Wednesday, January 22, 2025
ಕ್ರೈಮ್ದಕ್ಷಿಣ ಕನ್ನಡರಾಜ್ಯಸುದ್ದಿ

ಮಂಗಳೂರಿನಲ್ಲಿ ಹಿಂದೂ ಯುವತಿಯರೊಂದಿಗೆ ವೀಕೆಂಡ್ ಎಂಜಾಯ್ ಮಾಡಲು ತಡರಾತ್ರಿ ಸುತ್ತಾಡಲು ಬಂದ ಮುಸ್ಲಿಂ ಪುಂಡರಿಗೆ ಬಜರಂಗದಳದ ಕಾರ್ಯಕರ್ತರಿಂದ ಧರ್ಮದೇಟು – ಕಹಳೆ ನ್ಯೂಸ್

ಮಂಗಳೂರು : ಹಿಂದೂ ಯುವತಿಯರೊಂದಿಗೆ ತಡರಾತ್ರಿ ಸುತ್ತಾಡುತ್ತಾ, ಅಸಭ್ಯವಾಗಿ ಸಾರ್ವಜನಿಕ ಸ್ಥಳದಲ್ಲಿ ವರ್ತಿಸುತ್ತಿದ್ದ ಮುಸ್ಲಿಂ ಪುಂಡರಿಗೆ ಬಜರಂಗದಳ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ. ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ಬರುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಮಧ್ಯಪ್ರವೇಶಿಸಿ ಪ್ರಕರಣ ಶಾಂತಗೊಳಿಸಿದ್ದಾರೆ. ಮಂಗಳೂರಿನ ಕೊಟ್ಟಾರ ಎಂಬಲ್ಲಿ ಈ ಘಟನೆ ನಡೆದಿದೆ. ರಾತ್ರಿ 12 ಗಂಟೆ ಸುಮಾರಿಗೆ ಇಬ್ಬರು ಮುಸ್ಲಿಂ ಯುವಕರು ಮತ್ತು ಇಬ್ಬರು ಹಿಂದೂ ಯುವತಿಯರು ಜತೆಯಾಗಿ ಸುತ್ತಾಡುತ್ತಾ, ಮೋಜು ಮಸ್ತಿಯಲ್ಲಿ ತೊಡಗಿದ್ದರು. ಇದನ್ನು ಗಮನಿಸಿದ ಬಜರಂಗದಳದ ಕಾರ್ಯಕರ್ತರು ಅವರನ್ನು ತಡೆದು. ಕೆಲವರು ಅವರಿಗೆ ಧರ್ಮದೇಟು ನಡೆಸಲು ಮುಂದಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ತಾವು ಹೊಟೇಲ್‌ಗೆ ಊಟಕ್ಕೆ ಬಂದಿರುವುದಾಗಿ, ವೀಕೆಂಡ್ ಎಂಜಾಯ್ ಮಾಡಲು ಬಂದಿರುವುದಾಗಿಯೂ ಜೋಡಿಗಳು ಹೇಳಿಕೊಂಡವು. ಆದರೆ, ಕಾರ್ಯಕರ್ತರು ಇದನ್ನು ಒಪ್ಪಲಿಲ್ಲ. ಈ ನಡುರಾತ್ರಿ ನಿಮಗೆ ಯಾರು ಹೋಟೆಲ್‌ ತೆರೆದಿಟ್ಟು ಕಾಯ್ತಾ ಇದಾರೆ ಎಂದು ಕೇಳಿ ಧರ್ಮದೇಟು ನೀಡಲು ಮುಂದಾದರು. ಈ ಹಂತದಲ್ಲಿ ಮಾಹಿತಿ ಪಡೆದ ಸಮೀಪದ ಉರ್ವಾ ಪೊಲೀಸರು ಧಾವಿಸಿ ಬಂದರು. ಪೊಲೀಸರ ಮಧ್ಯ ಪ್ರವೇಶದ ಬಳಿಕ ಪರಿಸ್ಥಿತಿ ತಿಳಿಯಾಯಿತು. ಬಳಿಕ ಜೋಡಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಅಲ್ಲಿಂದ ಅವರು ವಾಸವಾಗಿದ್ದ ಮನೆಗಳಿಗೆ ಕಳುಹಿಸಲಾಯಿತು. ಮಂಗಳೂರಿನಲ್ಲಿ ಒಂದೆರಡು ದಿನದ ಹಿಂದೆ ಕಂಕನಾಡಿಯ ಒಂದೇ ಜುವೆಲ್ಲರಿಯಲ್ಲಿ ಕೆಲಸ ಮಾಡುತ್ತಿದ್ದು, ಹಿಂದು ಯುವತಿ ಜತೆ ಆತ್ಮೀಯನಾಗಿದ್ದನೆಂಬ ಕಾರಣಕ್ಕಾಗಿ ಮುಸ್ಲಿಂ ಯವಕನ ಮೇಲೆ ಹಲ್ಲೆ ನಡೆಸಲಾಗಿತ್ತು. ಯುವತಿಯ ಮನೆಯವರು ಆತನಿಗೆ ಎಚ್ಚರಿಕೆ ನೀಡಲು ಜುವೆಲ್ಲರಿಗೆ ಬಂದಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ಬಜರಂಗ ದಳ ಕಾರ್ಯಕರ್ತರು ಅಲ್ಲಿಗೆ ಧಾವಿಸಿ ಧರ್ಮದೇಟು ನೀಡಿದ್ದರು.