Friday, January 24, 2025
ಸುದ್ದಿ

Shocking News : ದಾಖಲೆಯ ಮೊತ್ತಕ್ಕೆ ಹರಾಜಾಯ್ತು ಹಳೆಯ ಜೀನ್ಸ್​ ಪ್ಯಾಂಟ್…! – ಕಹಳೆ ನ್ಯೂಸ್

ನ್ಯೂಯಾರ್ಕ್ : ಅಚ್ಚರಿಯಾದರೂ ಸತ್ಯ..! ಈ ಜೀನ್ಸ್​ ಪ್ಯಾಂಟ್ ಬರೋಬ್ಬರಿ 94 ಲಕ್ಷ ರೂಪಾಯಿಗೆ ಹರಾಜಾಗಿದೆ. ಅರ್ರೇ, ಇಷ್ಟೊಂದು ಹಳೆಯ ಜೀನ್ಸ್​ ಪ್ಯಾಂಟ್​ಗೆ ಇಷ್ಟೊಂದು ಬೆಲೆಯಾ ಎಂದರೆ ಪ್ರಶ್ನಿಸಿದರೆ, ಇದಕ್ಕೆ ಉತ್ತರ ಇದು ವಿಶ್ವದ ಅತ್ಯಂತ ಹಳೆಯ ಜೀನ್ಸ್​ ಪ್ಯಾಂಟ್.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಾರ್ತ್​ ಕೆರೋಲಿನಾ ಕರಾವಳಿಯಲ್ಲಿ 1857ರಲ್ಲಿ ಹಡಗೊಂದು ಧ್ವಂಸವಾಗಿ ಸಮುದ್ರ ಪಾಲಾಗಿತ್ತು. ಅನೇಕ ವರ್ಷಗಳ ನಂತರ ಹಡಗನ್ನು ಮೇಲೆಳೆದಾಗ ಜೀನ್ಸ್​ ಪ್ಯಾಂಟೊಂದು ಸಿಕ್ಕಿದೆ. ಇದನ್ನು ಪರಿಶೀಲಿಸಿದಾಗ ಇದು ಅತ್ಯಂತ ಹಳೆಯ ಜೀನ್ಸ್​ ಪ್ಯಾಂಟ್ ಎಂಬುದು ಗೊತ್ತಾಗಿದೆ.

ಬಿಳಿ ಬಣ್ಣದ ಈ ಜೀನ್ಸ್​ ಪ್ಯಾಂಟನ್ನು ರೆನೋದಲ್ಲಿ ಹರಾಜಿಗಿಡಲಾಗಿತ್ತು. ಅನೇಕರು ಈ ಜೀನ್ಸ್​ ಪ್ಯಾಂಟನ್ನು ಕೊಂಡುಕೊಳ್ಳುಲು ಬಿಡ್ ಮಾಡಿದ್ದರು. ಹೀಗಾಗಿ ಬಿಡ್ಡಿಂಗ್ ಮೊತ್ತ ಏರುತ್ತಲೇ ಹೋಯಿತು. ಕೊನೆಗೆ 94 ಲಕ್ಷ ರೂಪಾಯಿಗೆ ಪುರಾತನ ಜೀನ್ಸ್​ ಪ್ಯಾಂಟ್ ಹರಾಜಾಗಿದೆ ಎಂದು ವರದಿಯಾಗಿದೆ.

ವರದಿಯ ಪ್ರಕಾರ ವಿಶ್ವದ ಅತ್ಯಂತ ಹಳೆಯ ಮತ್ತು ಅತ್ಯಂತ ಜನಪ್ರಿಯ ಜೀನ್ಸ್​ ಪ್ಯಾಂಟ್ ತಯಾರಕ ಕಂಪೆನಿಯಾದ ಲೆವಿಸ್ಟ್ರಾಸ್​​ನಲ್ಲಿ ಇದು ತಯಾರಾಗಿದೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಚರ್ಚೆಗಳಾಗುತ್ತಿದ್ದು, ಕೆಲವರು ಇದು ಲೆವಿಸ್ಟ್ರಾಸ್​​ನಲ್ಲಿ ತಯಾರಾಗಿಲ್ಲ ಎಂದು ಹೇಳಿದ್ದಾರೆ.