Sunday, January 26, 2025
ಸುದ್ದಿ

ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ), ವ್ಯವಹಾರ ನಿರ್ವಾಹಣಾ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ಸಮರ್ಥ-2022 ಕಾರ್ಯಾಗಾರ – ಕಹಳೆ ನ್ಯೂಸ್

ಪುತ್ತೂರು : ವಿದ್ಯಾರ್ಥಿಗಳ ಮುಂದಿನ ಜೀವನ ಉಜ್ವಲವಾಗಿ ಬೆಳಗಬೇಕಾದರೆ ಜೀವನದಲ್ಲಿ ಕಠಿಣ ಪರಿಶ್ರಮ ಬಹುಮುಖ್ಯವಾಗಿರುತ್ತದೆ. ಪ್ರತಿಯೊಬ್ಬರು ಮಾತನಾಡುವ ಸದಾವಕಾಶಕ್ಕಾಗಿ ಹಂಬಲಿಸುತ್ತಾರೆ.ನೀವು ಒಬ್ಬ ಉತ್ತಮ ಸಂವಹನಕಾರ ಆಗಬೇಕಾದರೆ ಮೊದಲು ನೀವು ಉತ್ತಮ ಕೇಳುಗನೂ ಆಗಿರಬೇಕು. ಜೊತೆಗೆ ಮಾತಿನ ಕೌಶಲ್ಯವನ್ನು ಬೆಳೆಸಿಕೊಳ್ಳ ಬೇಕಾದರೆ ಹಿರಿಯರು ನೀಡುವ ಸಲಹೆ ಸೂಚನೆಯನ್ನು ಮನದಲ್ಲಿಟ್ಟುಕೊಂಡು ಆಂತಹ ವಿಷಯಗಳನ್ನೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪುತ್ತೂರಿನ ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ಸಂಚಾಲಕ ಭರತ್ ಪೈ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರಿನ ವಿವೇಕಾನಂದ ಪದವಿ ಕಾಲೇಜು (ಸ್ವಾಯತ್ತ), ವ್ಯವಹಾರ ನಿರ್ವಾಹಣಾ ವಿಭಾಗ ಮತ್ತು ಐಕ್ಯೂಎಸಿ ಘಟಕದ ಆಶ್ರಯದಲ್ಲಿ ನಡೆದ ಸಮರ್ಥ-2022 ಎನ್ನುವ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಷ್ಣು ಗಣಪತಿ ಭಟ್, ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಬೇಕಾದರೆ ವಿದ್ಯಾರ್ಥಿ ಜೀವನದಲ್ಲಿಯೇ ನೀವು ಕಷ್ಟಪಡಬೇಕು. ಈ ಘಟ್ಟದಲ್ಲಿ ಪರಿಶ್ರಮ ಪಟ್ಟರೇ ಮಾತ್ರ ಮುಂದಿನ ಜೀವನದಲ್ಲಿ ಒಂದೊಳ್ಳೆಯ ಅವಕಾಶವನ್ನು ಪಡೆದುಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ವ್ಯವಹಾರ ನಿರ್ವಹಣಾ ವಿಭಾಗದ ಪ್ರಬಂಧನ್ ಎನ್ನುವ ಬ್ಲಾಗ್ ಪೇಜನ್ನು ಕಾರ್ಯಕ್ರಮದ ಉದ್ಘಾಟಕ ಭರತ್ ಪೈ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಡಾ ಶ್ರೀಶ ಕುಮಾರ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಲಾವಣ್ಯಾ, ಸಾಹಿತ್ಯ, ಶುಭದಾ ಪ್ರಾರ್ಥಿಸಿ, ವ್ಯವಹಾರ ನಿರ್ವಹಣಾ ಶಾಸ್ತ್ರ ವಿಭಾಗದ ಮುಖ್ಯಸ್ಥೆ ರೇಖಾ.ಪಿ. ಸ್ವಾಗತಿಸಿದರು. ವ್ಯವಹಾರ ನಿರ್ವಹಣಾ ಶಾಸ್ತ್ರದ ಉಪನ್ಯಾಸಕ ಕಿಶನ್ ರಾವ್ ವಂದಿಸಿ, ವಿದ್ಯಾರ್ಥಿನಿ ಚಿತ್ರಾ ನಿರೂಪಿಸಿದರು.