Wednesday, January 22, 2025
ಕ್ರೈಮ್ದಕ್ಷಿಣ ಕನ್ನಡಸುದ್ದಿಸುಳ್ಯ

ಹದಿಹರೆಯದ ಯುವತಿಯೊಂದಿಗೆ ಸುಳ್ಯದ ಲಾಡ್ಜ್ ನಲ್ಲಿ ಮಾಜಾ ಮಡುತ್ತಿದ್ದ ರಸಿಕ ಪತಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದ ಪತ್ನಿ ; ಸ್ಥಳಕ್ಕೆ ಸುಳ್ಯ ಪೊಲೀಸರು..! – ಕಹಳೆ ನ್ಯೂಸ್

ಸುಳ್ಯ, ಡಿ 12 : ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಬೇರೆ ಯುವತಿಯೊಂದಿಗೆ ಸುಳ್ಯದ ಗಾಂಧಿನಗರ ಲಾಡ್ಡಿಗೆ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಸುಳ್ಯಕ್ಕೆ ಬಂದು ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಯನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ.ಇನ್ನು ಇವರು ಬರುವುದನ್ನು ಕಾಯುತ್ತಿದ್ದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಳ್ಳತೊಡಗಿದ್ದಾರೆ. ಬೊಬ್ಬೆ ಕೇಳಿ ನೂರಾರು ಜನ ಜಮಾಯಿಸಿದರು. ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ. ಪತಿಯನ್ನು ಮತ್ತು ಆ ಯುವತಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ ಮಹಿಳೆ ಆ ಯುವತಿಯನ್ನು ಹಿಡಿದು ನಿಲ್ಲಿಸಿ ತನ್ನ ಕೋಪವನ್ನು ಹೊರ ಹಾಕುತ್ತಿದ್ದರು. ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.