ಡಿ.17 ಮತ್ತು 18 ರಂದು ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ 3ನೇಯ ವರುಷದ “ಪುತ್ತೂರು ಕಪ್” ಕ್ರಿಕೆಟ್ ಪಂದ್ಯಾಟ – ಕಹಳೆ ನ್ಯೂಸ್
ಪುತ್ತೂರು: ‘ಸಿಟಿ ಗೈಯ್ಸ್’ ಪ್ರಸ್ತುತ ಪಡಿಸುವ ಕ್ರಿಕೆಟ್ ಪ್ರೇಮಿಗಳ ಮತ್ತು ಆಟಗಾರರ ಹಬ್ಬ ‘ಅಂಡರ್ ಆರ್ಮ್ ಕ್ರಿಕೆಟ್ ಟೂರ್ನಮೆಂಟ್’ “ಪುತ್ತೂರು ಕಪ್-2022” ಡಿ.17 ಮತ್ತು 18 ರಂದು ನಡೆಯಲಿದೆ.
ಡಿ.17 ಮತ್ತು 18 ರಂದು ಪುತ್ತೂರಿನ ಕೊಂಬೆಟ್ಟು ಜೂನಿಯರ್ ಕಾಲೇಜಿನ ಕ್ರೀಡಾಂಗಣದಲ್ಲಿ 3ನೇಯ ವರುಷದ “ಪುತ್ತೂರು ಕಪ್” ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ವಿನೂತನ ಪರಿಕಲ್ಪನೆಯೊಂದಿಗೆ ಕ್ರಿಕೆಟ್ ಹಬ್ಬ ಆಯೋಜಿಸಲಾಗಿದ್ದು, ಹತ್ತೂರಿನ ಕ್ರಿಕೆಟ್ ಪ್ರೇಮಿಗಳನ್ನು ಪುತ್ತೂರಿಗೆ ಆಕರ್ಷಿಸುವಂತೆ ಮಾಡಿದೆ.
‘ಪುತ್ತೂರು ಕಪ್’ ಕ್ರಿಕೆಟ್ ಪಂದ್ಯಾಟವು ಪುತ್ತೂರಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ಹೊಸ ಭಾಷ್ಯ ಬರೆಯಲಿದೆ. ಪಂದ್ಯಾಟದಲ್ಲಿ ಹಲವು ತಂಡಗಳ ಹಣಾಹಣಿ ಕ್ರಿಕೆಟ್ ಪ್ರಿಯರ ಇನ್ನಷ್ಟು ಮನರಂಜನೆ ನೀಡಲಿದೆ.
ವಿಜೇತರಿಗೆ ಪ್ರಥಮ ಬಹುಮಾನವಾಗಿ 70,000 ರೂ. ಮತ್ತು ಪುತ್ತೂರು ಕಪ್ ಹಾಗೂ ದ್ವಿತೀಯ ಬಹುಮಾನವಾಗಿ 30,000 ರೂ. ಮತ್ತು ಪುತ್ತೂರು ಕಪ್ ಹಾಗೂ ಇತರ ವೈಯಕ್ತಿಕ ಬಹುಮಾನಗಳು ದೊರೆಯಲಿದೆ.
ವಿಶೇಷ ಮೆರುಗು ಎಂಬಂತೆ ಪಂದ್ಯಾಟಕ್ಕೆ ಹಲವು ಗಣ್ಯರು ಆಗಮಿಸಲಿದ್ದಾರೆ.
ಮಂಗಳೂರು, ಪುತ್ತೂರು, ವಿಟ್ಲ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಲಿವೆ..
ಶನಿವಾರ 17 ರಂದು ದಕ್ಷಿಣ ಕನ್ನಡ ಜಿಲ್ಲೆಯ 8 ತಂಡಗಳು ಭಾಗವಹಿಸಲಿದ್ದು .. 18 ರಂದು ಭಾನುವಾರ ಪುತ್ತೂರು ತಾಲೂಕಿನ ಗ್ರಾಮಗಳ ತಂಡಗಳು ಭಾಗವಹಿಸಲಿವೆ. ಪಂದ್ಯಾಟದಲ್ಲಿ ಲೆಗ್ ಸ್ಪಿನ್ ಗೆ ಮಾತ್ರ ಅವಕಾಶ ನೀಡಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7892570932 ಅನ್ನು ಸಂಪರ್ಕಿಸಬಹುದಾಗಿದೆ..