ್ಗ, ಕೊಡಗು & ಬೆಂಗಳೂರಿನಲ್ಲಿ ಮುಸಲ್ಮಾನ್ ಯುವತಿಯರ ಶಾಹಿನ್ ಗ್ಯಾಂಗ್ ಲವ್ ಜಿಹಾದ್ ಮಾಡಲು ಕಾರ್ಯನಿರತವಾಗಿದೆ. ಅವರು ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವಕರ ಜೊತೆಗೆ ಪರಿಚಯಿಸಿ ಲವ್ ಜಿಹಾದ್ ಮಾಡಿಸುತ್ತಾರೆ. ರಾಜ್ಯದಲ್ಲಿ ಮತಾಂತರ ನಿಷೇಧ ಕಾಯಿದೆ ಇದ್ದರೂ ಸಹ ವ್ಯಾಪಕವಾಗಿ ಲವ್ ಜಿಹಾದ್’ ಮೂಲಕ ಹಿಂದೂ ಯುವತಿಯರನ್ನು ಇಸ್ಲಾಮ್‌ಗೆ ಮತಾಂತರ ಮಾಡುವ ಘಟನೆಗಳು ಹೆಚ್ಚಾಗಿದೆ. ಇದನ್ನು ತಡೆಯಲು ‘ಲವ್ ಜಿಹಾದ್ ವಿರೋಧಿ ಪೊಲೀಸ್ ದಳ’ ವನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹ ಮಾಡಲಾಯಿತು.
ಲವ್ ಜಿಹಾದ್ ಗೆ ಪ್ರಚೋಧನೆ ನೀಡುವ ಮಸೀದಿ, ಮದರಸಾ, ಮೌಲ್ವಿ, ಶಾಹಿನ್ ಗ್ಯಾಂಗ್ ಮೇಲೆ ಕ್ರಮ ಜರುಗಿಸಬೇಕು. ಅಷ್ಟೇ ಅಲ್ಲದೇ ರಾಜ್ಯದಲ್ಲಿ 21, 000 ಯುವತಿಯರು, ಮಹಿಳೆಯರು ಕಾಣೆಯಾಗಿದ್ದಾರೆ, ಅದರ ಹಿಂದೆ ಲವ್ ಜಿಹಾದ್ ಮಾಫಿಯಾ ಕಾರ್ಯನಿರತ ಇದೆಯಾ ಪರಿಶೀಲನೆ ಮಾಡಲು ಆಗ್ರಹ ಮಾಡಲಾಯಿತು.
ಮನವಿಗೆ ಸ್ಪಂದಿಸಿದ ಗೃಹ ಸಚಿವರು, ಇದರ ಬಗ್ಗೆ ಸರಕಾರದಲ್ಲಿ ಚರ್ಚೆ ಮಾಡುತ್ತೇವೆ. ಮತಾಂತರ ಉದ್ದೇಶದಿಂದ ನಡೆಯುವ ಲವ್ ಜಿಹಾದ್ ಪ್ರಕರಣಗಳನ್ನು ಮತಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ನೋಂದಣಿ ಮಾಡಲು ಪೊಲೀಸ್ ಇಲಾಖೆಯ ಸಭೆಯಲ್ಲಿ ಸೂಚಿಸುತ್ತೇವೆ’ ಎಂದರು.