Recent Posts

Friday, November 22, 2024
ದಕ್ಷಿಣ ಕನ್ನಡಸಿನಿಮಾಸುದ್ದಿ

ಕೊರಗಜ್ಜನ ಕುತ್ತಾರು ದೆಕ್ಕಾಡು ಆದಿತಲಕ್ಕೆ ಹ್ಯಾಟ್ರಿಕ್‌ ಹೀರೊ ಶಿವರಾಜ್ ಕುಮಾರ್ ಭೇಟಿ – ಕಹಳೆ ನ್ಯೂಸ್

ಉಳ್ಳಾಲ: ಕೊರಗಜ್ಜನವರ ಆರಾಧನೆಯು ಸರಳವಾಗಿದ್ದು, ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ನಟ, ಹ್ಯಾಟ್ರಿಕ್‌ ಹೀರೊ ಶಿವರಾಜ್ ಕುಮಾರ್ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕೊರಗತನಿಯ ದೈವದ ಕುತ್ತಾರಿನ ಏಳು ತಲಗಳಲ್ಲಿ ಒಂದಾದ ಕುತ್ತಾರು ದೆಕ್ಕಾಡು ಆದಿತಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಾಧ್ಯಮದ ಜತೆಗೆ ಮಾತನಾಡಿದರು.

ನಂಬಿಕೆ, ಶ್ರದ್ಧೆಯ ಜೊತೆಗೆ ಬದ್ಧತೆಯೊಂದಿಗೆ ಸರಳವಾಗಿ ಆರಾಧಿಸುವ ವೈಶಿಷ್ಟತೆಯು ಮನಸ್ಸಿಗೆ ನೆಮ್ಮದಿಯನ್ನು ನೀಡುತ್ತದೆ ಎಂದರು.

‘‌ನಟಿ ರಕ್ಷಿತಾ `ಹೋಗಿಯಣ್ಣಾ ಒಳ್ಳೆದಾಗುತ್ತದೆ’ ಅಂದಿದ್ದರು. ಮಂಗಳೂರಿನಲ್ಲಿ ವೇದ ಚಿತ್ರದ ಟೀಸರ್ ಬಿಡುಗಡೆ ಇದ್ದು, ಮುಂಚಿತವಾಗಿ ಬಂದು, ಕುಕ್ಕೆ, ಧರ್ಮಸ್ಥಳಕ್ಕೂ ಭೇಟಿ ನೀಡಿದ್ದೇನೆ. ಕೊಲ್ಲೂರು, ಕಟೀಲು ಮತ್ತಿತರ ದೇಗುಲಕ್ಕೂ ನಾಲ್ಕು ಬಾರಿ ಬಂದಿದ್ದೇನೆ. ಈ ಹಿಂದೆ ರಕ್ಷಿತಾ ಅವರು ಬಂದಿದ್ದಾಗ ನಮ್ಮ ಕುಟುಂಬಕ್ಕಾಗಿ ಪ್ರಾರ್ಥನೆ ಸಲ್ಲಿಸಿರುವುದನ್ನು ನೆನಪಿಸಿದ್ದಳು’ ಎಂದರು.

ತಂದೆ ,ತಾಯಿ ಇರುವಾಗ ಮಂಗಳೂರು-ಉಡುಪಿ ದೇವಸ್ಥಾನಗಳಿಗೆ ಹಚ್ಚಾಗಿ ಬರುತ್ತಿದ್ದೆವು. ಈ ಭಾಗಗಳಲ್ಲಿ ಹಲವು ಸಿನಿಮಾಗಳ ಶೂಟಿಂಗ್ ನಡೆದಿದೆ. ಜನರ ಆತ್ಮೀಯತೆ, ಬಾಂಧವ್ಯ ಪಡೆದುಕೊಂಡಿದ್ದೇನೆ ಎಂದರು.

ಮುನ್ನೂರು ಪಂಜದಾಯ ಬಂಟ ವೈದ್ಯನಾಥ ಭಂಡಾರಮನೆ, ದೇರಳಕಟ್ಟೆಯಲ್ಲಿರುವ ಮಾಗಣ್ತಡಿ ಗುತ್ತು ಮನೆಗೆ ಭೇಟಿ ನೀಡಿದರು. ಆದಿತಲದ ಅನುವಂಶಿಕ ಆಡಳಿತ ಮೊಕ್ತೇಸರ ಬಿ. ಶ್ರೀಧರ ಶೆಟ್ಟಿ ಮಾಗಣ್ತಡಿ, ಪ್ರಮುಖರಾದ ಮೂಲ್ಯಣ್ಣ ಬಾಲಕೃಷ್ಣ, ದೇವ್ ಪಾಂಡೇಶ್ವರ್, ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ, ಹೇಮಂತ್ ಶೆಟ್ಟಿ ದೇರಳಕಟ್ಟೆ, ಶ್ರೀಕಾಂತ್, ದೇವಿ ಪ್ರಸಾದ್ ಶೆಟ್ಟಿ ಮಾಗಣ್ತಡಿ, ಪ್ರೀತಂ ಶೆಟ್ಟಿ ಮಾಗಣ್ತಡಿ, ಮಹಾಬಲ ಹೆಗ್ಡೆ ಮಾಗಣ್ತಡಿ, ಮನೋಜ್ ಹೆಗ್ಡೆ ಮಾಗಣ್ತಡಿ, ಜಯ್ ಕಿಶನ್ ರೈ ಮಾಗಣ್ತಡಿ, ರಂಜಿತ್ ಸುಲಾಯ ಮಾಗಣ್ತಡಿ, ಸ್ವಾತಿ ಶೆಟ್ಟಿ ಶೋಭಾ ರೈ, ಮಾಗಣ್ತಡಿ, ವಿದ್ಯಾಚರಣ್ ಭಂಡಾರಿ, ವೈಶಾಖ್ ಶೆಟ್ಟಿ, ಶ್ರೀರಾಮ ರೈ, ಜಗನ್ನಾಥ ಶೆಟ್ಟಿ, ಮನೋಜ್ ಚಂದ್ರ ಶೆಟ್ಟಿ, ಜಗನ್ನಾಥ ಶೆಟ್ಟಿ, ತಿಮ್ಮಪ್ಪ ಪೂಂಜ ಇದ್ದರು.