Saturday, January 25, 2025
ಸುದ್ದಿ

ರಾಜ್ಯಮಟ್ಟದ “ಅಕ್ಷರ ಸಿರಿ ಪ್ರಶಸ್ತಿ” ಪಡೆದಿರುವ ದೈಹಿಕ ಶಿಕ್ಷಕ ಪ್ರಶಾಂತ್ ಪೂಜಾರಿ ಬಂದಾರು ಒಕ್ಕೂಟ ಹಾಗೂ ಬಂದಾರು ಜನಜಾಗೃತಿ ಗ್ರಾಮ ಸಮಿತಿ ವತಿಯಿಂದ ಸನ್ಮಾನ -ಕಹಳೆ ನ್ಯೂಸ್

ಬಂದಾರು: ರಾಜ್ಯಮಟ್ಟದ ಅಕ್ಷರ ಸಿರಿ ಪ್ರಶಸ್ತಿ ಪಡೆದಿರುವ ಬಂದಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕರಾದ ಶ್ರೀ ಪ್ರಶಾಂತ್ ಪೂಜಾರಿ ಇವರನ್ನು ಬಂದಾರು ಒಕ್ಕೂಟ ಹಾಗೂ ಬಂದಾರು ಜನಜಾಗೃತಿ ಗ್ರಾಮ ಸಮಿತಿ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಪ್ರೇಮ, ಜನಜಾಗೃತಿ ವೇದಿಕೆ ವಲಯಾಧ್ಯಕ್ಷ ರಾದ ಶ್ರೀ ರುಕ್ಮಯ ಪೂಜಾರಿ, ಮೈರೋಳ್ತಡ್ಕ.ಬಂದಾರು ಒಕ್ಕೂಟ ಅಧ್ಯಕ್ಷರಾದ ಶ್ರೀಮತಿ ಶ್ರೀಲತಾ,ಮೈರೋಳ್ತಡ್ಕ ಒಕ್ಕೂಟ ಅಧ್ಯಕ್ಷರಾದ ಶ್ರೀ ಕೃಷ್ಣಯ್ಯ ಆಚಾರ್ಯ,ಬಂದಾರು ಸೇವಾಪ್ರತಿನಿಧಿ ನಿರಂಜನ್ ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.