ಮಂಗಳೂರು: ನಗರದ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ದೃಷ್ಟಿ ಇಲ್ಲದವರ ಸಹಾಯಕ್ಕಾಗಿ ವಿಭಿನ್ನ ಸಾಮರ್ಥ್ಯದ ಕನ್ನಡಕವೊಂದನ್ನು ತಯಾರಿಸಿದ್ದಾರೆ.
ಕಣ್ಣಿಲ್ಲದೇ ಇರುವ ಸ್ಥಿತಿಯನ್ನು ಊಹಿಸಲೂ ಸಾಧ್ಯವಿಲ್ಲ. ಕಣ್ಣು ಕಾಣದವರಿಗೆ ದೃಷ್ಟಿ ತೋರುವಂತಾಗಲು ವೈದ್ಯರು ಏನೆಲ್ಲ ಕಸರತ್ತು ನಡೆಸುತ್ತಾರೆ. ಈ ಮಧ್ಯೆ ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಕಾಲೇಜಿನ ಸಂಶೋಧನಾ ವಿಭಾಗದ ವಿದ್ಯಾರ್ಥಿಗಳು ಒಂದು ನೂತನ ಪ್ರಯತ್ನ ಮಾಡಿದ್ದಾರೆ.
ಎಲ್‍ಇಡಿ ಬೆಳಕನ್ನು ಆಧರಿಸಿ ಕಾರ್ಯ ನಿರ್ವಹಿಸುವ ಈ ಕನ್ನಡಕ, ಕಟ್ಟಡದ ಒಳಭಾಗದಲ್ಲಿ ಸಂಚರಿಸಲು ಕನ್ನಡಕ ಧರಿಸಿದ ವ್ಯಕ್ತಿಗೆ ಸೂಚನೆಗಳನ್ನು ನೀಡುತ್ತದೆ. ಸಂಪೂರ್ಣ ಆಟೋಮ್ಯಾಟಿಕ್ ಆಗಿರುವ ಈ ಉಪಕರಣ ಈಯರ್ ಫೋನ್ ಹೊಂದಿದ್ದು, ಧರಿಸಿದ ವ್ಯಕ್ತಿಗೆ ಸಂಚರಿಸುವ ಸಂದರ್ಭದಲ್ಲಿ ಎದುರಾಗುವ ಅಡೆತಡೆಗಳ ಬಗ್ಗೆ ಸೂಚನೆ ನೀಡುತ್ತದೆ.
ಸೂಚನೆ ಆಧಾರದಲ್ಲಿ ದೃಷ್ಟಿ ಹೀನ ವ್ಯಕ್ತಿ ಕಚೇರಿ ಇನ್ನಿತರ ಪ್ರದೇಶಗಳಲ್ಲಿ ಇತರೇ ವ್ಯಕ್ತಿಗಳ ನೆರವಿಲ್ಲದೆ ಓಡಾಡಬಹುದಾಗಿದೆ. ಸುಧಾರಣೆ ಹಂತದಲ್ಲಿರುವ ಈ ಕನ್ನಡಕ ದೃಷ್ಟಿಹೀನರಿಗೆ ಹೊಸ ರೀತಿಯ ಅನುಭವ ನೀಡಲಿದೆ ಅಂತ ಕಾಲೇಜಿನ ಶಿಕ್ಷಕರು ಹೇಳಿದ್ದಾರೆ.