Wednesday, January 22, 2025
ಸುದ್ದಿ

ಮೀನಕಳಿಯ ಕೋಡಿಕಲ್ ರಾಮ ಭಜನಾ ಮಂದಿರದ ಸಮಾಜಭವನದಲ್ಲಿ ಯುವಕ ಯುವತಿಯರಿಗೆ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಧರ್ಮ ಶಿಕ್ಷಣ ಅಭಿಯಾನ

ಮೀನಕಳಿಯ ಕೋಡಿಕಲ್ ರಾಮ ಭಜನಾ ಮಂದಿರದ ಸಮಾಜಭವನದಲ್ಲಿ ಯುವಕ ಯುವತಿಯರಿಗೆ ಧರ್ಮ ಜಾಗೃತಿ ಮೂಡಿಸುವ ಸಲುವಾಗಿ ಧರ್ಮ ಶಿಕ್ಷಣ ಅಭಿಯಾನವನ್ನು ಮಂಗಳೂರು ನಗರ ಉತ್ತರ ಕ್ಷೇತ್ರದ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಯವರು ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಆ ಬಳಿಕ ಮಾತನಾಡಿ ಸನಾತನ ಧರ್ಮದ ಮೇಲೆ ಆಗುವ ದಾಳಿಯನ್ನು ತಡೆಗಟ್ಟಲು ಇಂತಹ ಅಭಿಯಾನ ಮಾಡಿದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಶ್ರೀ ಶ್ರೀ ಈಶ ವಿಠಲ ದಾಸ ಸ್ವಾಮಿಜಿಯವರು ಆಶೀರ್ವಚನ ನೀಡಿದರು.

ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಕಾರ್ಯದರ್ಶಿ ಶ್ರೀ ಶಿವಾನಂದ ಮೆಂಡನ್, ಪ್ರಾಂತ ಮಾತೃಶಕ್ತಿ ಸಹ ಪ್ರಮುಖರಾದ ಶ್ರೀಮತಿ ಸುರೇಖಾ ರಾಜ್, ಹಿಂದೂ ಪರಿಷತ್ ಸುರತ್ಕಲ್ ಪ್ರಖಂಡ ಕಾರ್ಯದರ್ಶಿ ಜಯರಾಂ ಆಚಾರ್ಯ, ಸ್ಥಳೀಯ ಕಾರ್ಪೊರೇಟರಗಳಾದ ಕುಮಾರಿ ಸುಮಿತ್ರ ಕರಿಯ ಮತ್ತು ಶ್ರೀ ರಾಜೇಶ್ ಸಾಲಿಯಾನ್ ಬೈಕಂಪಾಡಿ, ಮಹಿಳಾ ಮಂಡಳಿ ಕುಳಾಯಿ ಅಧ್ಯಕ್ಷೆ ಭಾರತಿ ಗಂಗಾಧರ, ಬೈಕಂಪಾಡಿ ಮಹಿಳಾ ಸಭಾದ ಅಧ್ಯಕ್ಷೆ ರತ್ನಾವತಿ ರಘುನಾಥ್, ತಣ್ಣೀರುಬಾವಿ ಮಹಿಳಾ ಮಂಡಳಿ ಕಾರ್ಯದರ್ಶಿ ಮೀನಾಕ್ಷಿ ಆರ್ ಕಾಂಚನ್ ಮತ್ತು ಕೋಡಿಕಲ್ ಮಹಿಳಾ ಮಂಡಳಿ ಅಧ್ಯಕ್ಷೆ ಮಾಲಿನಿ ಮೋಹನ್ ಕೋಡಿಕಲ್, ಕೋಡಿಕಲ್ ಮೊಗವೀರ ಮಹಾಸಭಾ ಅಧ್ಯಕ್ಷ ಲಕ್ಷ್ಮಣ್ ಅಮೀನ್ ಕೋಡಿಕಲ್, ಮೋಹನ್ ಕೋಡಿಕಲ್, ಶಶಿಧರ ಕೋಡಿಕಲ್, ಸಭೆಯಲ್ಲಿ ಮಂಗಳೂರು ಏಳು ಪಟ್ನಾ ಮೊಗವೀರ ಸಂಯುಕ್ತಾ ಸಭೆಯ ಅದ್ಯಕ್ಷರಾದ ಗೌತಮ್ ಸಾಲಿಯಾನ್, ರಾಮಚಂದ್ರ ಬೈಕಂಪಾಡಿ, ಬೈಕಂಪಾಡಿ ಮೊಗವೀರ ಸಭಾದ ಅಧ್ಯಕ್ಷ ವಸಂತ ಅಮೀನ್, ಮಂಗಳೂರು 14 ಪಟ್ನಾ ಮೊಗವೀರ ಸಂಯುಕ್ತ ಸಭೆಯ ಮಾಜಿ ಅಧ್ಯಕ್ಷ ರಾಜೀವ್ ಕಾಂಚನ್ ತಣ್ಣೀರುಬಾವಿ, ಹೊಸಬೆಟ್ಟು ಮೊಗವೀರ ಸಂಘದ ಕಾರ್ಯದರ್ಶಿ ಯೋಗೀಶ್ ಕರ್ಕೇರಾ, ಮೊಗವೀರ ಸಭೆಯ ಮಾಜಿ ಅಧ್ಯಕ್ಷ ಸೋಮನಾಥ್ ಪಾಂಗಳ ಕೊಡಿಕಲು ಗ್ರಾಮ ಸಭೆಯ ಗುರಿಕಾರರಾದ ರವಿ ಗುರಿಕಾರ ಹಾಗೂ ಭಾಸ್ಕರ್ ಪಾಂಗಾಲ್, ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಅನೇಕ ಮಂದಿ ಹಿರಿಯ ಕಾರ್ಯಕರ್ತರು ಉಪಸ್ಥಿತರಿದ್ದರು.