Friday, January 24, 2025
ಸುದ್ದಿ

ಬೆಳಾಲಿನ ಮಾಯ ಶ್ರೀ ಮಹಾದೇವ ದೇವಸ್ಥಾನದ ವಠಾರದಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಸಭೆ ಸಂಪನ್ನ..! –ಕಹಳೆ ನ್ಯೂಸ್

ಬೆಳ್ತಂಗಡಿ : ಬೆಳಾಲು ಮಾಯದ ಮಹಾದೇವ ದೇವಸ್ಥಾನದ ವಠಾರದಲ್ಲಿ ಡಿ.11 ರಂದು ಹಿಂದೂ ರಾಷ್ಟ್ರ ಜಾಗೃತಿ ಸಭೆಯನ್ನು ನಡೆಸಲಾಯಿತು. ಸಭೆಯ ವಕ್ತಾರರಾಗಿ ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡ, ಹಿಂದೂ ಜನಜಾಗೃತಿ ಸಮಿತಿಯ ಸೌ. ಪವಿತ್ರ ಕುಡ್ವ, ಹಿಂದೂ ಜಾಗರಣ ವೇದಿಕೆಯ ಶ್ರೀ. ಗಣರಾಜ ಭಟ್, ಹಾಗೂ ಮಾಯಮಹಾದೇವ ದೇವಸ್ಥಾನದ ವ್ಯವಸ್ಥಾಪಕರು ಶ್ರೀ. ಶೇಖರ ಗೌಡ ಕೊಲ್ಲಿಮಾರು ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಿಂದೂ ಜಾಗರಣ ವೇದಿಕೆ ಮಾತೃ ಸುರಕ್ಷಾ ಪ್ರಮುಖ್ ಶ್ರೀ. ಗಣರಾಜ್ ಭಟ್ ಕೆದಿಲ ಇವರು ಮಾತನಾಡುತ್ತ ಮತಾಂದರು ಹಿಂದೂ ಹೆಣ್ಣು ಮಕ್ಕಳಿಗೆ ಪ್ರೀತಿಯ ನಾಟಕವಾಡಿ ಅವರ ದೇಹ ಸೌಂದರ್ಯವನ್ನು ವರ್ಣಿಸುವುದರೊಂದಿಗೆ ಅವರ ನಗ್ನ ಫೋಟೋವನ್ನು ಕೇಳಿ ಪಡೆದುಕೊಂಡು ಅದನ್ನು ದುರುಪಯೋಗಕ್ಕೆ ಬಳಸಿಕೊಂಡು ಬ್ಲಾಕ್ ಮೇಲ್ ಮಾಡುವುದರ ಮೂಲಕ ಹಿಂದೂ ಹುಡುಗಿಯರ ಜೀವನದಲ್ಲಿ ಆಟವಾಡುತ್ತಾ ಲವ್ ಜಿಹಾದ್ ನ ಷಡ್ಯಂತ್ರಕ್ಕೆ ಸಿಲುಕಿಸುತ್ತಾರೆ.ಆದುದರಿಂದ ನಮ್ಮ ಸ್ತ್ರೀಯರಿಗೆ ಹಿಂದೂ ಧರ್ಮದ ಮಹತ್ವವನ್ನು ತಿಳಿಸಿಕೊಡುವುದು ಅತ್ಯಂತ ಅವಶ್ಯಕ ಇದೆ ಎಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಸನಾತನ ಸಂಸ್ಥೆಯ ಶ್ರೀ. ಆನಂದ ಗೌಡರವರು ಮಾತನಾಡುತ್ತ ಹಿಂದುಗಳು ಧರ್ಮ ಶಿಕ್ಷಣದ ಅಭಾವದಿಂದಾಗಿ ಆತ್ಮಬಲವನ್ನು ವೃದ್ಧಿಮಾಡುವಲ್ಲಿ ವಂಚಿತರಾಗಿ ವೈಯಕ್ತಿಕ ಜೀವನದಲ್ಲಿ ಮತ್ತು ರಾಷ್ಟ್ರೀಯ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದಕ್ಕೆ ಪರಿಹಾರೋಪಾಯವಾಗಿ ಪ್ರತಿಯೊಬ್ಬ ಹಿಂದೂಗಳು ಧಾರ್ಮಿಕ ಶಿಕ್ಷಣ ಪಡೆದುಕೊಂಡು ಯೋಗ್ಯ ಧರ್ಮಚರಣೆಯನ್ನು ಮಾಡಬೇಕು ಎಂದು ತಿಳಿಸಿದರು.

ಹಿಂದೂ ಜನಜಾಗೃತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದಂತಹ ಸೌ. ಪವಿತ್ರ ಕುಡ್ವರವರು ಮಾತನಾಡುತ್ತಾ ಇಂದು ಹಲಾಲ್ ಜಿಹಾದ್ ಮೂಲಕ ಭಾರತದ ಎಲ್ಲ ಕ್ಷೇತ್ರದ ಮಾರುಕಟ್ಟೆಯ ಮೇಲೆ ಹಿಡಿತ ಸಾಧಿಸಿ ಭಾರತವನ್ನು ಇಸ್ಲಾಮಿಕರಣ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ. ಇಷ್ಟೆ ಅಲ್ಲದೆ ಲವ್ ಜಿಹಾದ್, ಉಗುಳು ಜಿಹಾದ್, ಲ್ಯಾಂಡ್ ಜಿಹಾದ್ ಹೀಗೆ ಹಲವಾರು ಜಿಹಾದ್ ಗಳ ಮೂಲಕ ಭಾರತವನ್ನು ಇಸ್ಲಾಮಿಕರಣ ಮಾಡುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳಿಗೆ ಒಂದೇ ಪರಿಹಾರ ಹಿಂದೂ ರಾಷ್ಟ್ರ ಅದಕ್ಕಾಗಿ ನಾವೆಲ್ಲರೂ ಕಟ್ಟಿಬದ್ದರಾಗೋಣ ಎಂದು ಕರೆ ನೀಡಿದರು.